ಬೆಂಗಳೂರು :ರಾಜ್ಯದಲ್ಲಿಂದು ಸೋಂಕಿತರು ಹಾಗೂ ಮೃತರ ಸಂಖ್ಯೆ ಇಳಿಕೆ ಕಂಡಿದೆ. ನಿತ್ಯ ನೂರರ ಗಡಿ ದಾಟುತ್ತಿದ್ದ ಸಾವಿನ ಸಂಖ್ಯೆ ಕೊಂಚ ಇಳಿದಿದೆ. ಇಂದು 38 ಸೋಂಕಿತರು ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ 8266ಕ್ಕೆ ಏರಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಮೃತರಾಗಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಸಾವಿನ ಸಂಖ್ಯೆಯಲ್ಲಿ ಇಳಿಕೆ.. - Corona death toll reduced in karnataka state
ಇಂದು 5460 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ. ಈವರೆಗೆ 4,37,910 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ..
ರಾಜ್ಯದಲ್ಲಿ ಕೋವಿಡ್ ಸಾವಿನ ಸಂಖ್ಯೆಯಲ್ಲಿ ಇಳಿಕೆ...ಸುಧಾರಿಸಿದ ಸೋಂಕಿತರ ಸಂಖ್ಯೆ
ಇಂದು 6997 ಹೊಸ ಕೊರೊನಾ ಪ್ರಕರಣ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 5,40,847ಕ್ಕೆ ಏರಿದೆ. ಇಂದು 5460 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ. ಈವರೆಗೆ 4,37,910 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
94,652 ಸಕ್ರಿಯ ಕೇಸ್ ಬಾಕಿ ಇದ್ದು, 816 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೆಪ್ಟೆಂಬರ್ 22ರಿಂದ 4,92,101 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ವಿಮಾನ ನಿಲ್ದಾಣದಲ್ಲಿಂದು 192 ಪ್ರಯಾಣಿಕರು ತಪಾಸಣೆಗೊಳಪಟ್ಟಿದ್ದು, ಈವರೆಗೆ 2,16,722 ಪ್ರಯಾಣಿಕರು ಬಂದಿದ್ದಾರೆ.