ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಭೀತಿಯಿಂದ ಜನ ಮನೆಯಲ್ಲಿ ಬಂಧಿಯಾಗಿದ್ರೆ, ಇಲ್ಲೊಬ್ಬ ಆಸಾಮಿ ಮಾತ್ರ ಮದ್ಯ ಬೇಕು ಅಂತಾ ಒತ್ತಾಯಿಸಿ ಬಾರ್ ಅಂಗಡಿ ಬಾಗಿಲನ್ನು ಕಲ್ಲಿನಿಂದ ಕುಟ್ಟಿದ್ದಾನೆ.
'ಅಯ್ಯೋ ನನಗೆ ಎಣ್ಣೆ ಕೊಡಿ': ಬಾರ್ ಮುಂದೆ ಕುಡುಕನ ರಂಪಾಟ - ಬೆಂಗಳೂರು ಬಾರ್ ಬಂದ್
ಈಡಿ ದೇಶವೇ ಕೊರೊನಾ ಭೀತಿಯಿಂದ ನಲುಗುತ್ತಿದ್ದರೆ ಬೆಂಗಳೂರಿನ ಜೆ.ಪಿ. ನಗರದ ಬಾರ್ವೊಂದರ ಮುಂದೆ ಮದ್ಯಪ್ರಿಯನೊಬ್ಬ ಅಂಗಡಿ ಬಾಗಿಲು ತೆರೆಯುವಂತೆ ಕಲ್ಲಿನಿಂದ ಕುಟ್ಟುತ್ತಿದ್ದ ದೃಶ್ಯ ಕಂಡುಬಂತು. ಸತತ ಪ್ರಯತ್ನ ನಡೆಸಿ ಕೊನೆಗೆ ಕಲ್ಲು ಬಿಸಾಕಿ ಬಂದ ದಾರಿಗೆ ಸುಂಕವಿಲ್ಲ ಅಂತ ಮರಳಿದ್ದಾನೆ.
ಬಾರ್ ಮುಂದೆ ಮದ್ಯ ಪ್ರೀಯನ ರಂಪಾಟ
ಕೇಂದ್ರ ಸರ್ಕಾರ ಅಗತ್ಯ ವಸ್ತುಗಳು ಹೊರತುಪಡಿಸಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಏ. 14ರವರೆಗೆ ಬಂದ್ ಮಾಡಿ ಲಾಕ್ಡೌನ್ ಘೋಷಿಸಿದೆ. ಜೆ.ಪಿ ನಗರದ ಅಮೃತ ಬಾರ್ ಅಂಡ್ ರೆಸ್ಟೋರೆಂಟ್ ಮುಂದೆ ಕುಡುಕನೊಬ್ಬ ಬಾರ್ ಬಾಗಿಲು ತೆರೆಯುವಂತೆ ಕಲ್ಲಿನಿಂದ ದಾಳಿ ನಡೆಸಿದ್ದಾನೆ.
'ಅಯ್ಯೋ ನನಗೆ ಎಣ್ಣೆ ಕೊಡಿ.. ನನ್ನ ಕೈಯಲ್ಲಿ ಆಗುತ್ತಿಲ್ಲ. ಮದ್ಯ ಇಲ್ಲದ್ದಕ್ಕೆ ಕುಡುಕರು ನಿಶ್ಯಕ್ತರಾಗಿದ್ದಾರೆ' ಅಂತಾ ಗೊಣಗುತ್ತ ಸತತ ಪ್ರಯತ್ನ ನಡೆಸಿ ಕೊನೆಗೆ ಕಲ್ಲು ಬಿಸಾಕಿ ಬಂದ ದಾರಿಗೆ ಸುಂಕವಿಲ್ಲ ಅಂತ ಮರಳಿ ಮನೆಗೆ ಹೋಗಿದ್ದಾನೆ.