ಕರ್ನಾಟಕ

karnataka

ETV Bharat / state

ಕೊರೊನಾ ಎಫೆಕ್ಟ್ : ನಗರದಲ್ಲಿ ಪಬ್, ಕ್ಲಬ್​ಗಳು ತೆರೆಯದಂತೆ ಸರ್ಕಾರ ಆದೇಶ - ಬೆಂಗಳೂರಲ್ಲಿ ಕೊರೊನಾ ಎಫೆಕ್ಟ್

ಕೊರೊನಾ ವೈರಸ್​ ಭೀತಿ ರಾಜ್ಯಾದ್ಯಂತ ಹರಡಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಸಭೆ,ಸಮಾರಂಭಗಳನ್ನು ಒಂದು ವಾರದವರೆಗೆ ರದ್ದು ಗೊಳಿಸಲು ಆದೇಶ ಹೊರಡಿಸಿದ್ದು, ನಗರದ ಎಲ್ಲಾ ಕ್ಲಬ್ ಹಾಗೂ ಪಬ್​ಗಳ ಬಂದ್​ಗೆ ಸರ್ಕಾರ ಆದೇಶ ಹೊರಡಿಸಿದೆ.

ನಗರದಲ್ಲಿ ಪಬ್, ಕ್ಲಬ್​ಗಳು ತೆರೆಯದಂತೆ ಸರ್ಕಾರ ಆದೇಶ
govt order to close club,pub in Bangalore

By

Published : Mar 13, 2020, 7:18 PM IST

ಬೆಂಗಳೂರು: ಮಹಾಮಾರಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ‌ ನಗರದ ಎಲ್ಲಾ ಕ್ಲಬ್ ಹಾಗೂ ಪಬ್​ಗಳ ಬಂದ್​ಗೆ ಸರ್ಕಾರ ಆದೇಶ ಹೊರಡಿಸಿದೆ.

ಜನ ಸೇರುವಂತಹ ಎಲ್ಲಾ ಸಭೆ,ಸಮಾರಂಭ ರದ್ದುಗೊಳಿಸಿ ಒಂದು ವಾರ ಯಾವುದೇ ಕಾರ್ಯಕ್ರಮ ಮಾಡದಂತೆ ಬಂದ್ ಮಾಡಲು ಆದೇಶ ಹೊರಡಿಸಿದ್ದು, ಇಂದು ಸಂಜೆಯಿಂದಲೇ ಆದೇಶ ಜಾರಿಗೆ ಬರುವ ಸಾಧ್ಯತೆಯಿದೆ. ಪ್ರಮುಖವಾಗಿ ಎಂ.ಜಿ.ರಸ್ತೆ, ಬಿಗ್ರೇಡ್ ರೋಡ್, ಚರ್ಚ್ ಸ್ಟ್ರೀಟ್, ಕೋರಮಂಗಲ, ಇಂದಿರಾನಗರ ಸೇರಿದಂತೆ ರಾಜಧಾನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಬ್, ಕ್ಲಬ್​ಗಳು ಬಂದ್ ಮಾಡುವ ಸಾಧ್ಯತೆಯಿದೆ.

ಈಗಾಗಲೇ ತೆರೆದಿರುವ ಐಷರಾಮಿ ಬಾರ್​ಗಳು ಮುಚ್ಚಲು ಸಿದ್ಧತೆ ನಡೆಸುತ್ತಿದ್ದು, ಕೆಲವೆಡೆ ಸ್ವಯಂಪ್ರೇರಿತವಾಗಿ ಕ್ಲಬ್​​, ಪಬ್​ ಮಾಲೀಕರು ವಹಿವಾಟು ಸ್ಥಗಿತಗೊಳಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details