ಬೆಂಗಳೂರು: ರಾಜ್ಯದ ಜನರು ಕೊರೊನಾ ಮೊದಲ ಹಾಗೂ ಎರಡನೇ ಅಲೆ ಭೀಕರತೆ ಕಂಡಿದ್ದಾರೆ. ಇನ್ನೇನು ಸಹಜ ಸ್ಥಿತಿಗೆ ಮರಳುತ್ತೇವೆ ಎಂದುಕೊಳ್ಳುತ್ತಿರುವಾಗಲೇ ಮೂರನೇ ಅಲೆಯ ಬಗ್ಗೆ ಸರ್ಕಾರಕ್ಕೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಆಗಸ್ಟ್ ಅಂತ್ಯದಲ್ಲಿ ಮೂರನೇ ಅಲೆ ಭೀತಿ ಕುರಿತು ಮಾಹಿತಿ ನೀಡಿರುವ ತಜ್ಞರು, ಯಾವ್ಯಾವ ಜಿಲ್ಲೆಗಳಿಗೆ ಹೆಚ್ಚು ಬಾಧಿಸಲಿದೆ ಅನ್ನುವುದರ ಕುರಿತು ಅಂದಾಜಿಸಿದ್ದಾರೆ. ಮೊದಲ ಹಾಗೂ ಎರಡನೇ ಅಲೆಯಲ್ಲಿ ಹೆಚ್ಚು ಸೋಂಕು ತಗುಲದ ಪ್ರದೇಶಗಳಲ್ಲೇ ಮೂರನೇ ಅಲೆ ಆರ್ಭಟ ಎನ್ನಲಾಗುತ್ತಿದೆ. ಇದಕ್ಕಾಗಿ, ತಜ್ಞರ ತಂಡ ಕರ್ನಾಟಕದಲ್ಲಿ ಸದ್ಯ ನಾಲ್ಕು ರೀತಿಯ ಅಂಶಗಳನ್ನೊಳಗೊಂಡ ವಿಶ್ಲೇಷಣೆಯನ್ನು ಮಾಡಿದೆ.
ಆ ನಾಲ್ಕು ಅಂಶಗಳು ಯಾವುವು?
- ಕಡಿಮೆ ಪ್ರಮಾಣದ ವ್ಯಾಕ್ಸಿನೇಷನ್ ಹಾಗೂ ಕಡಿಮೆ ಪ್ರತಿರೋಧಕ ಶಕ್ತಿ ಇರುವ ಜಿಲ್ಲೆಗಳು
- ಕಡಿಮೆ ಪ್ರಮಾಣದ ವ್ಯಾಕ್ಸಿನೇಷನ್ ಹಾಗೂ ಹೆಚ್ಚು ಪ್ರತಿರೋಧಕ ಶಕ್ತಿ ಇರುವ ಜಿಲ್ಲೆಗಳು
- ಹೆಚ್ಚು ಪ್ರಮಾಣದ ವ್ಯಾಕ್ಸಿನೇಷನ್ ಹಾಗೂ ಕಡಿಮೆ ಪ್ರತಿರೋಧಕ ಶಕ್ತಿ ಇರುವ ಜಿಲ್ಲೆಗಳು
- ಹೆಚ್ಚು ಪ್ರಮಾಣದ ವ್ಯಾಕ್ಸಿನೇಷನ್ ಹಾಗೂ ಹೆಚ್ಚು ಪ್ರತಿರೋಧಕ ಶಕ್ತಿ ಹೊಂದಿರುವ ಜಿಲ್ಲೆಗಳು