ಕರ್ನಾಟಕ

karnataka

ಗಯಾನಾದಲ್ಲಿ ಉನ್ನತ ಶಿಕ್ಷಣವನ್ನು ಸುಧಾರಿಸಲು ಸಹಕಾರ ನೀಡಿ: ಪೂರ್ವ ಆಫ್ರಿಕಾ ದೇಶದ ನಿಯೋಗದಿಂದ ಸರ್ಕಾರಕ್ಕೆ ಮನವಿ

By

Published : Mar 2, 2022, 11:02 PM IST

ಗಯಾನಾದಲ್ಲಿ ಉನ್ನತ ಶಿಕ್ಷಣವನ್ನು ಸುಧಾರಿಸಲು ಅಗತ್ಯವಾಗಿರುವ ಕ್ರಮಗಳನ್ನು ಕೈಗೊಳ್ಳಲು ಕರ್ನಾಟಕ ಸರ್ಕಾರ ತಮಗೆ ಸಹಕಾರ ಮತ್ತು ಮಾರ್ಗದರ್ಶನ ನೀಡಬೇಕೆಂದು ನಿಯೋಗದ ಪರವಾಗಿ ಜಾಕೇಬ್ ಮನವಿ ಮಾಡಿಕೊಂಡರು.

C. N Ashwathth Narayana
ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್ ಅಶ್ವತ್ಥ್​ನಾರಾಯಣ

ಬೆಂಗಳೂರು: ಪೂರ್ವ ಆಫ್ರಿಕಾದ ಗಯಾನಾ ದೇಶದಲ್ಲಿರುವ ಗಯಾನಾ ಆನ್​ಲೈನ್ ಅಕಾಡೆಮಿ ಆಫ್ ಲರ್ನಿಂಗ್ (ಗೋಲ್) ಸಂಸ್ಥೆಯ ನಿರ್ದೇಶಕ ಡಾ.ಜಾಕೋಬ್ ಒಪಡೇಯಿ ನೇತೃತ್ವದ ಉನ್ನತ ಮಟ್ಟದ ನಿಯೋಗ ಬುಧವಾರ ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್ ಅಶ್ವತ್ಥ್​ನಾರಾಯಣ ಭೇಟಿ ಮಾಡಿ ಮಾತುಕತೆ ನಡೆಸಿತು.

ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ ಸೇರಿದಂತೆ ಉನ್ನತ ಶಿಕ್ಷಣ ವ್ಯವಸ್ಥೆಯ ಸಮಗ್ರ ಸುಧಾರಣೆಗೆ ತೆಗೆದುಕೊಂಡಿರುವ ಹತ್ತು ಹಲವು ಉಪಕ್ರಮಗಳ ಬಗ್ಗೆ ನಿಯೋಗವು ಮೆಚ್ಚುಗೆ ವ್ಯಕ್ತಪಡಿಸಿತು.

ಗಯಾನಾದಲ್ಲಿ ಉನ್ನತ ಶಿಕ್ಷಣವನ್ನು ಸುಧಾರಿಸಲು ಅಗತ್ಯವಾಗಿರುವ ಕ್ರಮಗಳನ್ನು ಕೈಗೊಳ್ಳಲು ಕರ್ನಾಟಕ ಸರ್ಕಾರ ತಮಗೆ ಸಹಕಾರ ಮತ್ತು ಮಾರ್ಗದರ್ಶನ ನೀಡಬೇಕು ಎಂದು ನಿಯೋಗದ ಪರವಾಗಿ ಜಾಕೇಬ್ ಮನವಿ ಮಾಡಿಕೊಂಡರು.

ಗಯಾನಾದ ಸಬಲೀಕರಣಕ್ಕೆ ರಾಜ್ಯ ಸರ್ಕಾರ ನೆರವು

ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಅಶ್ವತ್ಥನಾರಾಯಣ ಹಿಂದುಳಿದ ದೇಶವಾಗಿರುವ ಗಯಾನಾದ ಯುವಜನರ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಅಗತ್ಯ ನೆರವು ನೀಡಲಿದೆ ಎಂದು ಭರವಸೆ ನೀಡಿದರು.

ಆನ್​ಲೈನ್ ಪದವಿ ಶಿಕ್ಷಣ ಬೋಧಿಸಲಾಗುತ್ತಿದೆ

'ಗೋಲ್’ ಸಂಸ್ಥೆಯು ಬೆಂಗಳೂರಿನ ಜೈನ್ (ಡೀಮ್ಡ್ ಟು ಬಿ ಯೂನಿವರ್ಸಿಟಿ)ಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಇದರ ಪ್ರಕಾರ, ಜೈನ್ ವಿ.ವಿ ಗಯಾನಾದ ವಿದ್ಯಾರ್ಥಿಗಳಿಗೆ ಆನ್-ಲೈನ್ ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣಗಳನ್ನು ಬೋಧಿಸುತ್ತಿದೆ ಎಂದು ನಿಯೋಗವು ವಿವರಿಸಿತು. ಜೈನ್ ವಿವಿಯ ನಿರ್ದೇಶಕರಾದ ಅಂತರರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ ಟಾಮ್ ಜೋಸೆಫ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಓದಿ:ಕಡಲತೀರಕ್ಕೆ ಪಲ್ಲಕ್ಕಿಯಲ್ಲಿ ಪರಶಿವನ ತಂದು ವಿಶೇಷ ಪೂಜೆ: ಸಮುದ್ರ ಸ್ನಾನ ಮಾಡಿ ಜಾತ್ರೆ ಆಚರಣೆ

ABOUT THE AUTHOR

...view details