ಕರ್ನಾಟಕ

karnataka

ETV Bharat / state

ಬೆಂಗಳೂರಿನ ಸೋಂಕಿತರಲ್ಲಿ ಶೇ 32ರಷ್ಟು ಈ ವಯಸ್ಸಿನವರು: ಇಲ್ಲಿದೆ ವಿವರ..

ಬೆಂಗಳೂರಿನ ಯುವ ಸಮುದಾಯದಲ್ಲೇ ಕೊರೊನಾ ಸೋಂಕು ಹೆಚ್ಚುತ್ತಿದ್ಯಾ? ಅನ್ನೋ ಅನುಮಾನಗಳು ಕಾಡುತ್ತಿವೆ. ಏಕೆಂದರೆ, ಒಟ್ಟು ಸೋಂಕಿತರಲ್ಲಿ ಶೇ.32ರಷ್ಟು ಮಂದಿ 20ರಿಂದ 29 ವರ್ಷ ವಯಸ್ಸಿನವರಾಗಿದ್ದಾರೆ.

banaglore youths
ಯುವಸಮೂಹ

By

Published : Apr 7, 2020, 2:14 PM IST

ಬೆಂಗಳೂರು: ಮೊದಮೊದಲು ಕೊರೊನಾ ಸೋಂಕು 60 ವರ್ಷ ಮೇಲ್ಪಟ್ಟವರಿಗೆ ಬಹು ಬೇಗ ಹರಡುತ್ತಿದೆ ಎಂಬ ಊಹೆ ಇತ್ತು. ಆದರೆ ಇದೀಗ ಅಂಕಿ ಅಂಶಗಳನ್ನು ಗಮನಿಸಿದರೆ ಯುವ ಸಮುದಾಯದಲ್ಲೇ ಕೊರೊನಾ ಸೋಂಕು ಹೆಚ್ಚು ಹರಡುತ್ಯಿದ್ಯಾ ಅನ್ನೋ ಆತಂಕ ಕಾಡುತ್ತಿದೆ. ಅದರಲ್ಲೂ ಬೆಂಗಳೂರಿನ ಯುವ ಸಮುದಾಯದಲ್ಲೇ ಕೊರೊನಾ ಸೋಂಕು ಹೆಚ್ಚುತ್ತಿದ್ಯಾ? ಅನ್ನೋ ಅನುಮಾನಗಳು ಕಾಡುತ್ತಿವೆ. ಏಕೆಂದರೆ, ಒಟ್ಟು ಸೋಂಕಿತರಲ್ಲಿ ಶೇ.32ರಷ್ಟು ಮಂದಿ 20ರಿಂದ 29 ವರ್ಷ ವಯಸ್ಸಿನವರು ಇದ್ದಾರೆ.‌
ಈವರೆಗೆ ಸೋಂಕಿಗೊಳಗಾದ ನಗರದ 59 ಮಂದಿಯಲ್ಲಿ 18 ಮಂದಿ ಯುವಜನರಿದ್ದಾರೆ. ಯುವಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದರಿಂದ ಬೇಗ ಚೇತರಿಕೆಯಾಗುತ್ತಿದ್ದಾರೆ.ಈಗ ಸೋಂಕು ಕಾಣಿಸಿಕೊಂಡ ಯುವಜನರೆಲ್ಲಾ ವಿದೇಶಗಳಿಗೆ ಪ್ರಯಾಣಿಸಿದ ಹಿನ್ನೆಲೆ ಹೊಂದಿದ್ದು, ಅನೇಕರು ಅಮೆರಿಕ, ಇಂಗ್ಲೆಂಡ್‌, ಸ್ಪೇನ್‌‍ನಿಂದ ಹಿಂದಿರುಗಿದವರಾಗಿದ್ದಾರೆ.

ಒಟ್ಟು ಸೋಂಕಿತರಲ್ಲಿ 18 ಮಂದಿ ನಗರದ ಪೂರ್ವ ಭಾಗದಲ್ಲಿರುವ ಶಾಂತಲಾ ನಗರ, ಶಾಂತಿನಗರ, ಸಿ.ವಿ.ರಾಮನ್‌ನಗರ ಹಾಗೂ ಹೆಬ್ಬಾಳ, ಸಂಜಯನಗರ, ನಾಗವಾರದ ನಿವಾಸಿಗಳಾಗಿದ್ದಾರೆ.
11 ಸೋಂಕಿತರು ದಕ್ಷಿಣ ವಲಯದಲ್ಲಿರುವ ಬಸವನಗುಡಿ, ಜಯನಗರ, ಪದ್ಮನಾಭ ನಗರಗಳಿಗೆ ಸೇರಿದವರಾಗಿದ್ದಾರೆ. 8 ಸೋಂಕಿತರು ಹೆಚ್ಚು ಸಾಫ್ಟ್‌‍ವೇರ್‌ ಉದ್ಯೋಗಿಗಳನ್ನು ಒಳಗೊಂಡಿರುವ ಮಹದೇವಪುರ ವಲಯಕ್ಕೆ ಸೇರಿದವರಾಗಿದ್ದಾರೆ.

ಬೊಮ್ಮನಹಳ್ಳಿ ವಲಯದಲ್ಲಿ 6, ರಾಜರಾಜೇಶ್ವರಿ ನಗರ ಹಾಗೂ ಯಲಹಂಕದಲ್ಲಿ ತಲಾ ಒಬ್ಬರು ಸೋಂಕಿತರು ಹಾಗೂ ನಗರದ ಇತರೆಡೆಗಳಲ್ಲಿ 8 ಸೋಂಕಿತರು ಪತ್ತೆಯಾಗಿದ್ದಾರೆ.

ABOUT THE AUTHOR

...view details