ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ವಲಯವಾರು ಜನಪ್ರತಿನಿಧಿಗಳ ಸಭೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಂದಾಗಿದ್ದು, ಇಂದು ನಾಲ್ಕು ವಲಯಗಳ ಸಭೆ ಕರೆದಿದ್ದಾರೆ.
ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಳ: ವಲಯವಾರು ಜನಪ್ರತಿನಿಧಿಗಳ ಸಭೆ ಕರೆದ ಸಿಎಂ - zone Representatives meeting
ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ನಿಯತ್ರಣಕ್ಕಾಗಿ ವಲಯವಾರು ಜನಪ್ರತಿನಿಧಿಗಳ ಸಭೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಂದಾಗಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಬೆಳಗ್ಗೆ 10 ರಿಂದ11 ಗಂಟೆವರೆಗೆ ರಾಜರಾಜೇಶ್ವರಿನಗರ ವಲಯದ ಕುರಿತು ಸಭೆ ನಡೆಯಲಿದೆ. 12.30- 1.30 ರವರೆಗೆ ದಾಸರಹಳ್ಳಿ ವಲಯದ ಬಗ್ಗೆ ಸಭೆ ನಡೆಸಲಿದ್ದಾರೆ. ಸಂಜೆ 4-5 ರವರೆಗೆ ಬೊಮ್ಮನಹಳ್ಳಿ ವಲಯದ ಬಗ್ಗೆ ಸಭೆ ನಡೆಸಲಿದ್ದು, ಸಂಜೆ 5-6 ಗಂಟೆವರೆಗೆ ಮಹದೇವಪುರ ವಲಯದ ಬಗ್ಗೆ ಸಭೆ ನಡೆಸಲಿದ್ದಾರೆ.
ಆಯಾ ವಲಯದ ಉಸ್ತುವಾರಿ ಸಚಿವರು, ಅಧಿಕಾರಿಗಳು, ಎಲ್ಲಾ ಪಕ್ಷದ ಶಾಸಕರು, ಸಂಸದರು, ಬಿಬಿಎಂಪಿ ವಿಶೇಷ ಆಯುಕ್ತ, ಜಂಟಿ ಆಯುಕ್ತರು ಹಾಗು ಸಂಬಂಧಪಟ್ಟ ಅಧಿಕಾರಿಗಳನ್ನು ಸಭೆಗೆ ಆಹ್ವಾನಿಸಲಾಗಿದೆ. ಆಯಾ ವಲಯದಲ್ಲಿ ಸೋಂಕಿನ ಪ್ರಮಾಣ, ಹಬ್ಬುತ್ತಿರುವ ವೇಗ, ನಿಯಂತ್ರಣಕ್ಕೆ ಇರುವ ತೊಡಕುಗಳ ಬಗ್ಗೆ ಸಿಎಂ ಸಮಾಲೋಚನೆ ನಡೆಸಲಿದ್ದು, ಪರಿಹಾರ ಹಾಗು ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಲಿದ್ದಾರೆ.