ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 64 ಮಂದಿಗೆ ಕೋವಿಡ್ : ಒಬ್ಬ ಸೋಂಕಿತ ಬಲಿ - ಇಂದಿನ ಕರ್ನಾಟಕ ಕೊರೊನಾ ವರದಿ

ರಾಜ್ಯದಲ್ಲಿ ಕೊರೊನಾ ಸೋಂಕು ತೀವ್ರ ಇಳಿಮುಖವಾಗಿದೆ. ಇಂದು 26,596 ಮಂದಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಇದರಲ್ಲಿ 64 ಮಂದಿಗೆ ಮಾತ್ರ ಸೋಂಕು ದೃಢಪಟ್ಟಿದೆ. ಅಲ್ಲದೇ ಒಬ್ಬರು ಸೋಂಕಿಗೆ ಬಲಿಯಾಗಿದ್ದಾರೆ..

ಕೋವಿಡ್
ಕೋವಿಡ್

By

Published : Mar 27, 2022, 7:26 PM IST

ಬೆಂಗಳೂರು : ರಾಜ್ಯದಲ್ಲಿಂದು 26,596 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 64 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,45,311ಕ್ಕೆ ಏರಿಕೆ ಆಗಿದೆ.‌ ಪಾಸಿಟಿವ್ ದರವೂ 0.24% ರಷ್ಟಿದೆ. ಇತ್ತ 62 ಸೋಂಕಿತರು ಗುಣಮುಖರಾಗಿದ್ದು, ಈ ತನಕ 39,03,442 ಮಂದಿ ಡಿಸ್ಜಾರ್ಜ್ ಆಗಿದ್ದಾರೆ.

1,777 ಸದ್ಯ ಸಕ್ರಿಯ ಪ್ರಕರಣಗಳಿವೆ. ಸೋಂಕಿಗೆ ಒಬ್ಬ ಸೋಂಕಿತ ಮೃತಪಟ್ಟಿದ್ದು, ಸಾವಿನ ಸಂಖ್ಯೆ 40,050 ಏರಿಕೆ ಕಂಡಿದೆ. ಡೆತ್ ರೇಟು 1.56% ರಷ್ಟಿದೆ. ವಿಮಾನ ನಿಲ್ದಾಣದಿಂದ 3,086 ಪ್ರಯಾಣಿಕರು ಆಗಮಿಸಿದ್ದಾರೆ. ಇನ್ನು ಬೆಂಗಳೂರಿನಲ್ಲಿ 51 ಮಂದಿಗೆ ಸೋಂಕು ತಗುಲಿದೆ. ಸೋಂಕಿತರ ಸಂಖ್ಯೆ 17,81,472ಕ್ಕೆ ಏರಿಕೆ ಆಗಿದೆ. 53 ಮಂದಿ ಡಿಸ್ಜಾರ್ಜ್ ಆಗಿದ್ದು, ಈ ತನಕ 17,62,931 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಒಬ್ಬ ಸೋಂಕಿತ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 16,959ಕ್ಕೆ ಏರಿಕೆ ಕಂಡಿದೆ. 1,581 ಸಕ್ರಿಯ ಪ್ರಕರಣಗಳಿವೆ.

ರೂಪಾಂತರಿ ವೈರಸ್ ಅಪಡೇಟ್ಸ್ :

ಅಲ್ಪಾ- 156
ಬೇಟಾ-08
ಡೆಲ್ಟಾ ಸಬ್ ಲೈನ್ ಏಜ್- 4,620
ಇತರೆ- 311
ಒಮಿಕ್ರಾನ್- 3,081
BAI.1.529- 828
BA1- 98
BA2- 2155
ಒಟ್ಟು- 8176

ABOUT THE AUTHOR

...view details