ಕರ್ನಾಟಕ

karnataka

ETV Bharat / state

ಮಾರುಕಟ್ಟೆ, ಹೋಟೆಲ್​ಗಳ ಬಳಿ ಮೊಬೈಲ್ ಯುನಿಟ್​ನಲ್ಲಿ ಕೊರೊನಾ ಚೆಕಪ್: ಬಿಬಿಎಂಪಿ ಆಯುಕ್ತ - Mobile Unit near Market, Hotel

ಮಾರುಕಟ್ಟೆ, ಆಸ್ಪತ್ರೆ, ಹೋಟೆಲ್​ಗಳಲ್ಲಿ ವೇಟರ್ಸ್, ಬಿಲ್ ಬರೆಯುವವರು, ಮಾರುಕಟ್ಟೆಯ ವ್ಯಾಪಾರಿಗಳು ಒಂದು ದಿನಕ್ಕೆ ಐವತ್ತು ಜನರಿಗೆ ಕೊರೊನಾ ಸ್ಪ್ರೆಡ್ ಮಾಡುವ ಸಾಧ್ಯತೆ ಇದೆ. ಹೀಗಾಗಿ ಮೊಬೈಲ್ ಯೂನಿಟ್​ನಲ್ಲಿ ಗಂಟಲು ದ್ರವ ಕಲೆಕ್ಟ್​​ ಮಾಡಿ ಕಳಿಸಲಾಗುವುದು. ಇದನ್ನು ಎರಡು ದಿನಗಳಲ್ಲಿ ಆರಂಭಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.

ಅನಿಲ್ ಕುಮಾರ್
ಅನಿಲ್ ಕುಮಾರ್

By

Published : Jun 18, 2020, 10:02 PM IST

ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಪ್ರತೀ ಜಿಲ್ಲೆಗಳಲ್ಲಿ ರ‍್ಯಾಂಡಮ್ ಚೆಕಪ್ ನಡೆಸಲು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಇದನ್ನು ನಗರದಲ್ಲಿ ಕಾರ್ಯಗತಗೊಳಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ.

ಈ ಕುರಿತು ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಮಾತನಾಡಿ, ಈಗಾಗಲೇ ಬೇಕಾದ ಪ್ರದೇಶಗಳನ್ನು ಗುರುತಿಸಲಾಗಿದೆ. ಹೈರಿಸ್ಕ್ ಇರುವವರು ಯಾವ ಯಾವ ಏರಿಯಾದಲ್ಲಿ ಇದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆಯಲಾಗಿದೆ. ಜ್ವರದ ಕ್ಲಿನಿಕ್​ಗಳಲ್ಲಿ, ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಲು ತೀರ್ಮಾನಿಸಲಾಗಿದೆ. ಜೊತೆಗೆ ಹೊಸದಾಗಿ ಮೊಬೈಲ್ ಗಂಟಲು ದ್ರವ ಕಲೆಕ್ಷನ್ ಯೂನಿಟ್ ಸೆಟಪ್ ಮಾಡಲು ತೀರ್ಮಾನಿಸಲಾಗಿದೆ. ಇಪ್ಪತ್ತರಿಂದ ಮೂವತ್ತು ಮೊಬೈಲ್ ಯೂನಿಟ್ ಮಾಡಲಾಗುವುದು ಎಂದು ತಿಳಿಸಿದರು.

ಈಟಿವಿ ಭಾರತದೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್

ಮಾರುಕಟ್ಟೆ, ಆಸ್ಪತ್ರೆ, ಹೋಟೆಲ್​ಗಳಲ್ಲಿ ವೇಟರ್ಸ್, ಬಿಲ್ ಬರೆಯುವವರು, ಮಾರುಕಟ್ಟೆಯ ವ್ಯಾಪಾರಿಗಳು ಒಂದು ದಿನಕ್ಕೆ ಐವತ್ತು ಜನರಿಗೆ ಸೋಂಕು ಸ್ಪ್ರೆಡ್ ಮಾಡುವ ರಿಸ್ಕ್ ಇದೆ. ಹೀಗಾಗಿ ಮೊಬೈಲ್ ಯೂನಿಟ್​ನಲ್ಲಿ ಗಂಟಲು ದ್ರವ ಕಲೆಕ್ಟ್ ಮಾಡಿ ಕಳಿಸಲಾಗುವುದು. ಇದನ್ನು ಎರಡು ದಿನಗಳಲ್ಲಿ ಆರಂಭಿಸಲಾಗುವುದು ಎಂದರು.

ಈ ಟೆಸ್ಟ್ ಮಾಡಿದ ವರದಿ ಆದಷ್ಟು ಬೇಗ ಬರಲಿದೆ. ರಾಜ್ಯದಲ್ಲಿ 72 ಲ್ಯಾಬ್​ಗಳಿವೆ. ಪ್ರತ್ಯೇಕವಾಗಿ ಬೆಂಗಳೂರಿಗೆ 28 ಲ್ಯಾಬ್​ಗಳಿವೆ. ಹೀಗಾಗಿ ಇಪ್ಪತ್ನಾಲ್ಕು ಗಂಟೆಯಲ್ಲಿ ಟೆಸ್ಟಿಂಗ್ ವರದಿ ಬರಲಿದೆ ಎಂದರು.

ABOUT THE AUTHOR

...view details