ಬೆಂಗಳೂರು: ವಿಜಯಪುರ 1, ಮೈಸೂರು 3, ಕಲಬುರಗಿ 2, ಮಂಡ್ಯ 1, ಬಾಗಲಕೋಟೆ 2, ಬೆಳಗಾವಿ 1, ಹುಬ್ಬಳ್ಳಿ-ಧಾರವಾಡ 1, ಗದಗ 1 ಕಾಣಿಸಿಕೊಂಡಿದೆ. ಇಂದು ಮಧ್ಯಾಹ್ನದವರೆಗೆ ಬೆಂಗಳೂರಲ್ಲಿ ಯಾವುದೇ ಪಾಸಿಟಿವ್ ಕೇಸ್ ಪತ್ತೆಯಾಗಿಲ್ಲ. ಆದರೆ 6 ಜನ ಸೆಕೆಂಡರಿ ಸಂಪರ್ಕಿತರಲ್ಲಿ ಸೋಂಕು ಪತ್ತೆಯಾಗಿದೆ.
ಸೋಂಕಿತರ ಟ್ರಾವೆಲ್ ಹಿಸ್ಟರಿ ಹೀಗಿದೆ: (360-371)
ರೋಗಿ-360- ಕಲಬುರಗಿಯ 34 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, P-205 ರ ಸಂಪರ್ಕ ಹೊಂದಿದ್ದಾನೆ. ಈತನಿಗೆ ಕಲಬುರಗಿಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ರೋಗಿ-361 ಶಹಬಾದ್, ಕಲಬುರಗಿ ನಿವಾಸಿ 16 ವರ್ಷದ ಯುವಕನಿಗೆ ಸೋಂಕು ತಗುಲಿದೆ. ಈತ P-174 ರ ಸಂಪರ್ಕ ಹೊಂದಿದ್ದು, ಕಲಬುರಗಿಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ರೋಗಿ-362 ವಿಜಯಪುರದ 60 ವರ್ಷದ ವೃದ್ಧನಿಗೆ ಕೊರೊನಾ ಕಾಣಿಸಿಕೊಂಡಿದೆ. ಈತ P-221 ರ ಸಂಪರ್ಕ ಹೊಂದಿದ್ದು, ವಿಜಯಪುರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ-363 ಹುಬ್ಬಳ್ಳಿ-ಧಾರವಾಡದ 63 ವರ್ಷದ ವೃದ್ಧನಿಗೆ ಸೋಂಕು ತಗುಲಿದೆ. P-236 ರ ದ್ವಿತೀಯ ಸಂಪರ್ಕ ಹೊಂದಿದ್ದು, ಹು-ಧಾ ಚಿಕಿತ್ಸೆ ಪಡೆಯುತ್ತಿದ್ದಾನೆ.
ರೋಗಿ-364 ಹಿರೇಬಾಗೇವಾಡಿಯ 45 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ. P-128 ಸಂಪರ್ಕ ಬೆಳಗಾವಿಯಲ್ಲಿ ಚಿಕಿತ್ಸೆ ನಡೆಯುತ್ತಿದೆ.