ಕರ್ನಾಟಕ

karnataka

ETV Bharat / state

ಕೊರೊನಾ ಎಫೆಕ್ಟ್.. ಸಿಲಿಕಾನ್ ಸಿಟಿಯಲ್ಲಿ ಎಲ್ಲೆಡೆ ಕಾಣಿಸ್ತಿವೆ ಬ್ಯಾರಿಕೇಡ್... - 144 ಸೆಕ್ಷನ್ ಜಾರಿ

ಸ್ಟೇಷನ್‌ನಲ್ಲಿರುವ ಕಳಪೆ ಗುಣಮಟ್ಟ ಹಾಗೂ ಧೂಳು ಹಿಡಿದಿರುವ ಸಾವಿರಕ್ಕೂ ಹೆಚ್ಚು ಬ್ಯಾರಿಕೇಡ್​ಗಳು ರಸ್ತೆಗಳಲ್ಲಿ ರಾರಾಜಿಸ್ತಿವೆ. ಅಲ್ಲದೇ ಇವು ಕಡಿಮೆಯಾದ ಕಾರಣ ಕಲ್ಲು, ಮರದ ತುಂಡುಗಳನ್ನ ರಸ್ತೆಗಳಲ್ಲಿ ಅಳವಡಿಸಿ ವಾಹನಗಳ ಓಡಾಟಕ್ಕೆ‌ ಕಡಿವಾಣ ಹಾಕೋಕೆ ರೆಡಿ ಮಾಡಿದ್ದಾರೆ.

Barricade everywhere in Silicon City
ಸಿಲಿಕಾನ್ ಸಿಟಿಯ ಎಲ್ಲೆಡೆ ರಾರಾಜಿಸ್ತಿದೆ ಬ್ಯಾರಿಕೇಡ್

By

Published : Apr 3, 2020, 2:09 PM IST

ಬೆಂಗಳೂರು :ಕೊರೊನಾ ವೈರಾಣು ಹರಡುವಿಕೆ ತಡೆಗೆ ಲಾಕ್‌ಡೌನ್ ಒಂದೆಡೆಯಾದ್ರೆ, ಮತ್ತೊಂದೆಡೆ‌ 144 ಸೆಕ್ಷನ್ ಜಾರಿಯಲ್ಲಿರುವ ಕಾರಣ ಸಿಲಿಕಾನ್ ಸಿಟಿಯಲ್ಲಿ ಬಹುತೇಕ ಕಡೆ ಜನರ ಓಡಾಟ ಸ್ತಬ್ಧವಾಗಿದೆ. ಆದರೆ, ಸಿಲಿಕಾನ್ ಸಿಟಿಯ ನಡು ರಸ್ತೆಗಳಲ್ಲಿ, ಪ್ರಮುಖ ಜಂಕ್ಷನ್‌ಗಳಲ್ಲಿ ವಿನಾಕಾರಣ ಓಡಾಟ ಮಾಡುವ ವಾಹನ ಸವಾರರನ್ನ ತಡೆಯಲು ಬ್ಯಾರಿಕೇಡ್ ಹಾಗೂ ಅಡ್ಡಲಾಗಿ ಕಲ್ಲಿಟ್ಟು ಚೆಕ್‌ಪೋಸ್ಟ್ ನಿರ್ಮಿಸಿ ಪ್ರತಿ ವಾಹನಗಳ ಚೆಕ್ಕಿಂಗ್ ಮಾಡ್ತಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಎಲ್ಲೆಡೆ ರಾರಾಜಿಸ್ತಿವೆ ಬ್ಯಾರಿಕೇಡ್‌ಗಳು..
ಸಿಲಿಕಾನ್ ಸಿಟಿಯ ಆಯಾ ಠಾಣಾ ವ್ಯಾಪ್ತಿಯ ಬ್ಯಾರಿಕೇಡ್​​ಗಳನ್ನ ಕೊರೊನಾ ವೈರಸ್ ಬರುವ ಮೊದಲು ಪ್ರತಿಭಟನೆ ಸಂಧರ್ಭ ಅಥವಾ ಜಾಸ್ತಿ ಅಪಘಾತ ನಡೆಯುವ ರಸ್ತೆಗಳಲ್ಲಿ ಅಥವಾ ಪ್ರತಿಷ್ಟಿತ ರಾಜಾಕಾರಣಿಗಳು ಬರುವ ಸಂದರ್ಭದಲ್ಲಿ ಬ್ಯಾರಿಕೇಡ್ ಅಳವಡಿಸಿ ಪರಿಶೀಲನೆ ನಡೆಸಲಾಗ್ತಿತ್ತು.ಸದ್ಯ ಸ್ಟೇಷನ್‌ನಲ್ಲಿರುವ ಕಳಪೆ ಗುಣಮಟ್ಟ ಹಾಗೂ ಧೂಳು ಹಿಡಿದಿರುವ ಸಾವಿರಕ್ಕೂ ಹೆಚ್ಚು ಬ್ಯಾರಿಕೇಡ್​ಗಳು ರಸ್ತೆಗಳಲ್ಲಿ ರಾರಾಜಿಸ್ತಿವೆ. ಅಲ್ಲದೇ ಇವು ಕಡಿಮೆಯಾದ ಕಾರಣ ಕಲ್ಲು, ಮರದ ತುಂಡುಗಳನ್ನ ರಸ್ತೆಗಳಲ್ಲಿ ಅಳವಡಿಸಿ ವಾಹನಗಳ ಓಡಾಟಕ್ಕೆ‌ ಕಡಿವಾಣ ಹಾಕೋಕೆ ರೆಡಿ ಮಾಡಿದ್ದಾರೆ.
ಇದರಿಂದಾಗಿ ರಸ್ತೆಯಲ್ಲಿ ವೇಗವಾಗಿ ಓಡಾಟ ಮಾಡುವವರ ವಾಹನಗಳ ಸ್ಪೀಡ್​​ಗೆ ಒಂದೆಡೆ ಬ್ರೇಕ್ ಬಿದ್ರೆ, ಮತ್ತೊಂದೆಡೆ ಅಗತ್ಯ ಸೇವೆಗೆ ಮಾತ್ರ ಹೊರಬರಬೇಕೆಂದು ನಗರ ಪೊಲೀಸರ ಆದೇಶವಿದ್ರೂ, ಅದನ್ನ ಉಲ್ಲಂಘನೆ ಮಾಡಿ ಪಾಸ್ ಇಲ್ಲದೇ ಬೇಕಾಬಿಟ್ಟಿ ಓಡಾಟ ಮಾಡುತ್ತಿದ್ದ ವಾಹನಗಳನ್ನ ಸೀಜ್ ಮಾಡಲೂ ಕೂಡ ಪೊಲೀಸರಿಗೆ ಸಹಾಯಕವಾಗಿದೆ.

ABOUT THE AUTHOR

...view details