ಬೆಂಗಳೂರು :ಲಾಕ್ಡೌನ್ ವೇಳೆ ಕೋಳಿ, ಮೊಟ್ಟೆ, ಮೀನು ಸೇರಿದಂತೆ ಇತರೆ ಪ್ರಾಣಿಗಳ ಸಾಕಾಣಿಕೆಯಲ್ಲಿ ಬಳಕೆಯಾಗುವ ಆಹಾರ, ಮೇವು ಮುಂತಾದವುಗಳ ಸಾಗಾಣಿಕೆಗೆ ನಿರ್ಬಂಧ ರದ್ದುಗೊಳಿಸಿ ರಾಜ್ಯ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಎ.ಬಿ.ಇಬ್ರಾಹಿಂ ಆದೇಶ ಹೊರಡಿಸಿದ್ದಾರೆ.
ಪಶು ಸಂಗೋಪನಾ ವಸ್ತುಗಳ ಸಾಗಾಣಿಕೆ ನಿರ್ಬಂಧ ರದ್ದುಗೊಳಿಸಿ ಸರ್ಕಾರ ಆದೇಶ - ಬೆಂಗಳೂರಲ್ಲಿ ಕೊರೊನಾ ಎಫೆಕ್ಟ್
ಲಾಕ್ಡೌನ್ ಹಿನ್ನೆಲೆಯಲ್ಲಿ ರಾಜ್ಯದ ಗಡಿಗಳು ಮತ್ತು ಊರೊಳಗೆ ಕೋಳಿ, ಕುರಿ, ಪಶು ಸಂಗೋಪನೆಗೆ ಸಂಬಂಧಿಸಿದ ವಸ್ತುಗಳ ಸಾಗಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ ಈ ನಿರ್ಬಂಧ ರದ್ದು ಮಾಡಿ ರಾಜ್ಯ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಎ.ಬಿ.ಇಬ್ರಾಹಿಂ ಆದೇಶ ಹೊರಡಿಸಿದ್ದಾರೆ.
![ಪಶು ಸಂಗೋಪನಾ ವಸ್ತುಗಳ ಸಾಗಾಣಿಕೆ ನಿರ್ಬಂಧ ರದ್ದುಗೊಳಿಸಿ ಸರ್ಕಾರ ಆದೇಶ govt cancelled hence,sheeps transport order](https://etvbharatimages.akamaized.net/etvbharat/prod-images/768-512-6570802-thumbnail-3x2-chama.jpg)
: ಊರೊಳಗೆ ಕುರಿ ,ಕೋಳಿ ಸಾಗಾಟಕ್ಕೆ ನಿರ್ಬಂಧ ರದ್ದು ಮಾಡಿ ಆದೇಶ
ಪಶುಸಂಗೋಪನೆಗೆ ಸಂಬಂಧಪಟ್ಟ ವಸ್ತುಗಳ ಸಾಗಾಣಿಕೆಗೆ ಅನುಕೂಲ ಮಾಡಿ ಕೊಡಲು ಸರ್ಕಾರ ನಿರ್ಧರಿಸಿದೆ.