ಬೆಂಗಳೂರು: ದೇಶದಲ್ಲಿ ಲಾಕ್ಡೌನ್ ಇರುವ ಕಾರಣ ಹೋಟೆಲ್ ಉದ್ಯಮಕ್ಕೆ ಆರ್ಥಿಕವಾಗಿ ಭಾರಿ ಹೊಡೆತ ಉಂಟಾಗಿದೆ. ಹೋಟೆಲ್ ಉದ್ಯಮವನ್ನು ಸರ್ಕಾರ ಕೈ ಹಿಡಿದು ಮೇಲೆತ್ತಬೇಕು ಅಂತ ಬೆಂಗಳೂರು ಹೋಟೆಲ್ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಸರ್ಕಾರಕ್ಕೆ ವಿನಂತಿ ಮಾಡಿದರು.
ಹೋಟೆಲ್ ಉದ್ಯಮದ ನಷ್ಟ ತುಂಬಿಕೊಡುವಂತೆ ಸರ್ಕಾರಕ್ಕೆ ಮನವಿ - corona latest news
ಲಾಕ್ಡೌನ್ನಿಂದಾಗಿ ಸಾವಿರಾರು ಉದ್ಯಮಗಳು ತಾತ್ಕಾಲಿಕವಾಗಿ ಬಾಗಿಲು ಹಾಕಿಕೊಂಡಿವೆ. ಈ ಸಾಲಿಗೆ ಹೋಟೆಲ್ ಉದ್ಯಮ ಕೂಡ ಸೇರಿದ್ದು, ಕೊರೊನಾ ಎಫೆಕ್ಟ್ನಿಂದಾಗಿ ಉದ್ಯಮಕ್ಕೆ ಕೋಟಿ ಕೋಟಿ ನಷ್ಟ ಉಂಟಾಗಿದೆ. ಈ ಹಿನ್ನೆಲೆ ಉದ್ಯಮಕ್ಕಾದ ನಷ್ಟ ಬರಿಸಿಕೊಡುವಂತೆ ಬೆಂಗಳೂರು ಹೋಟೆಲ್ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕೊರೊನಾ ಎಫೆಕ್ಟ್: ಹೋಟೆಲ್ ಉದ್ಯಮದ ನಷ್ಟ ತುಂಬಿಕೊಡುವಂತೆ ಸರ್ಕಾರಕ್ಕೆ ಮನವಿ
ಸರ್ಕಾರದ ಆದೇಶದ ಪ್ರಕಾರ ಹೋಟೆಲ್ ಲಾಕ್ಡೌನ್ ಸಮಯದಲ್ಲಿ ಪಾರ್ಸೆಲ್ ರೂಪದಲ್ಲಿ ಊಟ ನೀಡಬಹುದು. ಆದರೆ, ಅಧಿಕ ವಸತಿ ಇರುವ ಬಡಾವಣೆಗಳಲ್ಲಿ ಹೋಟೆಲ್ಗಳು ಸೇವೆ ಲಭ್ಯವಿಲ್ಲ.
ಹೋಟೆಲ್ ಉದ್ಯಮಕ್ಕೆ ಆಗುತ್ತಿರುವ ನಷ್ಟವನ್ನು ಸರ್ಕಾರ ತುಂಬಿ ಕೊಡಬೇಕು. ಹೋಟೆಲ್ ನೌಕರರ ಇಪಿಎಫ್ 6 ತಿಂಗಳು ಮುಂದೂಡಬಹುದು ಹಾಗೂ ಇಎಸ್ಐಸಿ ಯ 19ನೆ ವಿಧಿಯಡಿ ಅರ್ಧ ಸಂಬಳವನ್ನು ನಿರುದ್ಯೋಗ ವೇತನವನ್ನು ಇಎಸ್ಐಸಿಯಲ್ಲಿ ಉಳಿದಿರುವ 91,000 ಕೋಟಿಯನ್ನು ವಿತರಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.