ಕರ್ನಾಟಕ

karnataka

ದೆಹಲಿ‌ ರೈತರ ಪ್ರತಿಭಟನೆ ಬೆಂಬಲಿಸಿ ಐಕ್ಯ ಹೋರಾಟ ಸಮಿತಿಯಿಂದ ಮುಂದುವರೆದ ಧರಣಿ

By

Published : Dec 19, 2020, 7:41 AM IST

ದಲಿತ ಸಂಘಟನೆಯ ಪದಾಧಿಕಾರಿಗಳಾದ ಗುರುಪ್ರಸಾದ್ ಕೆರೆಗೋಡು, ಮಾವಳ್ಳಿ ಶಂಕರ್, ವಿ ನಾಗರಾಜು, ಲಕ್ಷ್ಮಿ ನಾರಾಯಣ್ ನಾಗವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೇಷರತ್ ಬೆಂಬಲ ವ್ಯಕ್ತಪಡಿಸಿದರು. ವಿಶಿಷ್ಟ ಹಾಡುಗಳನ್ನು ಹಾಡುವ ಮೂಲಕ ಕೇಂದ್ರ ಸರ್ಕಾರದ ನೀತಿಗಳನ್ನು ಖಂಡಿಸಿದರು..

banglore
ಮುಂದುವರೆದ ಧರಣಿ

ಬೆಂಗಳೂರು : ದೆಹಲಿ ರೈತರಿಗೆ ಬೆಂಬಲವಾಗಿ ಉಪವಾಸ ಕುಳಿತು ಪ್ರತಿಭಟಿಸುತ್ತಿರುವ ಅನ್ನದಾತರಿಗೆ ಶಕ್ತಿ ತುಂಬುವ ಸಲುವಾಗಿ ರಾಜ್ಯದಲ್ಲಿ ಮತ್ತೆ ರೈತ ಹೋರಾಟ ನಡೆಯುತ್ತಿದೆ. ಸಂಘಟನೆಗಳು ಒಟ್ಟಾಗಿ ನಗರದ ಮೌರ್ಯ ಸರ್ಕಲ್​ನಲ್ಲಿ ಅನಿರ್ದಿಷ್ಟಾವಧಿ ಧರಣಿಯನ್ನು ಮುಂದುವರೆಸಿದ್ದಾರೆ.

ಐಕ್ಯ ಹೋರಾಟ ಸಮಿತಿಯಿಂದ ಮುಂದುವರೆದ ಧರಣಿ

ಕುರುಬೂರು ಶಾಂತ್‌ಕುಮಾರ್, ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ರೈತ-ದಲಿತ-ಕಾರ್ಮಿಕರ ಐಕ್ಯ ಹೋರಾಟ ಸಮಿತಿಯಿಂದ ಧರಣಿ ಮುಂದುವರೆದಿದೆ. ಮುಂದಿನ ದಿನಗಳ ಪ್ರತಿಭಟನೆಗಳ ರೂಪುರೇಷೆ ಬಗ್ಗೆ ಚರ್ಚೆ ನಡೆಯುತ್ತಿದೆ. ಪ್ರತಿ ದಿನ ಒಂದೊಂದು ಸಂಘಟನೆಗಳ ನೇತೃತ್ವದಲ್ಲಿ ಧರಣಿ ಮಾಡಲಾಗುತ್ತಿದೆ.

ದಲಿತ ಸಂಘಟನೆಯ ಪದಾಧಿಕಾರಿಗಳಾದ ಗುರುಪ್ರಸಾದ್ ಕೆರೆಗೋಡು, ಮಾವಳ್ಳಿ ಶಂಕರ್, ವಿ ನಾಗರಾಜು, ಲಕ್ಷ್ಮಿ ನಾರಾಯಣ್ ನಾಗವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೇಷರತ್ ಬೆಂಬಲ ವ್ಯಕ್ತಪಡಿಸಿದರು. ವಿಶಿಷ್ಟ ಹಾಡುಗಳನ್ನು ಹಾಡುವ ಮೂಲಕ ಕೇಂದ್ರ ಸರ್ಕಾರದ ನೀತಿಗಳನ್ನು ಖಂಡಿಸಿದರು.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಗೋ ಹತ್ಯೆ ನಿಷೇಧ ಮಸೂದೆಗಳನ್ನು ರಾಜ್ಯ ಸರ್ಕಾರ ರದ್ದು ಮಾಡಬೇಕು.‌ ಕೇಂದ್ರ ಸರ್ಕಾರದ ಕೃಷಿ ಸಂಬಂಧಿತ 4 ಕಾಯ್ದೆಗಳನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿ ಮಾಡುವ ಕಾಯ್ದೆಗಳನ್ನು ಕೂಡಲೇ ಜಾರಿಗೆ ತರಬೇಕೆಂದು ಪ್ರತಿಭಟನೆಯಲ್ಲಿ ಆಗ್ರಹಿಸುತ್ತಿದ್ದಾರೆ.‌

