ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬುಲೆಟ್ ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ. ಬುಲೆಟ್ ಗಳನ್ನು ಗೇಟಿನ ಒಳಗೆ ನಿಲ್ಲಿಸಿದ್ರೂ ಕಳ್ಳರು ಎಗರಿಸುತ್ತಿದ್ದಾರೆ.
ಬೆಂಗಳೂರಲ್ಲಿದ್ದಾರೆ ಬುಲೆಟ್ ಕಳ್ಳರು... ಮನೆ ಮಂದೆ ನಿಲ್ಲಿಸಿದ ಬುಲೆಟ್ಗಳು ಬೆಳಗಾಗುವಷ್ಟರಲ್ಲಿ ಮಾಯ! - Parappana Agrahara Police Station
ರಾಜ್ಯ ರಾಜಧಾನಿಯಲ್ಲಿ ಬುಲೆಟ್ ಬೈಕ್ಗಳನ್ನೇ ಟಾರ್ಗೆಟ್ ಮಾಡುತ್ತಿರುವ ಖದೀಮರು. ಮನೆ ಮುಂದೆ ನಿಲ್ಲಿಸಿದ ಬುಲೆಟ್ಗಳು ಬೆಳಗಾಗುವಷ್ಟರಲ್ಲಿ ಮಂಗಮಾಯ.
ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಬುಲೆಟ್ ಕಳ್ಳರ ಹಾವಳಿ!
ಸಿಟಿ ಪೊಲೀಸರು ಬೈಕ್ ಕಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡರು, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ ಖತರ್ನಾಕ್ ಕಳ್ಳರು. ಕೋರಮಂಗಲ, ಪರಪ್ಪನ ಅಗ್ರಹಾರ, ಬೇಗೂರು ಸೇರಿದಂತೆ ಹಲವು ಕಡೆ ಖದೀಮರ ಹಾವಳಿ ಮಿತಿಮೀರಿದೆ. ಈಗ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲೂ ಕಳ್ಳರು ತಮ್ಮ ಚಮತ್ಕಾರ ತೋರಿದ್ದಾರೆ.
ಕಳ್ಳರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಆರ್ 1 ಬೈಕ್ನಲ್ಲಿ ಬಂದ ಕಳ್ಳರು ಬುಲೆಟ್ ಬೈಕ್ ಸಮೇತ ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.