ಬೆಂಗಳೂರು:ಮನುಷ್ಯ ದೇಹದಲ್ಲಿರುವ ಜೀವಕೋಶಗಳು ಬಿಡುಗಡೆ ಮಾಡುವ ರಾಸಾಯನಿಕ ಪ್ರೋಟಿನ್‌ಗಳು ವೈರಸ್‌ಗಳನ್ನು ಕೊಲ್ಲುತ್ತವೆ. ಆದ್ರೆ ಕೋವಿಡ್ ವೈರಸ್ ಸೋಂಕಿತರ ದೇಹದಲ್ಲಿ ಅದು ಸಾಧ್ಯವಾಗುತ್ತಿಲ್ಲ. ಈ ವೈರಾಣು ದೇಹದಲ್ಲಿನ ರಕ್ಷಣಾ ಕಣಗಳನ್ನು ಕುಗ್ಗಿಸುತ್ತಾ ಹೋಗುತ್ತೆ. ಆದ್ರೆ ಕೆಲ ನಿರೋಧಕ ಪ್ರೋಟಿನ್‌ಗಳು ಕೋವಿಡ್-19 ಸೋಂಕಿತರಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದು ಬೆಂಗಳೂರಿನ ಆಂಕೋಲಾಜಿಸ್ಟ್ ಡಾ. ವಿಶಾಲ್ ರಾವ್ ತಿಳಿಸಿದ್ದಾರೆ.
ಕೊರೊನಾ ವೈರಸ್ ದೇಹದಲ್ಲಿನ ರಕ್ಷಣಾ ಕಣಗಳನ್ನು ಕುಗ್ಗಿಸುತ್ತಾ ಹೋಗುತ್ತದೆ: ಡಾ. ವಿಶಾಲ್ ರಾವ್ - ಬೆಂಗಳೂರು
ಮಹಾಮಾರಿ ಕೊರೊನಾ ವೈರಸ್ ವ್ಯಕ್ತಿಗೆ ಯಾವ ರೀತಿಯಾಗಿ ಹಬ್ಬುತ್ತಿದೆ ಎಂಬುದರ ಕುರಿತು ಇಲ್ಲಿಯವರೆಗೆ ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವೈದ್ಯರೊಬ್ಬರು ಮಾಹಿತಿ ನೀಡಿದ್ದಾರೆ.
ಸಾಮಾನ್ಯವಾಗಿ ರಕ್ತ ಪರೀಕ್ಷೆಗಾಗಿ ರಕ್ತವನ್ನು ಪಡೆದಾಗ ಹೆಪ್ಪುಗಟ್ಟಿದ ರಕ್ತದ ಕೆನೆಯ ಜೀವಕೋಶಗಳು ಹಾಗೂ ಪ್ರೋಟಿನ್‌ಗಳನ್ನು ಹೊರ ಬಿಡುತ್ತದೆ. ಈ ಎರಡು ರಾಸಾಯನಿಕಗಳು ಮತ್ತು ಪ್ರೋಟಿನ್‌ಗಳನ್ನು ಬಿಡುಗಡೆ ಮಾಡುವ ಸಣ್ಣ ಜೀವಕೋಶಗಳು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗಿವೆ ಎಂದು ವಿಶಾಲ್ ರಾವ್ ಹೇಳಿದ್ದಾರೆ.
ಕೋವಿಡ್ ಸೋಂಕಿತರ ದೇಹದಲ್ಲಿನ ರಕ್ಷಣಾ ಜೀವಕೋಶಗಳನ್ನು ಹೆಚ್ಚಿಸುವ ಸಲುವಾಗಿ ನಾವು ಮಿಶ್ರಿತ ಸೈಟೋಕಿನ್ಸ್‌ಗಳ ಸಿದ್ಧಪಡಿಸಿ ವ್ಯಕ್ತಿಯ ದೇಹಕ್ಕೆ ನೀಡಿದ್ದೇವೆ. ಇದೀಗ ನಾವು ಆರಂಭದ ಹಂತದಲ್ಲಿದ್ದೇವೆ. ತ್ವರಿತ ಪರಿಶೀಲನೆಗಾಗಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಅಂತ ಹೇಳಿದ್ದಾರೆ.