ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ 2 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ: ಇಂದು 5,536 ಕೊರೊನಾ ಪಾಸಿಟಿವ್ ಪತ್ತೆ

ಕರ್ನಾಟಕದಲ್ಲಿ ಇಂದು 5,536 ಹೊಸ ಕೊರೊನಾ ಪಾಸಿಟಿವ್ ಕೇಸ್​ಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,07,001ಕ್ಕೆ ಏರಿಕೆ ಆಗಿದೆ.

Corona
ಕೊರೊನಾ ಪಾಸಿಟಿವ್

By

Published : Jul 28, 2020, 8:33 PM IST

ಬೆಂಗಳೂರು:ರಾಜ್ಯದಲ್ಲಿಂದು ಒಂದೇ ದಿನ ಕೊರೊನಾಗೆ 102 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 2,055 ಕ್ಕೆ ಏರಿಕೆ ಆಗಿದೆ. ಇನ್ನು 5,536 ಹೊಸ ಕೊರೊನಾ ಪಾಸಿಟಿವ್ ಕೇಸ್​ಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,07,001ಕ್ಕೆ ಏರಿಕೆ ಆಗಿದೆ.

ಇತ್ತ ಸೋಂಕಿತರ ಸಂಖ್ಯೆಯ ಜೊತೆ ಜೊತೆಗೆ ತೀವ್ರ ನಿಗಾ ಘಟಕದಲ್ಲಿ ಇರುವವರ ಸಂಖ್ಯೆಯೂ ಏರುತ್ತಿದ್ದು, 612 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 40,504 ಮಂದಿ ಗುಣಮುಖರಾಗಿದ್ದು, 64,434 ಜನರು ವಿವಿಧ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಸೋಂಕಿತರ ಸಂಪರ್ಕದಲ್ಲಿ, ಪ್ರಾಥಮಿಕ ಸಂಪರ್ಕಿತರು 82,940, ದ್ವಿತೀಯ ಸಂಪರ್ಕಿತರು 71,519 ಮಂದಿ ಇದ್ದಾರೆ. 1,54,459 ಮಂದಿ ನಿಗಾವಣೆಯಲ್ಲಿ ಇದ್ದಾರೆ.‌

ಕೊರೊನಾ ಮಾಹಿತಿ

ಕರ್ನಾಟಕಕ್ಕೆ ಕೊರೊನಾ ಆಗಸ್ಟ್ ಆಘಾತ ತಪ್ಪಿದ್ದಲ್ಲ. ಆಗಸ್ಟ್ 15 ರ ಹೊತ್ತಿಗೆ ಎರಡು ಲಕ್ಷ ಸೋಂಕಿತರು ಆಗ್ತಾರೆ ಅಂತಿದ್ದಾರೆ ಟಾಸ್ಕ್ ಫೋರ್ಸ್ ಸಮಿತಿಯ ತಜ್ಞ ವೈದ್ಯರು. ಸದ್ಯ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದ್ವಿಗುಣ ಆಗಲು, ಕೇವಲ 11 ದಿನ ಮಾತ್ರ ತೆಗೆದುಕೊಳ್ಳುತ್ತಿದೆ. ಇತ್ತ ಉದ್ಯಾನ ನಗರಿ ಬೆಂಗಳೂರಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣ ಆಗಲು, 12 ದಿನ ತೆಗೆದುಕೊಳ್ತಿದೆ. ಇನ್ನು ಹೇಗೆ ಲೆಕ್ಕ ಹಾಕಿದ್ರೂ ಆಗಸ್ಟ್ ಮಧ್ಯಭಾಗದಲ್ಲಿ ಸೋಂಕು ಎರಡು ಲಕ್ಷ ಆಗೋದು ಖಚಿತ ಎನ್ನಲಾಗುತ್ತಿದೆ. ‌ಇತ್ತ ಡಿಸ್ಚಾರ್ಜ್ ಹೆಚ್ಚಳ ಆಗದೇ ಇದ್ದರೆ ರಾಜ್ಯದಲ್ಲಿ ಹಾಸಿಗೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಬಹುದು. ಹೀಗಾಗಿ ಹೆಚ್ಚೆಚ್ಚು ಹೋಮ್ ಐಸೋಲೇಷನ್ ಕಡೆ ಸರ್ಕಾರ ಹೆಚ್ಚು ಗಮನ ಹರಿಸುತ್ತಿದೆ.

ಕೊರೊನಾ ಮಾಹಿತಿ

ಕೊರೊನಾ ಆಗಸ್ಟ್ ಆಘಾತ..?

  • ಮೊದಲ ಕೇಸ್ - ಮಾರ್ಚ್ 08
  • ‎100 ಕೇಸ್ - ಮಾರ್ಚ್ 31 - ಅಂತರ‌ 23 ದಿನ
  • 200 ಕೇಸ್ - ಏಪ್ರಿಲ್ 10 - ಅಂತರ‌ 10 ದಿನ
  • ‎400 ಕೇಸ್ - ಏಪ್ರಿಲ್ 20 - ಅಂತರ‌ 10 ದಿನ
  • 800 ಕೇಸ್ - ಮೇ 10 - ಅಂತರ‌ 20 ದಿನ
  • 1600 ಕೇಸ್ - ಮೇ 21 - ಅಂತರ‌ 11 ದಿನ
  • 3200 ಕೇಸ್ - ಜೂನ್ 6 - ಅಂತರ‌ 16 ದಿನ
  • 6400 ಕೇಸ್ - ಜೂನ್ 12 - ಅಂತರ‌ 6 ದಿನ
  • 12,800 ಕೇಸ್ - ಜೂನ್ 28 - ಅಂತರ‌ 16 ದಿನ
  • 25,600 ಕೇಸ್ - ಜುಲೈ 6 - ಅಂತರ‌ 8 ದಿನ
  • 50,000 ಕೇಸ್ - ಜುಲೈ 16 - ಅಂತರ‌ 11 ದಿನ
  • 1,00,000 ಕೇಸ್-ಜುಲೈ27- ಅಂತರ‌ 11ದಿನ
  • ‎2,00,000 ಕೇಸ್ - ಆಗಸ್ಟ್ 13-15..?

    ಸದ್ಯ, ಆಗಸ್ಟ್ ತಿಂಗಳಲ್ಲಿ ಕೊರೊನಾ ಮತ್ತಷ್ಟು ತೀವ್ರ ರೀತಿಯಲ್ಲಿ ಏರಿಕೆ ಆಗಲಿದ್ದು, ಹಿರಿಯರು- ಮಕ್ಕಳು ಹಾಗೂ ಅನಾರೋಗ್ಯ ಸಮಸ್ಯೆಯುಳ್ಳವರು ಹೆಚ್ಚು ಜಾಗೃತರಾಗಿ ಇರಬೇಕಿದೆ‌‌.

ABOUT THE AUTHOR

...view details