ದಲಿತ ಸಂಘಟನೆಗಳ ಮುಖಂಡರು ಮಾತನಾಡಿ, ಈಗಾಗಲೇ ದೆಹಲಿಯಲ್ಲಿ ಲಕ್ಷಾಂತರ ರೈತರು ಇಪ್ಪತ್ತೊಂದು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ನಾಲ್ಕೈದು ಬಾರಿ ಸಭೆ ಮಾಡಿದ್ದರೂ ಸಮಸ್ಯೆ ಬಗೆಹರಿಸಿಲ್ಲ. ರೈತರು ಎಲ್ಲಾ ಭಾಗಗಳಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇಡೀ ದೇಶದ ರೈತರಿಗೆ ಶಕ್ತಿ ನೀಡಲು, ಕರ್ನಾಟಕದ ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಹಾಗೂ ದಲಿತ ಸಂಘಟನೆಗಳು ಒಟ್ಟಾಗಿ ಒಂದೇ ವೇದಿಕೆಯಲ್ಲಿ ಶಕ್ತಿ ತುಂಬುವ ಹೋರಾಟ ಮಾಡುತ್ತಿದ್ದೇವೆ.

ಅನಿರ್ಧಿಷ್ಟಾವಧಿ ಧರಣಿ ಮುಂದಿವರೆಯಲಿದ್ದು, ರಾಜ್ಯವ್ಯಾಪಿ ವಿಸ್ತರಣೆ ಮಾಡಿದ್ದೇವೆ. ಕೇಂದ್ರ ಸರ್ಕಾರ ತನ್ನ ಮೊಂಡುವಾದ ಬಿಟ್ಟು ರೈತರ ಸಮಸ್ಯೆ ಬಗೆಹರಿಸಬೇಕು, ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಪ್ರತಿಪಾದಿಸಿದರು.

ಇಂದು ಹಾಗೂ 24ನೇ ತಾರೀಕಿನಂದು ರೈತರ ಎರಡು ತಂಡಗಳು ದೆಹಲಿಗೆ ತೆರಳಿ ಅಲ್ಲಿನ ರೈತರ ಜೊತೆ ನಿಲ್ಲಲಿದ್ದಾರೆ ಎಂದು ಸಭೆಯಲ್ಲಿ ತಿಳಿಸಿದರು.‌ ರಾಷ್ಟ್ರಮಟ್ಟದಲ್ಲಿ 500ಕ್ಕೂ ಹೆಚ್ಚು ಸಂಘಟನೆಗಳು ಒಟ್ಟಾಗಿ ಪ್ರತಿಭಟನೆ ಮುಂದುವರೆಸಿದ್ದೇವೆ. ಹೀಗಾಗಿ ರಾಜ್ಯದಲ್ಲೂ ಎರಡು ಮೂರು ಸಂಘಟನೆಗಳು ಒಟ್ಟಾಗಿ ಹೋರಾಟ ಮುಂದುವರೆಯಲಿದೆ. ಆದರೆ, ಕೇಂದ್ರ ಸರ್ಕಾರ ಮಾತುಕತೆ ನೆಪದಲ್ಲಿ ರೈತರಿಗೆ ಚಳ್ಳೆಹಣ್ಣು ತಿನ್ನಿಸುವ ಪ್ರಯತ್ನ ಈ ಕೂಡಲೇ ಬಿಡಬೇಕು ಎಂದು ತಿಳಿಸಿದರು.

ABOUT THE AUTHOR

...view details