ರಾಜ್ಯದಲ್ಲಿಂದು ಕೋವಿಡ್ ಸೋಂಕು ಇಳಿಕೆ ; 801 ಮಂದಿಗೆ ಸೋಂಕು ದೃಢ, 15 ಬಲಿ - New Corona cases in Karantaka
15 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 37,487ಕ್ಕೆ ಏರಿದೆ. ಈ ಮೂಲಕ ಸಾವಿನ ಶೇಕಡಾವಾರು ಪ್ರಮಾಣ 1.87% ರಷ್ಟಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಇಳಿಕೆ ಕಾಣ್ತಿದ್ದು, ಸಕ್ರಿಯ ಪ್ರಕರಣ ಕಡಿಮೆ ಆಗಿವೆ. ಇತ್ತ ಸೋಂಕಿತರ ಸಂಖ್ಯೆಗಿಂತ ಗುಣಮುಖರ ಸಂಖ್ಯೆ ಏರಿಕೆ ಕಂಡಿದೆ..
ಕೋವಿಡ್ ಸೋಂಕು ಇಳಿಕೆ
By
Published : Sep 11, 2021, 6:58 PM IST
ಬೆಂಗಳೂರು :ರಾಜ್ಯದಲ್ಲಿಂದು 1,19,503 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಇದರಲ್ಲಿ 801 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 29,60,932ಕ್ಕೆ ಏರಿಕೆ ಕಂಡಿದೆ.
ಈ ಮೂಲಕ ಪಾಸಿಟಿವಿಟಿ ದರ 0.67% ರಷ್ಟಿದೆ. ಇನ್ನು, 1142 ಸೋಂಕಿತರು ಗುಣಮುಖರಾಗಿದ್ದಾರೆ. ಈ ತನಕ 29,06,746 ಜನರು ಡಿಸ್ಜಾರ್ಜ್ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣ 16,672ರಷ್ಟಿವೆ.
15 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 37,487ಕ್ಕೆ ಏರಿದೆ. ಈ ಮೂಲಕ ಸಾವಿನ ಶೇಕಡಾವಾರು ಪ್ರಮಾಣ 1.87% ರಷ್ಟಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಇಳಿಕೆ ಕಾಣ್ತಿದ್ದು, ಸಕ್ರಿಯ ಪ್ರಕರಣ ಕಡಿಮೆ ಆಗಿವೆ. ಇತ್ತ ಸೋಂಕಿತರ ಸಂಖ್ಯೆಗಿಂತ ಗುಣಮುಖರ ಸಂಖ್ಯೆ ಏರಿಕೆ ಕಂಡಿದೆ.