ಬೆಂಗಳೂರು: ರಾಜ್ಯದಲ್ಲಿಂದು 413 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಮತ್ತು ಇಬ್ಬರು ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 9,48,149ಕ್ಕೆ ಮತ್ತು ಮೃತರ ಸಂಖ್ಯೆ 12,294ಕ್ಕೆ ತಲುಪಿದೆ.
353 ಮಂದಿ ಗುಣಮುಖರಾಗಿದ್ದು, ಈವರೆಗೆ 9,29,800 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾತರೆ. ಸದ್ಯ ಸಕ್ರಿಯ ಪ್ರಕರಣಗಳು 6,036 ಇದ್ದು, 127 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತ ಪ್ರಕರಣಗಳ ಶೇಕಡಾವಾರು 0.74ರಷ್ಟು ಇದ್ದರೆ, ಮೃತಪಟ್ಟವರ ಪ್ರಮಾಣ ಶೇ. 0.48ರಷ್ಟು ಇದೆ.
ಯುಕೆಯಿಂದ 283 ಪ್ರಯಾಣಿಕರು ಆಗಮಿಸಿದ್ದು, ಈವರೆಗೆ 63 ಜನಕ್ಕೆ ಪಾಸಿಟಿವ್ ಬಂದಿದೆ. ಈ ಸೋಂಕಿತರ ಸಂಪರ್ಕದಲ್ಲಿದ್ದ 26 ಮಂದಿಗೂ ಕೋವಿಡ್ ಪಾಸಿಟಿವ್ ವರದಿ ಬಂದಿದೆ. 25 ಜನರಿಗೆ ರೂಪಾಂತರ ಕೊರೊನಾ ಹರಡಿದೆ.
ಈ ಸುದ್ದಿಯನ್ನೂ ಓದಿ:ದೇಶದಲ್ಲಿ 1.10 ಲಕ್ಷ ಮಂದಿಗೆ ಕೊರೊನಾ ಲಸಿಕೆ.. ಇನ್ನೂ ಸಕ್ರಿಯವಾಗಿವೆ 1.45 ಲಕ್ಷ ಕೇಸ್
ಬೆಂಗಳೂರಿನಲ್ಲಿಂದು 248 ಮಂದಿಗೆ ಸೋಂಕು ದೃಢಪಟ್ಟಿದ್ದು ,ಸೋಂಕಿತರ ಸಂಕ್ಯೆ 4,03,762ಕ್ಕೆ ಏರಿಕೆ ಆಗಿದೆ. 206 ಸೋಂಕಿತರು ಗುಣಮುಖರಾಗಿದ್ದು, 3,94,995 ಮಂದಿ ಚೇತರಿಸಿಕೊಂಡಿದ್ದಾರೆ. 4,315 ಸಕ್ರಿಯ ಪ್ರಕರಣಗಳು ಇದ್ದು, ಇಬ್ಬರು ಸೋಂಕಿತರು ಕೊರೊನಾದಿಂದ ಮೃತರಾಗಿದ್ದಾರೆ. ಈವರೆಗೆ 4,451 ಜನರು ಸೋಂಕಿಗೆ ಬಲಿಯಾಗಿದ್ದಾರೆ.