ಕರ್ನಾಟಕ

karnataka

ETV Bharat / state

ಬೆಂಗಳೂರಿನ ನೆಹರೂ ತಾರಾಲಯದಲ್ಲಿ ನಕ್ಷತ್ರ ವೀಕ್ಷಣೆಗೂ ತಟ್ಟಿದ ಕೊರೊನಾ ಎಫೆಕ್ಟ್! - ನೆಹರೂ ತಾರಾಲಯ ನಕ್ಷತ್ರ ವೀಕ್ಷಣೆ

ಕೊರೊನಾ ಹಿನ್ನೆಲೆಯಲ್ಲಿ ಬೆಂಗಳೂರಿನ ಜವಾಹರಲಾಲ್​ ನೆಹರೂ ತಾರಾಲಯವೂ ಮೂರು ತಿಂಗಳು ಬಂದ್ ಆಗಿತ್ತು. ಈಗ ಕಚೇರಿ ತೆರೆದಿದ್ದರೂ, ತಾರಾಲಯದ ಥಿಯೇಟರ್ ಬಂದ್ ಆಗಿಯೇ ಇದೆ. ದೈಹಿಕ ಅಂತರ ಕಾಪಾಡುವ ನಿಟ್ಟಿನಲ್ಲಿ, ಇಲ್ಲಿ ಶೋ ನಡೆಸಲು ಇನ್ನೂ ಅನುಮತಿ ಸಿಕ್ಕಿಲ್ಲ.

Corona affect on Jawaharlal Nehru Planetarium
ಬೆಂಗಳೂರಿನ ನೆಹರೂ ತಾರಾಲಯದಲ್ಲಿ ನಕ್ಷತ್ರ ವೀಕ್ಷಣೆಗೂ ತಟ್ಟಿದ ಕೊರೊನಾ ಎಫೆಕ್ಟ್

By

Published : Jun 12, 2020, 3:31 AM IST

ಬೆಂಗಳೂರು:ಕೊರೊನಾ ವೈರಸ್​ ಸಮಾಜದ ಎಲ್ಲಾ ವಿಭಾಗಗಳ ಮೇಲೆ ಕೆಟ್ಟ ಪರಿಣಾಮ ಬೀರಿದ ಹಾಗೆಯೇ ನಕ್ಷತ್ರಗಳ ವೀಕ್ಷಣೆಗೂ ಅಡ್ಡಿಯಾಗಿದೆ. ಬೆಂಗಳೂರಿನ ಜವಾಹರಲಾಲ್​ ನೆಹರೂ ತಾರಾಲಯಕ್ಕೂ ನಕ್ಷತ್ರಗಳನ್ನು ವೀಕ್ಷಣೆ ಮಾಡಲು ಯಾರೂ ಬರದಂತಾಗಿದೆ.

ಹೌದು, ಬೇಸಿಗೆ ರಜೆ ಆರಂಭವಾಯ್ತು ಅಂದ್ರೆ ಬೆಂಗಳೂರಿನ ನೆಹರೂ ತಾರಾಲಯದಲ್ಲಿ ಮಕ್ಕಳ ದಂಡೇ ನೆರೆದಿರುತ್ತಿತ್ತು. ತಾರಾಲಯವು ಮಕ್ಕಳಿಗೆ ವಿಜ್ಞಾನ, ಖಗೋಳ, ಆಕಾಶಕಾಯಗಳ ಬಗ್ಗೆ ಇರುವ ಕುತೂಹಲ ತಣಿಸುವ ಸ್ಥಳವಾಗಿದೆ. ಆದರೆ ಕೋವಿಡ್-19​ ಮಹಾಮಾರಿಯಿಂದ ಈ ಬಾರಿ ಸಾವಿರಾರು ಪುಟಾಣಿಗಳಿಗೆ, ಸಾರ್ವಜನಿಕರಿಗೆ ನಿರಾಸೆಯಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ನೆಹರೂ ತಾರಾಲಯವೂ ಮೂರು ತಿಂಗಳು ಬಂದ್ ಆಗಿತ್ತು. ಈಗ ಕಚೇರಿ ತೆರೆದಿದ್ದರೂ, ತಾರಾಲಯದ ಥಿಯೇಟರ್ ಬಂದ್ ಆಗಿಯೇ ಇದೆ. ದೈಹಿಕ ಅಂತರ ಕಾಪಾಡುವ ನಿಟ್ಟಿನಲ್ಲಿ, ಇಲ್ಲಿ ಶೋ ನಡೆಸಲು ಇನ್ನೂ ಅನುಮತಿ ಸಿಕ್ಕಿಲ್ಲ.

