ಬೆಂಗಳೂರು:ಇಂದು ವಿಜಯನಗರ ಸಂಚಾರ ಠಾಣೆಯ ಪೊಲೀಸ್ ಸಿಬ್ಬಂದಿಗೆ ಕೊರೊನಾ ದೃಡಪಟ್ಟಿದ್ದು, ಇವರು ಕೇಸ್ ಸಂಬಂಧ ಕೋರ್ಟ್ ಕಚೇರಿಗೆ ಹೋಗುತ್ತಿದ್ದರು.
ವಿಜಯನಗರ ಸಂಚಾರ ಠಾಣೆ ಪೊಲೀಸ್ ಸಿಬ್ಬಂದಿಗೆ ಕೊರೊನಾ ದೃಢ - ಬೆಂಗಳೂರು ಕೊರೊನಾ ಲೆಟೆಸ್ಟ್ ನ್ಯೂಸ್
ವಿಜಯನಗರ ಸಂಚಾರ ಠಾಣೆಯಲ್ಲಿ ಕಾರ್ಯ ನಿರ್ಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಸೋಂಕು ತಗುಲಿದೆ. ಇವರು ಪ್ರಕರಣ ಸಂಬಂಧ ಕೋರ್ಟ್ ಕಚೇರಿಗೆ ತೆರಳುತ್ತಿದ್ದರು ಎನ್ನಲಾಗುತ್ತಿದೆ.
ವಿಜಯನಗರವ ಠಾಣಾ ವ್ಯಾಪ್ತಿಯ ಸಿಬ್ಬಂದಿಗೆ ಸೋಂಕು ತಗುಲಿದೆ. ಠಾಣೆಯಲ್ಲಿ ಕ್ರಿಮಿನಲ್ ಕೇಸ್ ಗಳಿದ್ದು,ಅದಕ್ಕೆ ಸಂಬಂಧಿಸಿದವರು ಠಾಣೆ ಕಡೆ ಬರುತ್ತಿರಲಿಲ್ಲ. ಹೀಗಾಗಿ ಅಂತವರಿಗೆ ನ್ಯಾಯಾಲಯದ ಅನುಮತಿ ಮೇರೆಗೆ ವಾರಂಟ್ ಜಾರಿ ಮಾಡುವ ಕೆಲಸ ಹಾಗೆ, ಠಾಣೆಯ ಕೋರ್ಟ್ ಕೇಸ್ ಗಳನ್ನು ಇವರೆ ನೋಡಿಕೊಳ್ಳುತ್ತಿದ್ದರು.
ಕೋರ್ಟ್ ಅಥವಾ ಬೇರೆ ಕಡೆ ತೆರಳುವಾಗ ಇವರಿಗೆ ಯಾರಿಂದಾದರೂ ಕೊರೊನಾ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಸಿಬ್ಬಂದಿ ಸಂಪರ್ಕದಲ್ಲಿದವರನ್ನು ಕ್ವಾರಂಟೈನ್ ಮಾಡಿ ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗಿದೆ. ಹಾಗೆ ಚಿಕಿತ್ಸೆಗೆ ಕೋವಿಡ್ ಸೆಂಟರ್ ಗೆ ದಾಖಲಿಸಲಾಗಿದೆ.
ಸದ್ಯ ಸಿಟಿಯಲ್ಲಿ ಬಹುತೇಕ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬರುತ್ತಿದ್ದು, ಜಾಗೃತೆಯಿಂದ ಕಾರ್ಯ ನಿರ್ವಹಣೆ ಮಾಡುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.