ಬೆಂಗಳೂರು:ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಮಾರ್ಚ್ 24ರಿಂದ ಏಪ್ರಿಲ್ 6ರವರೆಗೆ ಹೈಕೋರ್ಟ್ ರಜೆಯಲ್ಲಿರಲಿದೆ.
ಕೊರೊನಾ ಭೀತಿ : ಹೈಕೋರ್ಟ್‌ಗೆ ಏಪ್ರಿಲ್ 6ವರೆಗೆ ರಜೆ - ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ
ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ಅವರ ಸೂಚನೆ ಮೇರೆಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಇಂದು ಸಂಜೆ ಅಧಿಸೂಚನೆ ಹೊರಡಿಸಿದ್ದು, ನಾಳೆಯಿಂದ ಏ.6ರವರೆಗೆ ಬೆಂಗಳೂರಿನ ಪ್ರಧಾನ ಪೀಠ, ಕಲಬುರಗಿ ಮತ್ತು ಧಾರವಾಡ ಸಂಚಾರಿ ಪೀಠಗಳಿಗೆ ರಜೆ ನೀಡಿರುವುದಾಗಿ ತಿಳಿಸಿದ್ದಾರೆ.

ಇನ್ನು ಈ ಅವಧಿಯಲ್ಲಿ ಮಾ.24 ಮತ್ತು 26ರಂದು ಎರಡು ದಿನ ಬೆಂಗಳೂರಿನ ಪ್ರಧಾನ ಪೀಠ ಬೆಳಗ್ಗೆ 11 ರಿಂದ ಮಧ್ಯಾಹ್ನ 12-30ರವರೆಗೆ ಮಾತ್ರ ಕಾರ್ಯ ನಿರ್ವಹಿಸಲಿದೆ. ಈ ಎರಡು ದಿನಗಳು ಅತ್ಯಂತ ತುರ್ತು ಪ್ರಕರಣಗಳನ್ನು ಮಾತ್ರ ಪೀಠ ವಿಚಾರಣೆ ನಡೆಸಲಿದೆ. ಕಲಬುರಗಿ ಮತ್ತು ಧಾರವಾಡ ಸಂಚಾರಿ ಪೀಠಗಳು ಮಾ.24ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 12 - 30ರವರೆಗೆ ಮಾತ್ರ ಕಾರ್ಯನಿರ್ವಹಿಸಲಿವೆ.