ಕರ್ನಾಟಕ

karnataka

ETV Bharat / state

ಬೌರಿಂಗ್ ಆಸ್ಪತ್ರೆಯಲ್ಲಿ ಶಶಿಕಲಾ ನಟರಾಜನ್​ಗೆ ಚಿಕಿತ್ಸೆ... ವೈದ್ಯರು ಹೇಳಿದ್ದೇನು!? - ಶಶಿಕಲಾ ನಟರಾಜನ್​,

ಅನಾರೋಗ್ಯ ಹಿನ್ನೆಲೆ ನಗರದ ಬೌರಿಂಗ್ ಆಸ್ಪತ್ರೆಯ ಚಿಕಿತ್ಸೆ ಪಡೆಯುತ್ತಿರುವ ಶಶಿಕಲಾ ಆರೋಗ್ಯ ಪರಿಸ್ಥಿತಿ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.

Continued treatment to Sashikala Natarajan, Continued treatment to Sashikala Natarajan at Bangalore, Continued treatment to Sashikala Natarajan at Bangalore Boring Hospital, Sashikala Natarajan, Sashikala Natarajan news, ಶಶಿಕಲಾ ನಟರಾಜನ್​ಗೆ ಮುಂದುವರೆದ ಚಿಕಿತ್ಸೆ, ಬೆಂಗಳೂರಿನಲ್ಲಿ ಶಶಿಕಲಾ ನಟರಾಜನ್​ಗೆ ಮುಂದುವರೆದ ಚಿಕಿತ್ಸೆ, ಬೆಂಗಳೂರಿನ ಬೌರಿಂಗ್​ ಆಸ್ಪತ್ರೆಯಲ್ಲಿ ಶಶಿಕಲಾ ನಟರಾಜನ್​ಗೆ ಮುಂದುವರೆದ ಚಿಕಿತ್ಸೆ, ಶಶಿಕಲಾ ನಟರಾಜನ್​, ಶಶಿಕಲಾ ನಟರಾಜನ್​ ಸುದ್ದಿ,
ಬೌರಿಂಗ್ ಆಸ್ಪತ್ರೆಯಲ್ಲಿ ಶಶಿಕಲಾ ನಟರಾಜನ್​ಗೆ ಮುಂದುವರೆದ ಚಿಕಿತ್ಸೆ

By

Published : Jan 21, 2021, 7:56 AM IST

Updated : Jan 21, 2021, 1:53 PM IST

ಬೆಂಗಳೂರು:ಅನಾರೋಗ್ಯ ಹಿನ್ನೆಲೆ ನಗರದ ಬೌರಿಂಗ್ ಆಸ್ಪತ್ರೆಗೆಯಲ್ಲಿ ದಾಖಲಾಗಿರುವ ಶಶಿಕಲಾ ನಟರಾಜನ್​ಗೆ ವೈದ್ಯರು ಚಿಕಿತ್ಸೆ ಮುಂದುವರೆದಿದ್ದು, ವೈದ್ಯರು ಶಶಿಕಲಾ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಯಿಂದ ಹೊರಬಂದು ಮಾತನಾಡಿದ ವೈದ್ಯ ಮನೋಜ್, ನಿನ್ನೆ ಸಂಜೆ ಶಶಿಕಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ವಲ್ಪ ಜ್ವರ ಸೇರಿದಂತೆ ಕೆಲವೊಂದು ರೋಗದ ಲಕ್ಷಣಗಳಿದ್ದವು‌. ಕೋವಿಡ್ ಟೆಸ್ಟ್ ಕೂಡ ಮಾಡಿಸಿದಾಗ ನೆಗಟಿವ್ ಬಂದಿತ್ತು. ಇಂದು ಬೆಳಗ್ಗೆ ತಿಂಡ ಕೂಡ ಮಾಡಿದ್ದಾರೆ ಎಂದು ಹೇಳಿದರು.

ವಾರ್ಡ್​ನಲ್ಲಿ ಓಡಾಡೊಕೆ ಹೇಳಿದ್ದೇವೆ. ಈಗ ವಿಕ್ಟೋರಿಯಾಗೆ ಕರೆದುಕೊಂಡು ಹೋಗಿ ಸಿಟಿ ಸ್ಕ್ಯಾನ್ ಮಾಡಿಸುತ್ತೇವೆ. ವಿಕ್ಟೋರಿಯಾದಲ್ಲಿ ಸಿಟಿ ಸ್ಕ್ಯಾನ್ ಆದ ಬಳಿಕ ಇಲ್ಲಿಗೆ ಯಾವಾಗ ಕರಕೊಂಡು ಬರಬೇಕು ಎಂದು ಹೇಳುತ್ತೇವೆ‌. ಇನ್ನು ಮೂರ್ನಾಲ್ಕು ದಿನಗಳಲ್ಲಿ ಡಿಸ್ಚಾರ್ಜ್ ಮಾಡುತ್ತೇವೆ ಎಂದು ಬೌರಿಂಗ್ ಆಸ್ಪತ್ರೆಯ ವೈದ್ಯ ಮನೋಜ್ ಸ್ಪಷ್ಟನೆ ನೀಡಿದರು.

ಆಸ್ಪತ್ರೆಗೆ ಶಾಸಕ ದಿನಕರನ್​ ಭೇಟಿ...

ಶಶಿಕಲಾ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿದ್ದ ಶಾಸಕ ದಿನಕರನ್​ ಮಹತ್ವದ ವಿಷಯವೊಂದು ಹೇಳಿದ್ದಾರೆ.

ಬೌರಿಂಗ್ ಆಸ್ಪತ್ರೆಯಲ್ಲಿ ಶಶಿಕಲಾ ನಟರಾಜನ್​ಗೆ ಮುಂದುವರೆದ ಚಿಕಿತ್ಸೆ

ಈಗಾಗಲೇ ನಾನು ವೈದ್ಯರ ಜೊತೆ ಮಾತಾಡಿದ್ದೇನೆ. ಚಿಕಿತ್ಸೆ ಮುಂದುವರೆದಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಸದ್ಯ ಸ್ಕ್ಯಾನಿಂಗ್ ಬೇಡ. ನಾರ್ಮಲ್ ಇದ್ದಾರೆ. ಬೇರೆಡೆ ಶಿಪ್ಟ್ ಬಗ್ಗೆ ಇನ್ನು ನಿರ್ಧರಿಸಿಲ್ಲ ಎಂದು ಎಮ್​ಎಲ್​ಎ ದಿನಕರನ್ ಹೇಳಿದ್ದಾರೆ.

ಇದೇ ತಿಂಗಳು 27 ರಂದು ಬಿಡುಗಡೆ ಆಗುವ ವೇಳೆ ಶಶಿಕಲಾರನ್ನ ಸ್ವಾಗತ ಮಾಡಲು ಕಾರ್ಯಕರ್ತರಲ್ಲಿ ಆಸೆ ಇದೆ. ರಾಜಕೀಯ ಪ್ರವೇಶ ಕುರಿತು ಈಗಲೇ ಹೇಳಲು ಸಾಧ್ಯವಿಲ್ಲ. ಅವರ ನೇತೃತ್ವದಲ್ಲಿ ಪಕ್ಷ ಮುಂದುವರಿಯುತ್ತೆ. ಅವರು ಮೊದಲು ಗುಣಮುಖರಾಗಿ ಬರಲಿ. ಆಮೇಲೆ ರಾಜಕೀಯ ಪ್ರವೇಶದ ಬಗ್ಗೆ ನೋಡೋಣ ಎಂದು ಮಾಜಿ ಎಐಎಡಿಎಂಕೆ ನಾಯಕ ದಿನಕರನ್ ಹೇಳಿದ್ದಾರೆ.

ಶಶಿಕಲಾ ಆಸ್ಪತ್ರೆಗೆ ದಾಖಲು...

ಹೈಪರ್ಟೆನ್ಶನ್, ಡಯಾಬಿಟಿಸ್ ಮತ್ತು ಹೈಪೊಥೈರಾಯ್ಡಿಸಂನಿಂದ ಬಳಲುತ್ತಿರುವ ಶಶಿಕಲಾಳನ್ನು ನಿನ್ನೆ ಸಂಜೆ ಆಸ್ಪತ್ರೆ ಕರೆತರಲಾಗಿತ್ತು. ಜೊತೆಗೆ ಕೆಮ್ಮು, ಜ್ವರ ಮತ್ತು ಉಸಿರಾಟದ ಸಮಸ್ಯೆ ತೀವ್ರವಾಗಿತ್ತು. ಸದ್ಯ ಆಂಟಿಬಯೋಟಿಕ್ ಮತ್ತು ಆಕ್ಸಿಜನ್ (ಕೃತಕ‌ ಉಸಿರಾಟ) ವ್ಯವಸ್ಥೆ ಚಿಕಿತ್ಸೆ ಕೊಡಲಾಗುತ್ತಿದ್ದು, ಅವರ ಆರೋಗ್ಯದಲ್ಲಿ ಕೊಂಚ ಸುಧಾರಣೆ ಕಂಡು ಬಂದಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಕಫ ಸೇರಿದಂತೆ‌ ಇನ್ನಿತರ ಪರೀಕ್ಷೆಗಳ‌ ವರದಿ ಬರಬೇಕಿದ್ದು,‌ ಇದರ ಆಧಾರದ‌ ಮೇಲೆ ವೈದ್ಯರು ಮುಂದಿನ‌ ಚಿಕಿತ್ಸೆ ನೀಡಲಿದ್ದಾರೆ. ಇನ್ನೊಂದು ವಾರದಲ್ಲಿ ಬಿಡುಗಡೆಯಾಗಲಿರುವ ಶಶಿಕಲಾಳ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದಿದ್ದರಿಂದ ಅವರ ಬೆಂಬಲಿಗರಲ್ಲಿ ಆತಂಕ ಮನೆ ಮಾಡಿದೆ. ಇನ್ನು ಶಶಿಕಲಾರ ಆಂಟಿಜೆನ್ ಟೆಸ್ಟ್ ವರದಿ ನೆಗೆಟಿವ್ ಬಂದಿದೆ.

ಹೆಚ್ಚಿನ ಭದ್ರತೆ...

ತಮಿಳುನಾಡಿನ ವಿವಿಧ ಭಾಗಗಳಿಂದ ಬೆಂಬಲಿಗರು ಆಸ್ಪತ್ರೆಯತ್ತ ದೌಡಾಯಿಸುವ ಸಾಧ್ಯತೆಯಿದೆ‌. ಭದ್ರತಾ ದೃಷ್ಟಿಯಿಂದ ಜೈಲು ಸಿಬ್ಬಂದಿ ಜೊತೆ ಸ್ಥಳೀಯ ಪೊಲೀಸರು ಗಸ್ತು ಕಾಯುತ್ತಿದ್ದಾರೆ. ಮೂರು ದಿನಗಳ ಬಳಿಕ ಶಶಿಕಲಾ ಡಿಸ್ಚಾರ್ಜ್ ಮಾಡ್ತೇವೆ. ಬೌರಿಂಗ್ ಆಸ್ಪತ್ರೆಯ ವೈದ್ಯರಿಂದ ಮಾಹಿತಿ

Last Updated : Jan 21, 2021, 1:53 PM IST

ABOUT THE AUTHOR

...view details