ಬೆಂಗಳೂರು:ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯಲ್ಲಿ ದಿನ ಕಳೆದಂತೆ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ. ಇದೇ ಮೊದಲ ಬಾರಿಗೆ ಒಂದು ಸಾವಿರಕ್ಕೆ ಸೋಂಕಿತರ ಸಂಖ್ಯೆ ಇಳಿಕೆ ಕಂಡಿದೆ.
ರಾಜ್ಯದಲ್ಲಿಂದು 69,546 ಜನರಿಗೆ ಪರೀಕ್ಷೆ ನಡೆಸಲಾಗಿದ್ದು, 1,568 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,28,237ಕ್ಕೆ ಏರಿಕೆಯಾಗಿದೆ. ಪಾಸಿಟಿವಿಟಿ ದರ ಶೇ 2.25 ರಷ್ಟಿದೆ. ಈ ದಿನ 6,025 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 38,57,323 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ 31,215 ಪ್ರಕರಣಗಳು ಸಕ್ರಿಯವಾಗಿವೆ.
ಇಂದು ಸೋಂಕಿಗೆ 25 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 39,665 ಏರಿಕೆ ಕಂಡಿದೆ. ಡೆತ್ ರೇಟ್ ಶೇ 1.59 ರಷ್ಟಿದೆ. ಇನ್ನು ವಿಮಾನ ನಿಲ್ದಾಣದಲ್ಲಿ 1,221 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ. 574 ವಿದೇಶಿಗರು ಹೈ ರಿಸ್ಕ್ ದೇಶದಿಂದ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.
ರಾಜಧಾನಿ ಬೆಂಗಳೂರು ಕೋವಿಡ್ ಅಪ್ಡೇಟ್ಸ್:ಬೆಂಗಳೂರಿನಲ್ಲಿ 754 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 17,71,622ಕ್ಕೆ ಏರಿದೆ. 2089 ಜನರು ಡಿಸ್ಜಾರ್ಜ್ ಆಗಿದ್ದು 17,41,957 ಗುಣಮುಖರಾಗಿದ್ದಾರೆ. 5 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,774 ರಷ್ಟಿದ್ದು, ಸದ್ಯ 12,890 ಪ್ರಕರಣಗಳು ಸಕ್ರಿಯವಾಗಿವೆ.
ರೂಪಾಂತರಿ ವೈರಸ್ ಅಪಡೇಟ್ಸ್:
ಅಲ್ಪಾ- 156
ಬೇಟಾ-08