ಕರ್ನಾಟಕ

karnataka

ETV Bharat / state

ಬೆಂಗಳೂರಿನ ಕೋವಿಡ್ ಪ್ರಕರಣಗಳಲ್ಲಿ ದಿಢೀರ್ ಇಳಿಕೆ..ಇಂದು 15,738 ಜನರಿಗೆ ಪಾಸಿಟಿವ್!

ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳು ದಿಢೀರ್ ಇಳಿಕೆ ಕಂಡಿದ್ದು, ಇಂದು 15,738 ಜನರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

Corona cases decreases, Corona cases decreases in Karnataka state, Karnataka corona news, Karnataka corona update, ಕೊರೊನಾ ಪ್ರಕರಣಗಳು ಕಡಿಮೆ, ಕರ್ನಾಟಕ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಕಡಿಮೆ, ಕರ್ನಾಟಕ ಕೊರೊನಾ ಸುದ್ದಿ, ಕೊರೊನಾ ಕರ್ನಾಟಕ ಅಪ್​ಡೇಟ್​,
ನಗರದ ಕೋವಿಡ್ ಪ್ರಕರಣಗಳಲ್ಲಿ ದಿಢೀರ್ ಇಳಿಕೆ

By

Published : May 10, 2021, 8:41 AM IST

ಬೆಂಗಳೂರು:ನಗರದ ಕೋವಿಡ್ ಪ್ರಕರಣಗಳಲ್ಲಿ ದಿಢೀರ್ ಐದು ಸಾವಿರ ಪ್ರಕರಣಗಳು ಇಳಿಕೆಯಾಗಿದ್ದು, ಇಂದು 15,738 ಜನರಿಗೆ ಪಾಸಿಟಿವ್ ದೃಢಪಟ್ಟಿದೆ. ಸಾಮಾನ್ಯವಾಗಿ ಭಾನುವಾರ ಹೆಚ್ಚಿನ ಲ್ಯಾಬ್, ಟೆಸ್ಟಿಂಗ್ ಸೆಂಟರ್ ಹಾಗೂ ಸಿಬ್ಬಂದಿ ರಜೆ ಇರುವುದರಿಂದಲೂ ಪ್ರಕರಣಗಳಲ್ಲಿ ಇಳಿಕೆ ಕಂಡಿರುವ ಸಾಧ್ಯತೆ ಇದೆ. 15,738 ಪ್ರಕರಣಗಳ ಪೈಕಿ ಬೊಮ್ಮನಹಳ್ಳಿಯಲ್ಲಿ 1496, ದಾಸರಹಳ್ಳಿ 499, ಪೂರ್ವ ವಲಯ 2,118, ಮಹದೇವಪುರ 2,205, ಆರ್ ಆರ್ ನಗರದಲ್ಲಿ 1,193, ದಕ್ಷಿಣ ವಲಯದಲ್ಲಿ 1,823, ಪಶ್ಚಿಮ 1,520, ಯಲಹಂಕ 1,159, ಬೆಂಗಳೂರು ಹೊರವಲಯ 1,694 ಪ್ರಕರಣಗಳು ಸೇರಿವೆ.

ಓದಿ:ಕೊರೊನಾ ಮಣಿಸಿ ಬಂದ ಬಗ್ಗೆ ಬಾಯ್ಬಿಟ್ಟ ‘ಅಭಿನಯ ಚಕ್ರವರ್ತಿ’

ಕೋವಿಡ್ ಸೋಂಕು ಪರೀಕ್ಷೆ ವಿಚಾರದಲ್ಲಿಯೂ ನಿನ್ನೆ ಕಡಿಮೆ ಪ್ರಮಾಣದಲ್ಲಿ ಟಾರ್ಗೆಟ್ ರೀಚ್ ಆಗಿದ್ದು, ಕೇವಲ 66.51% ಕೋವಿಡ್ ಸೋಂಕು ಪರೀಕ್ಷೆ ನಡೆಸಲಾಗಿದೆ. ನಿನ್ನೆ 20,897 ಜನರಿಗೆ ಪಾಸಿಟಿವ್ ದೃಢಪಟ್ಟಿದ್ದು, 281 ಮಂದಿ ಮೃತಪಟ್ಟಿದ್ದರು.

ಸಕ್ರಿಯ ಪ್ರಕರಣಗಳ ಸಂಖ್ಯೆ 3,50,370ಕ್ಕೆ ಏರಿಕೆಯಾಗಿದ್ದು, ನಾಳೆಯೂ ಸೋಂಕಿತರ ಪ್ರಕರಣಗಳು 20 ಸಾವಿರಕ್ಕಿಂತ ಕಡಿಮೆ ಬಂದರೆ ಕಳೆದ ವಾರ ನಗರದಲ್ಲಿದ್ದ ಟಫ್ ಕೋವಿಡ್ ಕರ್ಫ್ಯೂ ಪರಿಣಾಮದಿಂದಾಗಿ ಕೊರೊನಾ ಕೇಸ್​​ಗಳು ಹತೋಟಿಗೆ ಬರುತ್ತಿವೆ ಎಂದು ಹೇಳಬಹುದಾಗಿದೆ.

ಓದಿ:ಸಹಜ ಸಾವಿಗೂ ಕೊರೊನಾ ಬಣ್ಣ.. ಕೊಳ್ಳೇಗಾಲದಲ್ಲಿ ಬೈಕ್​ ಮೇಲೆ ವೃದ್ಧನ ಶವ ಸಾಗಿಸಿ ಅಂತ್ಯಕ್ರಿಯೆ!

ABOUT THE AUTHOR

...view details