ಕರ್ನಾಟಕ

karnataka

ETV Bharat / state

ಸಿಸಿಬಿ ಹೆಡ್ ಕಾನ್‌ಸ್ಟೆಬಲ್‌ಗೆ ಕೊರೊನಾ ದೃಢ.. ಸೈಬರ್ ಇನ್ಸ್‌ಪೆಕ್ಟರ್‌ಗೆ ಕ್ವಾರಂಟೈನ್.. - ಓಲಾ ವಂಚನೆ ಪ್ರಕರಣದ ಆರೋಪಗಳಿಗೆ ಕೊರೊನಾ

ಓಲಾ ಕಂಪನಿಗೆ ದೋಖಾ ಆದಾಗ ಮೊದಲು ಕಂಪನಿ‌ ಮಾಲೀಕರು ಸೈಬರ್ ಠಾಣೆಗೆ ಬಂದು ದೂರು ನೀಡಿದ್ದರು. ಹೀಗಾಗಿ ಸೈಬರ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿನ ತಂಡ ಆರೋಪಿಗಳನ್ನು ಬಂಧಿಸಿದ್ದರು. ಈಗಾಗಲೇ ಸೋಂಕು ದೃಢಪಟ್ಟ ಕಾನ್‌ಸ್ಟೆಬಲ್ ಜೊತೆ ಕೂಡ ಇನ್ಸ್‌ಪೆಕ್ಟರ್ ಸಂಪರ್ಕ ಹೊಂದಿದ್ದರು. ಹೀಗಾಗಿ ಇವರನ್ನು ಕೂಡ ಕ್ವಾರಂಟೈನ್ ಮಾಡ್ಲಾಗಿದೆ.

Crime banch
Crime banch

By

Published : Jun 15, 2020, 4:19 PM IST

ಬೆಂಗಳೂರು: ಓಲಾಗೆ ವಂಚನೆ ಮಾಡಿದ ಆರೋಪಿಗೆ ಕೊರೊನಾ ದೃಢಪಟ್ಟ ಬೆನ್ನಲ್ಲೇ ಆರೋಪಿ ಜೊತೆ ಸಂಪರ್ಕ ಹೊಂದಿದ ಸಿಸಿಬಿಯ ಹೆಡ್‌ ಕಾನ್‌ಸ್ಟೆಬಲ್‌ಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ‌ ಹೆಡ್ ಕಾನ್‌ಸ್ಟೆಬಲ್ ಜೊತೆ ಸಂಪರ್ಕ ಹೊಂದಿದ್ದ ಓರ್ವ ಇನ್ಸ್‌ಪೆಕ್ಟರ್ ಹಾಗೂ ಮೂವರು ಸಿಬ್ಬಂದಿಯನ್ನ ಹೋಮ್ ಕ್ವಾರಂಟೈನ್ ಮಾಡ್ಲಾಗಿದೆ.

ಇತ್ತೀಚಿಗೆ ಗ್ರಾಹಕರಂತೆ ಕಾರುಗಳನ್ನು ತಾವೇ ಬುಕ್ ಮಾಡಿದ್ದ ಓಲಾ ಆ್ಯಪ್ ವಂಚನೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಸಂಬಂಧ ಆರೋಪಿ ಬಂಧನಕ್ಕೆ ಹೆಡ್‌ ಕಾನ್‌ಸ್ಟೆಬಲ್, ಇನ್ಸ್‌ಪೆಕ್ಟರ್ ಕೂಡ ತೆರಳಿದ್ದರು. ಸದ್ಯ ಬಂಧಿತರ ಪೈಕಿ ಓರ್ವನಿಗೆ ಕೊರೊನಾ ಪತ್ತೆಯಾಗಿದೆ. ಸಿಸಿಬಿಯನ್ನ ಮೂರು ದಿವಸಗಳ‌ ಕಾಲ ಸೀಲ್‌ಡೌನ್‌ ಮಾಡಿ ಆರೋಪಿಯ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ಸಿಸಿಬಿ ಪೊಲೀಸರ ಹೆಲ್ತ್ ಚೆಕ್ ಮಾಡಲಾಗಿತ್ತು‌. ಸದ್ಯ ಹೆಡ್ ಕಾನ್‌ಸ್ಟೆಬಲ್‌ವೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಸೈಬರ್ ಇನ್ಸ್‌ಪೆಕ್ಟರ್‌ಗೆ 14 ದಿನ ಕ್ವಾರಂಟೈನ್ :ನಗರದಲ್ಲಿ ಒಂದೆಡೆ ಸೈಬರ್ ಅಪರಾಧ ಹೆಚ್ಚುತ್ತಿವೆ. ಇದರ ನಡುವೆಯೇ ನಗರ ಪೊಲೀಸ್ ಆಯುಕ್ತರ ಕಚೇರಿಯ ಸೈಬರ್ ಇನ್ಸ್‌ಪೆಕ್ಟರ್‌ಗೆ 14 ದಿನ ಕ್ವಾರಂಟೈನ್ ಮಾಡಲಾಗಿದೆ. ಓಲಾ ಕಂಪನಿಗೆ ದೋಖಾ ಆದಾಗ ಮೊದಲು ಕಂಪನಿ‌ ಮಾಲೀಕರು ಸೈಬರ್ ಠಾಣೆಗೆ ಬಂದು ದೂರು ನೀಡಿದ್ದರು. ಹೀಗಾಗಿ ಸೈಬರ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿನ ತಂಡ ಆರೋಪಿಗಳನ್ನು ಬಂಧಿಸಿದ್ದರು. ಈಗಾಗಲೇ ಸೋಂಕು ದೃಢಪಟ್ಟ ಕಾನ್‌ಸ್ಟೆಬಲ್ ಜೊತೆ ಕೂಡ ಇನ್ಸ್‌ಪೆಕ್ಟರ್ ಸಂಪರ್ಕ ಹೊಂದಿದ್ರು. ಹೀಗಾಗಿ ಇವರನ್ನು ಕೂಡ ಕ್ವಾರಂಟೈನ್ ಮಾಡಲಾಗಿದೆ.

ಸದ್ಯಕ್ಕೆ ಸಿಸಿಬಿ ಸೈಬರ್ ಪೊಲೀಸರಲ್ಲೂ ಕೂಡ ಕೊರೊನಾ ಆತಂಕ ನಿರ್ಮಾಣವಾಗಿದೆ. ಹೀಗಾಗಿ ಸದ್ಯ ‌ಮೇಜರ್ ಪ್ರಕರಣ ಬಿಟ್ಟು ಇತರೆ ಯಾವುದೇ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸದಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.

ಓಲಾ ವಂಚನೆ ಪ್ರಕರಣದ ಹಿನ್ನೆಲೆ :ರವಿ,ಮನು‌, ಸತೀಶ್ ಮತ್ತು ನಾಗೇಶ್ ಹೆಚ್ಚು ಹಣ ಮಾಡುವ ಉದ್ದೇಶದಿಂದ 50ಕ್ಕೂ ಹೆಚ್ಚು ಟ್ರಿಪ್ ಮಾಡಿದ್ರೆ ಇನ್ಸೆಂಟೀವ್ ಸಿಗುತ್ತೆ ಎಂದು ಅಡ್ಡದಾರಿ ಹಿಡಿದಿದ್ದರು. ಓಲಾಗೆ ತಮ್ಮ ಕಾರು ಅಟ್ಯಾಚ್ ಮಾಡಿ‌, ತಾವೇ ಬೇರೆ ಬೇರೆ ನಂಬರ್‌ನಿಂದ ಕ್ಯಾಬ್ ಬುಕ್ ಮಾಡ್ತಿದ್ರು. ಬಳಿಕ ಸುಳ್ಳು ಮಾಹಿತಿ ನೀಡಿ ಹಣ ಪಡೆಯುತ್ತಿದ್ದರು. ಈ ಹಿನ್ನೆಲೆ ಪೊಲೀಸರು ಈ ನಾಲ್ವರನ್ನು ಬಂಧಿಸಿದ್ದರು.

ABOUT THE AUTHOR

...view details