ಕರ್ನಾಟಕ

karnataka

ETV Bharat / state

ಪಠ್ಯ ಪರಿಷ್ಕರಣೆ ತಾರ್ಕಿಕ ಅಂತ್ಯ ಸಿಗುವವರೆಗೆ ಹಳೆಯ ಪಠ್ಯವನ್ನೇ ಮುಂದುವರೆಸಿ: ಹಂಪ ನಾಗರಾಜಯ್ಯ - ಪಠ್ಯ ಪರಿಷ್ಕರಣೆ ಸಂಬಂಧ ಮಾತನಾಡಿದ ಹಂಪ ನಾಗರಾಜಯ್ಯ

ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ ತಳಮಳವಾಗಿದೆ. ಹಾಗೇ ವ್ಯಕ್ತಿಗಳನ್ನು ಅನಗತ್ಯವಾಗಿ ನಿಂದಿಸುವ ಅಪಾಯಕಾರಿ ಪ್ರವೃತ್ತಿ ಹಬ್ಬುತ್ತಿದೆ. ಕುವೆಂಪು ಕುರಿತು ಅವಹೇಳನಕಾರಿ ಬರಹಗಳು ಹರಿದಾಡುತ್ತಿವೆ. ದಿನದಿಂದ ದಿನಕ್ಕೆ ಪರ-ವಿರೋಧದ ಚರ್ಚೆಗಳು ತೂಕ ತಪ್ಪಿ ಬಿಸಿ ಏರುತ್ತಿದೆ ಎಂದು ಪಠ್ಯಪುಸ್ತಕ ವಿಚಾರಕ್ಕೆ ಸಂಬಂಧಿಸಿದಂತೆ ಹಂಪಾ ನಾಗರಾಜಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

Continue old text Book until logical end of text book revision said Hampa Nagarajayya
Continue old text Book until logical end of text book revision said Hampa Nagarajayya

By

Published : May 25, 2022, 9:58 PM IST

ಬೆಂಗಳೂರು: ಶಾಲೆಗಳು ಆರಂಭವಾಗಿವೆ. ಆದರೆ, ಪಠ್ಯಪುಸ್ತಕ ವಿವಾದ ಚಕ್ರತೀರ್ಥದಲ್ಲಿ ಒದ್ದಾಡುತ್ತಾ ಸರ್ಕಾರವನ್ನು ಪೇಚಿಗೆ ಸಿಲುಕಿಸಿದೆ ಎಂದು ನಾಡೋಜ ಡಾ ಹಂಪ ನಾಗರಾಜಯ್ಯ ಅಭಿಪ್ರಾಯಪಟ್ಟಿದ್ದಾರೆ.

ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ ತಳಮಳವಾಗಿದೆ. ಹಾಗೇ ವ್ಯಕ್ತಿಗಳನ್ನು ಅನಗತ್ಯವಾಗಿ ನಿಂದಿಸುವ ಅಪಾಯಕಾರಿ ಪ್ರವೃತ್ತಿ ಹಬ್ಬುತ್ತಿದೆ. ಕುವೆಂಪು ಕುರಿತು ಅವಹೇಳನಕಾರಿ ಬರಹಗಳು ಹರಿದಾಡುತ್ತಿವೆ. ದಿನದಿಂದ ದಿನಕ್ಕೆ ಪರ-ವಿರೋಧದ ಚರ್ಚೆಗಳು ತೂಕ ತಪ್ಪಿ ಬಿಸಿ ಏರುತ್ತಿದೆ.‌

ಪಠ್ಯ ಪರಿಷ್ಕರಣೆಯ ತಾರ್ಕಿಕ ಅಂತ್ಯ ಸಿಗುವವರೆಗೆ ಹಳೆಯ ಪಠ್ಯವನ್ನೇ ಮುಂದುವರೆಸಿ ಎಂದ ಹಂಪಾ ನಾಗರಾಜಯ್ಯ

ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಅನಾರೋಗ್ಯಕರ ಬೆಳವಣಿಗೆ ತಟಸ್ಥವಾಗಿರಲು ಸರ್ಕಾರ ಕೂಡಲೇ ಕಾರ್ಯಪ್ರವೃತ್ತವಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಭಿನ್ನಾಭಿಪ್ರಾಯಗಳು ಒಂದು ತಾರ್ಕಿಕ ಅಂತ್ಯ ಕಾಣುವವರಿಗೆ ಪಠ್ಯಪುಸ್ತಕ ಸಮಿತಿ ಸಿದ್ಧಪಡಿಸಿರುವ ಹೊಸಪಠ್ಯ ತಡೆಹಿಡಿದು ಹಿಂದಿನ ಪಠ್ಯವನ್ನು ಮುಂದುವರಿಸುವಂತೆ ಸುತ್ತೋಲೆಯನ್ನು ಸರ್ಕಾರ ತಕ್ಷಣವೇ ಹೊರಡಿಸಿ, ಕಲುಷಿತ ವಾತಾವರಣವನ್ನು ತಿಳಿಗೊಳಿಸಿ ಎಂದು ವಿನಂತಿಸಿದ್ದಾರೆ.

ಇದನ್ನೂ ಓದಿ: ಮುಹೂರ್ತ ಸಮಯಕ್ಕೆ ಪ್ರಿಯಕರನ ಜೊತೆ ವಧು ಎಸ್ಕೇಪ್..

For All Latest Updates

TAGGED:

ABOUT THE AUTHOR

...view details