ಕರ್ನಾಟಕ

karnataka

ETV Bharat / state

ತಿಂಡಿ, ಊಟಕ್ಕೆ ಬಗೆ ಬಗೆ ಆಹಾರ ಕೇಳ್ತಿರೊ ಅಮೂಲ್ಯ:  ರೋಸಿ ಹೋದ ಪೊಲೀಸರು - pak slogan in karnataka

ಸದ್ಯ ಬಂಧನದಲ್ಲಿರುವ ದೇಶದ್ರೋಹದ ಆರೋಪ ಎದುರಿಸುತ್ತಿರುವ ಅಮೂಲ್ಯ ಜೈಲಿನಲ್ಲಿ ಖುಷಿ ಖುಷಿಯಾಗಿದ್ದಾಳೆ. ಇಷ್ಟಪಟ್ಟ ಆಹಾರವೇ ಬೇಕೆಂದು ಪೊಲೀಸರ ಮುಂದೆ ಪಟ್ಟು ಹಿಡಿದ ಕಾರಣ ಅಮೂಲ್ಯ ಕಾಟಕ್ಕೆ ರೋಸಿ ಹೋದ ಪೊಲೀಸರು ಅನಿವಾರ್ಯವಾಗಿ ಮಾಂಸಹಾರ ತಿಂಡಿ ತಿನಿಸು ನೀಡಿದ್ದಾರೆ ಎಂದು ತಿಳಿದು ಬಂದಿದೆ.

cops-investigating-amuly-through-royal-treatment
cops-investigating-amuly-through-royal-treatment

By

Published : Feb 28, 2020, 4:22 PM IST

Updated : Feb 28, 2020, 5:15 PM IST

ಬೆಂಗಳೂರು: ದೇಶದ್ರೋಹದ ಘೋಷಣೆ ಕೂಗಿ ಜೈಲು ಸೇರಿರುವ ಅಮೂಲ್ಯ ಲಿಯೋನಾಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇನ್ನು ಅವರಿಗೆ ಪೊಲೀಸರು ಇಷ್ಟದ ಆಹಾರ ನೀಡುವ ಮೂಲಕ ​ತನಿಖೆ ಮುಂದುವರಿಸಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಸದ್ಯ ಪೊಲೀಸರ ಆತಿಥ್ಯದಲ್ಲಿರುವ ಅಮೂಲ್ಯ ಖುಷಿಯಾಗಿದ್ದು, ಇಷ್ಟಪಟ್ಟ ಆಹಾರವೇ ಬೇಕೆಂದು ಪಟ್ಟು ಹಿಡಿದ ಕಾರಣ ಪೊಲೀಸರು ಅನಿವಾರ್ಯವಾಗಿ ಮಾಂಸಹಾರ ತಿಂಡಿ ತಿನಿಸು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ರಾಯಲ್ ಟ್ರೀಟ್ಮೆಂಟ್ ಮೂಲಕ ದೇಶದ್ರೋಹಿ ಅಮೂಲ್ಯ ವಿಚಾರಣೆ

ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ಅಮೂಲ್ಯ ತನಿಖೆ ಚುರುಕು ಗೊಂಡಿದ್ದು‌ ಅಮೂಲ್ಯಳನ್ನು ಬಸವೇಶ್ವರ ಠಾಣೆಯಲ್ಲಿ ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೊತ್ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.

ಬಸವೇಶ್ವರ ಠಾಣೆಗೆ ಬಿಗಿ ಪೊಲೀಸ್ ಬಂದೊಬಸ್ತ್ ಒದಗಿಸಿದ್ದು, ಠಾಣೆಯಲ್ಲಿ ತನಿಖೆ ನಡೆಯುತ್ತಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಒಂದು ಕೆಎಸ್​​ಆರ್​​​ಪಿ ತುಕಡಿ ಸ್ಥಳದಲ್ಲೇ ಮೊಕ್ಕಾಂ ಹೂಡಿ ಠಾಣೆಯ ಸುತ್ತಲೂ ಖಾಕಿ ಸರ್ಪಗಾವಲು ಹಾಕಲಾಗಿದೆ. ಹಾಗೆ ಅಮೂಲ್ಯ ಕಸ್ಟಡಿ ಅಂತ್ಯವಾದ ನಂತರ ಅಮೂಲ್ಯ ಹೇಳಿಕೆಯಲ್ಲಿ ನೀಡಿದ ಹೆಸರುಗಳ ವ್ಯಕ್ತಿಗಳನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ.

Last Updated : Feb 28, 2020, 5:15 PM IST

ABOUT THE AUTHOR

...view details