ಬೆಂಗಳೂರು:ಕೊರೊನಾ ಸೋಂಕು ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಫೀವರ್ ಕ್ಲಿನಿಕ್ ತೆರೆಯಲಾಗಿದೆ. ಈಗ ಅವುಗಳಲ್ಲಿ ಕೋವಿಡ್ ಟೆಸ್ಟ್ ಮಾಡುವ ವ್ಯವಸ್ಥೆಯನ್ನೂ ಮಾಡಲಾಗಿದೆ.
ಬೆಂಗಳೂರಿನ ದೊಮ್ಮಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಆಂಟಿಜೆನ್ ಟೆಸ್ಟ್ ವ್ಯವಸ್ಥೆ - ಕೊರೊನಾ ಆಂಟೆಜೆನ್ ಚೆಕಪ್
ದೊಮ್ಮಲೂರು ವಾರ್ಡ್ನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕೋವಿಡ್ ಫೀವರ್ ಕ್ಲಿನಿಕ್ ಆಗಿ ಬದಲಾಯಿಸಲಾಗಿದ್ದು, ಇಲ್ಲಿ ಕೊರೊನಾ ಆಂಟಿಜೆನ್ ಟೆಸ್ಟ್ ವ್ಯವಸ್ಥೆ ಕೂಡ ಇದೆ ಎಂದು ಪಾಲಿಕೆ ಸದಸ್ಯ ಲಕ್ಷ್ಮಿನಾರಾಯಣ್ ತಿಳಿಸಿದ್ದಾರೆ.
ಪಾಲಿಕೆ ಸದಸ್ಯ ಲಕ್ಷ್ಮಿನಾರಾಯಣ್
ದೊಮ್ಮಲೂರು ವಾರ್ಡ್ನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕೋವಿಡ್ ಫೀವರ್ ಕ್ಲಿನಿಕ್ ಆಗಿ ಬದಲಾಯಿಸಲಾಗಿದೆ. ಕೊರೊನಾ ಆಂಟಿಜೆನ್ ಟೆಸ್ಟ್ ಮಾಡಿಸುವ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ಪಾಲಿಕೆ ಸದಸ್ಯ ಲಕ್ಷ್ಮಿ ನಾರಾಯಣ್ ತಿಳಿಸಿದ್ದಾರೆ.
ಯಾರಿಗಾದರೂ ಕೊರೊನಾ ಕಂಡು ಬಂದರೆ ಅವರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರು ಕೂಡಲೇ ಇಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬಹುದು. ಅದು ಕೂಡ ಉಚಿತವಾಗಿ. ಜೊತೆಗೆ ಆಂಟಿಜೆನ್ ಕೊರೊನಾ ಟೆಸ್ಟ್ ಸೌಲಭ್ಯವಿದ್ದು, ಕೇವಲ 20 ನಿಮಿಷದಲ್ಲಿ ವರದಿ ಬರಲಿದೆ. ಯಾರೂ ಹೆದರಬಾರದು ಎಂದು ಜನರಲ್ಲಿ ಮನವಿ ಮಾಡಿದ್ದಾರೆ.