ಕರ್ನಾಟಕ

karnataka

ETV Bharat / state

ಸಂತೋಷ ಪಾಟೀಲ್ ಆತ್ಮಹತ್ಯೆ: ಸಚಿವ ಆರ್.ಅಶೋಕ್, ಹೆಚ್.ವಿಶ್ವನಾಥ್ ಹೇಳಿದ್ದೇನು?

ಸಂತೋಷ್ ಅವರ ಮನೆಯವರಿಗೆ ಮಾತ್ರ ವಾಟ್ಸಪ್ ಮೆಸೇಜ್ ಬಂದಿದೆ. ಎಫ್​ಎಸ್​ಎಲ್ ಅವರು ರೂಮ್​ಗೆ ಹೋಗಿ ನೋಡಬೇಕಿದೆ. ತನಿಖಾ ವರದಿ ಬರಬೇಕಿದೆ. ವರದಿ ಬರುವ ಮೊದಲೇ ಕಾಂಗ್ರೆಸ್ ಆರೋಪ ಸರಿಯಲ್ಲ ಎಂದು ಸಚಿವ ಆರ್.ಅಶೋಕ್​ ಹೇಳಿದ್ದಾರೆ.

minister r. Ashok, H. Viswanath
ಸಚಿವ ಆರ್. ಅಶೋಕ್, ಹೆಚ್. ವಿಶ್ವನಾಥ್

By

Published : Apr 12, 2022, 6:07 PM IST

Updated : Apr 12, 2022, 7:20 PM IST

ಬೆಂಗಳೂರು: ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ವಿಚಾರವಾಗಿ ಕಂದಾಯ ಸಚಿವ ಆರ್.ಅಶೋಕ್ ಪ್ರತಿಕ್ರಿಯಿಸಿ,'ಅವರು ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತಾ ತಿಳಿದಿದೆ. ಯಾವುದೇ ಆತ್ಮಹತ್ಯೆ ಪತ್ರ ಸಿಕ್ಕಿಲ್ಲ. ಸಂತೋಷ್ ಅವರ ಮನೆಯವರಿಗೆ ಮಾತ್ರ ವಾಟ್ಸಪ್ ಮೆಸೇಜ್ ಬಂದಿದೆ. ಎಫ್​ಎಸ್​ಎಲ್ ಅವರು ರೂಮ್​ಗೆ ಹೋಗಿ ನೋಡಬೇಕಿದೆ. ತನಿಖಾ ವರದಿ ಬರಬೇಕಿದೆ' ಎಂದರು.

'ಈಗಾಗಲೇ ಸಂತೋಷ ಆರೋಪದ ಬಗ್ಗೆ ಸಚಿವ ಕೆ.ಎಸ್. ಈಶ್ವರಪ್ಪ ಕೋರ್ಟ್ ಮೆಟ್ಟಿಲೇರಿದ್ದಾರೆ. ಮಾನನಷ್ಟ ಮೊಕದ್ದಮೆ ಕೇಸ್ ಕೂಡ ಹಾಕಿದ್ದಾರೆ. ವರದಿ ಬರುವ ಮೊದಲೇ ಕಾಂಗ್ರೆಸ್ ಆರೋಪ ಸರಿಯಲ್ಲ. ತನಿಖೆಯಿಂದಲೇ ವರದಿ ಬರಬೇಕಿದೆ. ಅವರ ರೂಮ್ ಪಕ್ಕದಲ್ಲಿ ಸ್ನೇಹಿತರು ಕೂಡ ಇದ್ದರು. ಈ ಬಗ್ಗೆ ಎಲ್ಲವೂ ತನಿಖೆ ಆಗಬೇಕು' ಎಂದು ಹೇಳಿದರು.

ಸಂತೋಷ ಪಾಟೀಲ್ ಆತ್ಮಹತ್ಯೆ ಬಗ್ಗೆ ಸಚಿವ ಆರ್.ಅಶೋಕ್, ಹೆಚ್.ವಿಶ್ವನಾಥ್ ಹೇಳಿಕೆ

ವಿಶ್ವನಾಥ್ ಪ್ರತಿಕ್ರಿಯೆ: ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಮಾತನಾಡಿ, 'ಈಗಾಗಲೇ ರಾಜ್ಯದಲ್ಲಿ ವ್ಯಾಪಕವಾಗಿ ಸಂತೋಷ ಆತ್ಮಹತ್ಯೆ ಪ್ರಕರಣ ಮಾಧ್ಯಮದಲ್ಲಿ ಚರ್ಚೆ ಆಗ್ತಿದೆ. ಪ್ರತಿಪಕ್ಷ ಕೂಡ ವ್ಯಾಪಕ ಚರ್ಚೆ ಮಾಡ್ತಿದೆ. ಸಂತೋಷ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆ ಬೇರೆ ಬೇರೆ ವಿಚಾರ ಇದೆ'.

ಇದನ್ನೂ ಓದಿ:ಆರೋಪ ಮಾಡಿದ್ಕೂಡಲೇ ಸಾಬೀತಾದಂತಲ್ಲ.. ಯಾರ್‌ ಕೊಟ್ಟಿದ್ದು, ಯಾರ್‌ ತೆಗೆದ್ಕೊಂಡಿದ್ದೆಲ್ಲ ಸಾಬೀತಾಗ್ಬೇಕು, ಆಮೇಲೆ ಕ್ರಮ.. ಆರಗ

'ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಬೇಕು. ಸತ್ಯಾಸತ್ಯತೆ ತಿಳಿದು ಬರಬೇಕಿದೆ. ವ್ಯವಸ್ಥೆಯಲ್ಲಿ ಸರ್ಕಾರ ಇದ್ದಾಗ ಒಂಥರಾ, ಪ್ರತಿಪಕ್ಷ ಇದ್ದಾಗ ಒಂದೊಂದು ರೀತಿ ಮಾತನಾಡುತ್ತೇವೆ. ಗುತ್ತಿಗೆದಾರರ ವಿಚಾರ, ಇಲ್ಲಿಯವರೆಗೂ ಚರ್ಚೆಯಾಗಿದೆ. ಆತ್ಮಹತ್ಯೆ ಬಗ್ಗೆ ಸಾರ್ವಜನಿಕರಿಗೆ ಅನುಮಾನ ತರಿಸುವಂತೆ ಮಾಡಿದೆ. ಯಾವುದೇ ಮಂತ್ರಿಗಳ ನೈತಿಕ ವಿಚಾರ ಬಂದಾಗ, ಅವರು ನಿರ್ಧಾರ ತೆಗೆದುಕೊಳ್ಳಬಹುದು. ಅವರ ನೈತಿಕ ಹೊಣೆಗಾರಿಕೆ ಬರಲಿದೆ. ನೈತಿಕತೆ ವಿಚಾರದಲ್ಲಿ ಮೂರು ಪಕ್ಷಗಳು ಅಲ್ಲಿಗೆ ಬಂದು ನಿಂತಿವೆ. 10% ನವರು, 40% ಯಾಕೆ ತೆಗೆದುಕೊಳ್ಳುತ್ತಿದ್ದಾರೆ ಅಂತಿದ್ದಾರೆ. ಎಲ್ಲರೂ ಕೂಡ ಅವರೇ ಎಂದರು.

Last Updated : Apr 12, 2022, 7:20 PM IST

ABOUT THE AUTHOR

...view details