ಬೆಂಗಳೂರಿನ ನೆಹರೂ ತಾರಾಲಯದಲ್ಲಿ ನಕ್ಷತ್ರ ವೀಕ್ಷಣೆಗೂ ತಟ್ಟಿದ ಕೊರೊನಾ ಎಫೆಕ್ಟ್

ಈ ಕುರಿತು ಮಾತನಾಡಿದ ನೆಹರೂ ತಾರಾಲಯದ ನಿರ್ದೇಶಕರಾದ ಪ್ರಮೋದ್ ಗಲಗಲಿ, ತಾರಾಲಯಕ್ಕೆ ಬೇಸಿಗೆ ರಜೆ ಸಮಯದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಸಾಕಷ್ಟು ಜನ ಬರುತ್ತಿದ್ದರು. ಎರಡೇ ತಿಂಗಳಲ್ಲಿ 70 ಸಾವಿರ ಜನರು ಭೇಟಿ ನೀಡುತ್ತಿದ್ದರು. ಈ ವರ್ಷ ಲಾಕ್​ಡೌನ್ ಕಾರಣ ಬಂದ್ ಆಗಿದೆ. ಫೋನ್ ಕರೆ ಮೂಲಕ ಈ ಬಗ್ಗೆ ವಿಚಾರಿಸುತ್ತಲೇ ಇದ್ದಾರೆ. ಆದರೆ ಆನ್​ಲೈನ್ ಮೂಲಕ ಮಾತ್ರ ಆಕಾಶದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಇನ್ನು ವಿಜ್ಞಾನಿ ಆನಂದ್ ಎಂ.ವೈ. ಮಾತನಾಡಿ, ಈ ಹಿಂದೆ ಪ್ರತಿ ದಿನ 45 ನಿಮಿಷದ ಶೋಗಳನ್ನು ಆರೇಳು ಬಾರಿ ತೋರಿಸಲಾಗುತ್ತಿತ್ತು. ಕನ್ನಡದಲ್ಲಿ ನಾಲ್ಕು, ಇಂಗ್ಲಿಷ್​ನಲ್ಲಿ ಮೂರು ಶೋ ತೋರಿಸಲಾಗುತ್ತಿತ್ತು. ಆದರೆ ಈಗ ಎಲ್ಲವೂ ನಿಂತುಹೋಗಿದೆ. ಜನರಿಗೆ ಫೇಸ್​ಬುಕ್, ತಾರಾಲಯದ ವೆಬ್​ಸೈಟ್, ಯೂಟ್ಯೂಬ್ ಮೂಲಕ ನಕ್ಷತ್ರ ವೀಕ್ಷಣೆಗೆ ಕುರಿತಾದ ಮಾಹಿತಿ, ವಿಜ್ಞಾನದ ಕುರಿತ ಮಾಹಿತಿ ನೀಡಲಾಗುತ್ತಿದೆ. ಆದರೆ ಇಲ್ಲಿರುವ ಥಿಯೇಟರ್ ಶೋಗಳನ್ನು ಆನ್​ಲೈನ್ ಮೂಲಕ ತೋರಿಸಲು ಸಾಧ್ಯವಿಲ್ಲ. ಬೇರೆ ವೀಡಿಯೋಗಳನ್ನು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗುತ್ತಿದೆ ಎಂದರು.

ABOUT THE AUTHOR

...view details