ಕರ್ನಾಟಕ

karnataka

ETV Bharat / state

ಮುಂಗಾರು ಅಧಿವೇಶನ: ಬಿಜೆಪಿ-ಕಾಂಗ್ರೆಸ್​ ಮಧ್ಯೆ ಕೊರೊನಾ ಜಟಾಪಟಿ! - ಮುಂಗಾರು ಅಧಿವೇಶನ 2020,

ಮುಂಗಾರು ಅಧಿವೇಶನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ ಮಧ್ಯೆ ಕೊರೊನಾಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದ ಪ್ರಸಂಗ ನಡೆಯಿತು.

Corona clash between BJP and Congress, Corona clash between BJP and Congress in Manson session, Manson session, Manson session 2020, Manson session 2020 news, ಬಿಜೆಪಿ ಮತ್ತು ಕಾಂಗ್ರೆಸ್​ ಮಧ್ಯೆ ಕೊರೊನಾ ಗಲಾಟೆ, ಮುಂಗಾರು ಅಧಿವೇಶನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ ಮಧ್ಯೆ ಕೊರೊನಾ ಗಲಾಟೆ, ಮುಂಗಾರು ಅಧಿವೇಶನ, ಮುಂಗಾರು ಅಧಿವೇಶನ 2020, ಮುಂಗಾರು ಅಧಿವೇಶನ 2020 ಸುದ್ದಿ,
ಮುಂಗಾರು ಅಧಿವೇಶನದಲ್ಲಿ ಬಿಜೆಪಿ-ಕಾಂಗ್ರೆಸ್​ ಮಧ್ಯೆ ಕೊರೊನಾ ಗಲಾಟೆ

By

Published : Sep 23, 2020, 6:47 PM IST

ಬೆಂಗಳೂರು : ಕೊರೊನಾ ಸೋಂಕು ನಿಯಂತ್ರಣ ಹಾಗೂ ವೈದ್ಯಕೀಯ ಉಪಕರಣಗಳ ಬಗ್ಗೆ ಸದನಕ್ಕೆ ಉತ್ತರ ನೀಡುತ್ತಿದ್ದ ವೇಳೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹಾಗೂ ಕಾಂಗ್ರೆಸ್ ಶಾಸಕರ ಮಧ್ಯೆ ಪದೇ ಪದೆ ಮಾತಿನ ವಾಗ್ದಾಳಿ ನಡೆದ ಪ್ರಸಂಗ ಇಂದು ವಿಧಾನಸಭೆಯಲ್ಲಿ ನಡೆಯಿತು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತಿತರ ನಾಯಕರು ನಿಯಮ 69ರ ಅಡಿ ಪ್ರಸ್ತಾಪ ಮಾಡಿದ್ದ ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ ಮತ್ತು ಆರೋಗ್ಯ ಸಂಬಂಧಿಸಿದ ವೈದ್ಯಕೀಯ ಉಪಕರಣ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಸ್ತಾಪಕ್ಕೆ ಸರ್ಕಾರದ ಪರವಾಗಿ ಸಚಿವ ಸುಧಾಕರ್ ಉತ್ತರ ನೀಡುತ್ತಿದ್ದ ವೇಳೆ ಪದೇ ಪದೆ ಕಾಂಗ್ರೆಸ್ ಮತ್ತು ಆಡಳಿತ ಪಕ್ಷದ ಶಾಸಕರ ನಡುವೆ ಮಾತಿನ ವಾಗ್ವಾದ ನಡೆಯಿತು. ಇದು ಗದ್ದಲಕ್ಕೂ ಕಾರಣವಾಯಿತು.

ಮುಂಗಾರು ಅಧಿವೇಶನದಲ್ಲಿ ಬಿಜೆಪಿ - ಕಾಂಗ್ರೆಸ್​ ಮಧ್ಯೆ ಕೊರೊನಾ ಗಲಾಟೆ

ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅಂಕಿ - ಅಂಶಗಳ ಸಮೇತ ಉತ್ತರ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಯಾಗಿ ಮಾತನಾಡಲು ಮುಂದಾದ ಕಾರಣ ಆಡಳಿತ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, ಮಾ.28ರಂದು ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಸುತ್ತಮುತ್ತಲಿನ ರಾಜ್ಯಗಳಲ್ಲಿ ನೆಲೆಸಿರುವ ಕನ್ನಡಿಗರು ರಾಜ್ಯಕ್ಕೆ ಮರಳಲು ಅವಕಾಶ ಮಾಡಿಕೊಡಬೇಕು. ರೋಗ ಹರಡದಂತೆ ಅವರನ್ನು ಗಡಿಯಲ್ಲೇ ಕ್ವಾರಂಟೈನ್ ಮಾಡಬೇಕೆಂದು ಪತ್ರದಲ್ಲಿ ಕೋರಲಾಗಿತ್ತು. ಸರ್ವಪಕ್ಷಗಳ ಸಭೆಯಲ್ಲೂ ನಮ್ಮ ಪಕ್ಷ ಪ್ರಸ್ತಾಪ ಮಾಡಿತ್ತು. ಆದರೆ, ಲಾಕ್​ಡೌನ್ ಸಡಿಲ ಮಾಡಿದ ಸಂದರ್ಭದಲ್ಲಿ ಕಲಬುರಗಿಗೆ ಎರಡು ಲಕ್ಷ ಮಂದಿ ಬಂದರು. ಇದರಿಂದ ಕೋವಿಡ್ ಹರಡುವಿಕೆ ಹೆಚ್ಚಾಯಿತು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಲಾಕ್​ಡೌನ್ ಸಂದರ್ಭದಲ್ಲಿ ಜೀವ ಉಳಿಸುವ ಕೆಲಸವನ್ನು ಸರ್ಕಾರ ಮಾಡಿತ್ತು. ಜನ ಜೀವನ ಸಹಜ ಸ್ಥಿತಿಗೆ ಮರಳಲಿ ಎಂಬ ಕಾರಣಕ್ಕೆ ಲಾಕ್‍ಡೌನ್ ಸಡಿಲಮಾಡಲಾಯಿತು. ಜೂನ್‍ವರೆಗೆ ಕೇವಲ 15 ಸಾವಿರ ಕೋವಿಡ್ ಪ್ರಕರಣಗಳಿದ್ದವು. ಆನಂತರ ಹೆಚ್ಚಾಯಿತು ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದರು.

ಉತ್ತರ ಕೊಡುವಾಗ ಪದೇ ಪದೆ ಆಕ್ಷೇಪವನ್ನು ಕಾಂಗ್ರೆಸ್ ಸದಸ್ಯರು ಮಾಡಿದರು. ಸ್ಪೀಕರ್ ಆಗಾಗ ಮಧ್ಯ ಪ್ರವೇಶಿಸಿ, ಈ ರೀತಿ ಮಾತನಾಡಿದರೆ ಸದನಕ್ಕೆ ಗೌರವ ಬರುವುದಿಲ್ಲ. ಉತ್ತರ ನೀಡಲು ಸಹಕರಿಸಿ ಎಂದು ಹೇಳಿದಾಗ ಪರಿಸ್ಥಿತಿ ಹತೋಟಿಗೆ ಬರುತಿತ್ತು.

ಸಭಾಧ್ಯಕ್ಷರ ಪೀಠದಲ್ಲಿದ್ದ ಉಪಸಭಾಧ್ಯಕ್ಷ ಆನಂದ ಮಹಾಮನಿ, ಈ ರೀತಿ ಉತ್ತರಕ್ಕೆ ಅಡ್ಡಿ ಪಡಿಸುವುದು ಸರಿಯಲ್ಲ. ಇದರಿಂದ ಸದನಕ್ಕೆ ಗೌರವ ಬರುವುದಿಲ್ಲ. ಸಚಿವರ ಉತ್ತರ ನೀಡಿದ ನಂತರ ಸ್ಪಷ್ಟನೆ ಕೇಳಿ ಎಂದು ಉಪಸಭಾಧ್ಯಕ್ಷರು ಹೇಳಿದರಾದರೂ ಕಾಂಗ್ರೆಸ್‌ನ ಸದಸ್ಯರು ಎದ್ದುನಿಂತು ಸರಿಯಾದ ಉತ್ತರ ನೀಡಿ. ವಲಸೆ ಕಾರ್ಮಿಕರ ವಿಚಾರದಲ್ಲಿ ಸತ್ಯ ಹೇಳಿ ಎಂದು ಒತ್ತಾಯಿಸಿದರು. ಇದಕ್ಕೆ ಆಡಳಿತ ಪಕ್ಷದ ಕಡೆಯಿಂದ ಆಕ್ಷೇಪ ವ್ಯಕ್ತವಾಗಿ ಮತ್ತೆ ಗದ್ದಲ ಹೆಚ್ಚಾಗಿ ಕೋಲಾಹಲದ ವಾತಾವರಣ ನಿರ್ಮಾಣವಾಯಿತು.

ಪ್ರಿಯಾಂಕ್​ ಖರ್ಗೆಯವರು ವಿಷಯಾಂತರ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಏನೇನೋ ಮಾತನಾಡುತ್ತಿದ್ದಾರೆ. ಸರಿಯಾದ ಕ್ರಮ ಕೈಗೊಳ್ಳಿ ಎಂದು ಆಡಳಿತ ಪಕ್ಷದ ಸದಸ್ಯರು ಒತ್ತಾಯಿಸಿದರು. ಇದು ಕಾಂಗ್ರೆಸ್ ಸದಸ್ಯರನ್ನು ಕೆರಳಿಸಿತು. ಇದು ಸರಿಯಲ್ಲ. ನಾವು ಏನನ್ನೂ ಕೇಳಲೇಬಾರದೆ ಎಂದು ಏರಿದ ಧ್ವನಿಯಲ್ಲಿ ಗದ್ದಲದ ನಡುವೆಯೇ ಹೇಳಿದರು.

ಉಪಸಭಾಧ್ಯಕ್ಷ ಆನಂದ ಮಹಾಮನಿ ಎಲ್ಲ ಸದಸ್ಯರಿಗೆ ಸುಮ್ಮನಿರುವಂತೆ ಹೇಳಿದರೂ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ಮುಂದುವರೆದಿತ್ತು. ಇದರ ಮಧ್ಯೆ ಎದ್ದುನಿಂತ ಜೆಡಿಎಸ್‌ನ ಹೆಚ್.ಡಿ. ರೇವಣ್ಣ, ಮೊದಲು ಸಚಿವರು ಉತ್ತರ ನೀಡಲಿ. ಆಮೇಲೆ ಸ್ಪಷ್ಟನೆ ಕೇಳೋಣ ಎಂದು ಹೇಳಿದರು. ಇಷ್ಟಾದರೂ ಸದನದಲ್ಲಿ ಗದ್ದಲ ಮುಂದುವರೆದೇ ಇತ್ತು.

ಅಷ್ಟರಲ್ಲೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸದನಕ್ಕೆ ಆಗಮಿಸಿದರು. ಈ ರೀತಿ ಸಚಿವರ ಉತ್ತರಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ನೀವು ಮಾತನಾಡುವಾಗ ಆಡಳಿತ ಪಕ್ಷದವರು ತಾಳ್ಮೆಯಿಂದ ಕೇಳಿದ್ದಾರೆ. ಸಚಿವರು ಉತ್ತರ ನೀಡಿದ ನಂತರ ಪ್ರಶ್ನೆ ಕೇಳಿ ಎಂದು ಸದನದ ಗದ್ದಲಕ್ಕೆ ತೆರೆ ಎಳೆದರು.

ಲಾಕ್​ಡೌನ್​ನಿಂದ ನಿಯಂತ್ರಣ

ಇದಕ್ಕೂ ಮುನ್ನ ಮಾತನಾಡಿದ ಸಚಿವರು, ಲಾಕ್​ಡೌನ್​ನಿಂದ ಸೋಂಕು ದೇಶದಲ್ಲಿ ನಿಯಂತ್ರಣವಾಯಿತು. ಜತೆಗೆ ಆರೋಗ್ಯ ವ್ಯವಸ್ಥೆಯನ್ನು ಮಾಡಲು ಲಾಕ್‌ಡೌನ್ ನೆರವಾಯಿತು. ಸೋಂಕು ನಿಯಂತ್ರಣದಲ್ಲಿ ಯಾವುದೇ ಲೋಪವಾಗಿಲ್ಲ. ಎಲ್ಲ ಪ್ರಯತ್ನ ನಡೆದಿದೆ ಎಂಬುದನ್ನು ಸದನದಲ್ಲಿ ಹೇಳಿದರು.

ABOUT THE AUTHOR

...view details