ಬೆಂಗಳೂರು :ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ರಾಜ್ಯ ಕಾಂಗ್ರೆಸ್ ವಾಗ್ದಾಳಿ ಇಂದು ಕೂಡ ಮುಂದುವರೆದಿದೆ. ಟ್ವೀಟ್ ಮೂಲಕ ತನ್ನ ಬೇಸರ ಹೊರ ಹಾಕಿರುವ ರಾಜ್ಯ ಕಾಂಗ್ರೆಸ್ ಪಕ್ಷ, ಗಡಿಯಲ್ಲಿ ಏನಾಗುತ್ತಿದೆ ಎಂದು ತಿಳಿಯುವ ಅಧಿಕಾರ ದೇಶದ ಜನರಿಗಿದೆ. ವಾಸ್ತವಿಕ ಗಡಿ ರೇಖೆಯಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ಸಂಸತ್ತಿಗೆ ತಿಳಿಸಬೇಕು. ಉಭಯ ಸದನಗಳಲ್ಲಿ ಗಡಿ ಸಂಘರ್ಷ ಕುರಿತ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದೆ.
ನಿರ್ಲಕ್ಷ್ಯ ಮಾಡಿದವರಿಂದ್ಲೇ ನಿರ್ಲಕ್ಷ್ಯತೆ ಪಾಠ.. ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ಕೈ ಕೆಂಡ.. - ರಾಜ್ಯ ಕಾಂಗ್ರೆಸ್ ವಾಗ್ದಾಳಿ
ನಿರ್ಲಕ್ಷ್ಯ ಮಾಡಿದವರೇ ನಿರ್ಲಕ್ಷ್ಯದ ಪಾಠ ಹೇಳುತ್ತಿರುವುದು ಈ ದೇಶದ ದುರಂತ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮೊದಲೇ ಎಚ್ಚರಿಕೆ ಕೊಟ್ಟರೂ ಸಹ ನಿರ್ಲಕ್ಷಿಸಿದ ತಮಗೆ ನಮಸ್ತೆ ಟ್ರಂಪ್ ಆಯೋಜಿಸುವುದು, ಮಧ್ಯಪ್ರದೇಶ ಸರ್ಕಾರ ಉರುಳಿಸುವುದು ಮುಖ್ಯವಾಗಿತ್ತು..
ನಿರ್ಲಕ್ಷ್ಯ ಮಾಡಿದವರೇ ನಿರ್ಲಕ್ಷ್ಯದ ಪಾಠ ಹೇಳುತ್ತಿರುವುದು ಈ ದೇಶದ ದುರಂತ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮೊದಲೇ ಎಚ್ಚರಿಕೆ ಕೊಟ್ಟರೂ ಸಹ ನಿರ್ಲಕ್ಷಿಸಿದ ತಮಗೆ ನಮಸ್ತೆ ಟ್ರಂಪ್ ಆಯೋಜಿಸುವುದು, ಮಧ್ಯಪ್ರದೇಶ ಸರ್ಕಾರ ಉರುಳಿಸುವುದು ಮುಖ್ಯವಾಗಿತ್ತು. ನಿಮ್ಮ ವೈಫಲ್ಯಗಳನ್ನೆಲ್ಲ ಕೊರೊನಾ ಮೇಲೆ ಆರೋಪಿಸಲೆಂದೇ ಹೀಗೆ ಮಾಡಿದ್ರಾ ನರೇಂದ್ರ ಮೋದಿಯವರೇ? ಎಂದು ಪ್ರಶ್ನಿಸಿದೆ.
ರಾಜ್ಯದ ವಿರುದ್ಧ ಗರಂ :ಕೊರೊನಾ ಸೋಂಕು ಲಕ್ಷಗಟ್ಟಲೇ ಹೆಚ್ಚುತ್ತಿರುವ ಈ ವೇಳೆ ಕೊರೊನಾ ವಾರಿಯರ್ಸ್ ಆಗಿ ಹಗಲಿರುಳು ದುಡಿಯುತ್ತಿರುವ ವೈದ್ಯರ ಬೇಡಿಕೆ ಈಡೇರಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ಅಲಕ್ಷ್ಯ ತೋರುತ್ತಿದೆ. ಮೊದಲೇ ವೈದ್ಯರ ಕೊರತೆ ಇರುವ ಈ ಸಂದರ್ಭದಲ್ಲಿ ಸರ್ಕಾರವು ಅವರ ಬೇಡಿಕೆ ಈಡೇರಿಸದೇ ಅಮಾನವೀಯವಾಗಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಕಿಡಿಕಾರಿದೆ.