ಕರ್ನಾಟಕ

karnataka

ETV Bharat / state

ಮತ್ತೆ ಕಲಬುರಗಿಗೆ ವಕ್ಕರಿಸಿದ ಕೊರೊನಾ: 8 ಹೊಸ ಸೋಂಕಿತರು ಪತ್ತೆ

ರಾಜ್ಯದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇಂದು ಮಧ್ಯಾಹ್ನದವರೆಗೆ 9 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.

corona
ಕೊರೊನಾ

By

Published : Apr 29, 2020, 1:29 PM IST

ಬೆಂಗಳೂರು:ರಾಜ್ಯದಲ್ಲಿ ಕೊರೊನಾ‌ ಸೋಂಕಿತರ ಸಂಖ್ಯೆ 532ಕ್ಕೆ ಏರಿಕೆ ಆಗಿದೆ.‌ ಇಂದು ಮಧ್ಯಾಹ್ನದ ವೇಳೆಗೆ 9 ಸೋಂಕಿತರು ಪತ್ತೆಯಾಗಿದ್ದಾರೆ. ಕಲಬುರಗಿಯಲ್ಲಿ ದಿನ ಕಳೆದಂತೆ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ. ನಾಲ್ಕು ವರ್ಷದ ಮಗುವಿಗೂ ಸೋಂಕು ತಗುಲಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವಿಟರ್​ನಲ್ಲಿ ಮಾಹಿತಿ ನೀಡಿದ್ದಾರೆ.


ಕೊರೊನಾ ಸೋಂಕಿತರ ವಿವರ ಹೀಗಿದೆ..
1.ರೋಗಿ-524: ಹುಕ್ಕೇರಿಯ 12 ವರ್ಷದ ಬಾಲಕನಿಗೆ ಸೋಂಕು, ರೋಗಿ-293ರ ಸಂಪರ್ಕ ಇದ್ದು, ಬೆಳಗಾವಿಯಲ್ಲಿ ಚಿಕಿತ್ಸೆ

2.ರೋಗಿ-525: ಕಲಬುರಗಿಯ 4 ವರ್ಷದ ಹೆಣ್ಣು ಮಗುವಿಗೆ ಸೋಂಕು. ‌ರೋಗಿ-395ರ ಸಂಪರ್ಕದಿಂದ ಸೋಂಕು, ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ

3.ರೋಗಿ-526: ಕಲಬುರಗಿಯ 28 ವರ್ಷದ ಯುವಕನಿಗೆ ಸೋಂಕು. ರೋಗಿ- 515ರ ಸಂಪರ್ಕ, ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ

4.ರೋಗಿ-527: ಕಲಬುರಗಿಯ 14 ವರ್ಷದ ಬಾಲಕಿಗೆ ಸೋಂಕು. ‌ರೋಗಿ-425ರ ಸಂಪರ್ಕ, ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ

5.ರೋಗಿ-528: ಕಲಬುರಗಿಯ 22 ವರ್ಷದ ಯುವಕನಿಗೆ ಸೋಂಕು. ರೋಗಿ-205 ರ ಸಂಪರ್ಕ, ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ

6.ರೋಗಿ-529: ಕಲಬುರಗಿಯ 40 ವರ್ಷದ ಮಹಿಳೆಗೆ ಸೋಂಕು. ರೋಗಿ-425ರ ಸಂಪರ್ಕ, ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ

7.ರೋಗಿ-530: ಕಲಬುರಗಿಯ 20 ವರ್ಷದ ಯುವಕನಿಗೆ ಸೋಂಕು. ರೋಗಿ-205ರ ಸಂಪರ್ಕ, ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ

8.ರೋಗಿ-531: ಕಲಬುರಗಿಯ 17 ವರ್ಷದ ಯುವತಿಗೆ ಸೋಂಕು. ರೋಗಿ-425ರ ಸಂಪರ್ಕ, ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ

9.ರೋಗಿ-532: ಕಲಬುರಗಿಯ 12 ವರ್ಷದ ಬಾಲಕಿಗೆ ಸೋಂಕು. ರೋಗಿ-425ರ ಸಂಪರ್ಕ, ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ

ABOUT THE AUTHOR

...view details