ಬೆಂಗಳೂರು:ಸಾಮಾಜಿಕ ಸಂದೇಶಗಳನ್ನು ತಮ್ಮ ಚಿತ್ರಕಲೆಯಿಂದಲೇ ಸಾರುತ್ತಿರುವ ಬಾದಲ್ ನಂಜುಂಡಸ್ವಾಮಿ ಈ ಬಾರಿ ಕೊರೊನಾ ಜಾಗೃತಿ ಮೂಡಿಸಲು ಮಾರ್ವೆಲ್ ಕಾಮಿಕ್ ಸೂಪರ್ ವಿಲನ್ ಥಾನೋಸ್, ಸೋಪ್ ಹಿಡಿದು ಕೈ ತೊಳೆಯುವ ಸಂದೇಶ ನೀಡುವ ಚಿತ್ರವನ್ನ ಬಿಡಿಸಿದ್ದಾರೆ.
ನಗರದಲ್ಲಿ ಥಾನೋಸ್ ಕೈ ತೊಳೆಯುತಿದ್ದಾನೆ ನೋಡಿ! - ಬಾದಲ್ ನಂಜುಂಡಸ್ವಾಮಿ ಚಿತ್ರಕಾರ
ಕೊರೊನಾ ಜಾಗೃತಿಗೆ ಕೆಲ ದಿನಗಳ ಹಿಂದೆ ಟೈಟಾನಿಕ್ ಚಿತ್ರದ ರೋಸ್ ಹಾಗೂ ಜಾಕ್ಗೆ ಮಾಸ್ಕ್ ತೊಡೆಸಿದ ಚಿತ್ರ ಬಿಡಿಸಿದ್ದ ಬಾದಲ್ ನಂಜುಂಡಸ್ವಾಮಿ ಈ ಬಾರಿ ಮಾರ್ವೆಲ್ ಕಾಮಿಕ್ ಸೂಪರ್ ವಿಲನ್ ಥಾನೋಸ್ ಕೈ ತೊಳೆಯುವ ಚಿತ್ರ ಬಿಡಿಸಿದ್ದಾರೆ.

thanos
ಯಲಹಂಕ ಹತ್ತಿರ ಈ ಚಿತ್ರಕಲೆ ಮಾಡಿದ ಬಾದಲ್, ಕೊರೊನಾ ಜಾಗೃತಿಗೆ ಕೆಲ ದಿನಗಳ ಹಿಂದೆ ಟೈಟಾನಿಕ್ ಚಿತ್ರದ ರೋಸ್ ಹಾಗೂ ಜಾಕ್ಗೆ ಮಾಸ್ಕ್ ತೊಡಸಿದ ಚಿತ್ರ ವೈರಲ್ ಆಗಿತ್ತು.
ರಸ್ತೆಗುಂಡಿಗೆ ತಮ್ಮದೇ ರೀತಿಯಲ್ಲಿ ಚಿತ್ರಗಳನ್ನು ಬಿಡಿಸಿ ವಿಡಂಬನೆ ಮಾಡುತ್ತಾ ಸರ್ಕಾರದ ಗಮನ ಸೆಳೆದಿದ್ದರು. ಈಗ ಕೊರೊನಾ ಜಾಗೃತಿ ಮೂಡಿಸಲು ಈ ರೀತಿ ಚಿತ್ರಕಲೆಗಳನ್ನು ಮಾಡುತ್ತಿದ್ದಾರೆ ಬಾದಲ್ ನಂಜುಂಡಸ್ವಾಮಿ.