ಬೆಂಗಳೂರು:ರಾಜ್ಯದಲ್ಲಿಂದು 308 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಮೂವರು ಸಾವಿಗೀಡಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 5,760 ಕ್ಕೆ ಏರಿಕೆಯಾಗಿದ್ದು, ಮೃತಪಟ್ಟವರ ಸಂಖ್ಯೆ 64ಕ್ಕೆ ತಲುಪಿದೆ.
ಇಂದು 387 ಜನ ಬಿಡುಗಡೆ ಹೊಂದಿದ್ದು, ಒಟ್ಟು 2,519 ಮಂದಿ ಗುಣಮುಖರಾಗಿದ್ದಾರೆ. 3,175 ಸಕ್ರಿಯ ಪ್ರಕರಣಗಳಿದ್ದು, 14 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದಿನ 308 ಕೊರೊನಾ ಸೋಂಕಿತರ ಪೈಕಿ 277 ಹೊರ ರಾಜ್ಯದವರಾಗಿದ್ದು, ಒಬ್ಬರು ಅಂತಾರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ.