ಕರ್ನಾಟಕ

karnataka

ETV Bharat / state

ಬಸವನಗುಡಿ ಕ್ಷೇತ್ರದಿಂದ ಸ್ಪರ್ಧಿಸುವೆ: ಪರಿಷತ್ ನಲ್ಲಿ ಘೋಷಿಸಿದ ಯುಬಿ ವೆಂಕಟೇಶ್ - ಎಲೆಚುಕ್ಕಿ ರೋಗ ಬಾಧೆ

ವಿಧಾನ ಪರಿಷತ್ ನಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆ ಪ್ರಸ್ತಾಪ- ಎಲೆಚುಕ್ಕಿ ರೋಗ ಬಾಧೆಯಿಂದ ನಲುಗಿದ ಶೇಕಡ 90ರಷ್ಟು ಸಣ್ಣ ಹಿಡುವಳಿ ಅಡಿಕೆ ಬೆಳೆಗಾರರು- ಸರ್ಕಾರ ಪರಿಹಾರ ನೀಡಬೇಕೆಂದು ಆಗ್ರಹಿಸಿದ ಜೆಡಿಎಸ್ ವಿಧಾನಪರಿಷತ್ ಸದಸ್ಯ ಬೋಜೇಗೌಡ.

UB Venkatesh
ಯುಬಿ ವೆಂಕಟೇಶ್

By

Published : Feb 15, 2023, 6:09 AM IST

ಬೆಂಗಳೂರು: ವಿಧಾನಪರಿಷತ್ ಸದಸ್ಯ ಯುಬಿ ವೆಂಕಟೇಶ್ ಅವರು ತಾವು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಸವನಗುಡಿಯಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಮಂಗಳವಾರ ವಿಧಾನಪರಿಷತ್ ನಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಂದರ್ಭ, ಬಿಜೆಪಿ ಸರ್ಕಾರದ ಅವಧಿ ಇದೇ ಕೊನೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ನಾನು ಸಹ ಬಸವನಗುಡಿಯಿಂದ ಸ್ಪರ್ಧಿಸುತ್ತಿದ್ದು ಶಾಸಕನಾಗಿ ಬರುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ತಾವು ನಿಜವಾಗಿಯೂ ಬಸವನಗುಡಿಯಿಂದ ಸ್ಪರ್ಧಿಸುತ್ತೀರಾ ಎಂದು ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಕೇಳಿದಾಗ, ನೀವು ಬೇಕಾದರೆ ನನ್ನ ಪರ ಪ್ರಚಾರ ಮಾಡಲು ಬಸವನಗುಡಿಗೆ ಬನ್ನಿ ಎಂದು ಆಹ್ವಾನಿಸಿದರು. ಈಗಾಗಲೇ ಬಸವನಗುಡಿ ಎಲ್ಲಿ ಕೋವಿಡ್ ನಂತರದ ದಿನಗಳಿಂದಲೂ ಸಾಕಷ್ಟು ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಂಡಿರುವ ಯುಬಿ ವೆಂಕಟೇಶ್ ಕಳೆದ ಎರಡು ಮೂರು ತಿಂಗಳಿಂದ ಆಟೊಗಳ ಹಿಂಭಾಗ ಹಾಗೂ ಕ್ಷೇತ್ರದ ವಿವಿಧ ಭಾಗಗಳಲ್ಲಿ ತಮ್ಮನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ.

ಬಸವನಗುಡಿಯಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷೆ ವ್ಯಕ್ತಪಡಿಸಿ ಅರ್ಜಿ ಸಹ ಸಲ್ಲಿಸಿರುವ ಅವರು ಬಹುತೇಕ ಸ್ಪರ್ಧಿಸುವ ಅವಕಾಶ ಸಹ ಪಡೆದಿದ್ದಾರೆ.ಇದೇ ಕಾರಣಕ್ಕಾಗಿ ಇಂದು ವಿಧಾನ ಪರಿಷತ್ ನಲ್ಲಿ ಅವರು ಮಾತನಾಡಿದ ಸಂದರ್ಭ ಈ ವಿಚಾರವನ್ನು ಬಹಿರಂಗಪಡಿಸಿದರು.

ಭರ್ಜರಿ ಅಡಿಕೆ ಬೆಳೆಗಾರರು..ನಿನ್ನೆ ವಿಧಾನ ಪರಿಷತ್ ನಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆ ಹಾಗೂ ಸರ್ಕಾರದಿಂದ ಸಿಗಬಹುದಾದ ಸಹಕಾರದ ಕುರಿತ ಚರ್ಚೆ ಜೋರಾಗಿ ನಡೆಯಿತು. ವಿಧಾನ ಪರಿಷತ್ ನಲ್ಲಿ ಜೆಡಿಎಸ್ ಸದಸ್ಯ ಬೋಜೇಗೌಡ ಮಾತನಾಡಿ, ದೊಡ್ಡ ಪ್ರಮಾಣದಲ್ಲಿ ಅಡಿಕೆ ಬೆಳೆಯುವ ಬೆಳೆಗಾರರ ವಿಚಾರವನ್ನು ಪ್ರಸ್ತಾಪಿಸಿದರು. ರಾಜ್ಯದಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆ ಬಹಳ ದೊಡ್ಡದಿದೆ. ಶೇಕಡ 90ರಷ್ಟು ಅಡಿಕೆ ಬೆಳೆಗಾರರು ಸಣ್ಣ ಹಿಡುವಳಿದಾರರಾಗಿದ್ದಾರೆ. ಇವರ ಬದುಕು ಕೇವಲ ಅಡಿಕೆ ಬೆಳೆಯಿಂದ ಬರುವ ಆದಾಯವನ್ನೇ ಅವಲಂಬಿಸಿರುತ್ತದೆ ಎಂದು ತಿಳಿಸಿದರು.

ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಒಂದೆರಡು ಎಕರೆ ಜಮೀನು ಇಟ್ಟುಕೊಂಡು ಜೀವನ ನಡೆಸುತ್ತಿರುವವರೇ ಹೆಚ್ಚಿದ್ದಾರೆ. ಎಲೆಚುಕ್ಕಿ ರೋಗ ಇದೀಗ ಈ ಭಾಗದ ಜನರನ್ನೇ ಕಾಡುತ್ತಿದ್ದು ಇದಕ್ಕೆ ಸರ್ಕಾರ ಪರಿಹಾರವನ್ನು ಒದಗಿಸಬೇಕು. ಸಣ್ಣ ಹಿಡುವಳಿದಾರರಿಗೆ ವಿಶೇಷ ಕಾರ್ಯಕ್ರಮ ರೂಪಿಸಿ ಹೆಚ್ಚು ಅನುದಾನವನ್ನು ಬಿಡುಗಡೆ ಮಾಡಿ ಅವರ ಕ್ಷೇಮಾಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು.

ಶ್ರೀಮಂತ ಅಡಿಕೆ ಬೆಳೆಗಾರರಿಗೆ ಯಾವುದೇ ಸಮಸ್ಯೆ ಕಾಡುವುದಿಲ್ಲ. ಯಾವುದೇ ಸಮಸ್ಯೆ ಎದುರಾದರೂ ಅವರು ತಮ್ಮ ಇತರೆ ಉದ್ಯಮದಿಂದ ಬರುವ ಆದಾಯದಿಂದ ಅದನ್ನ ಸರಿದೂಗಿಸಿಕೊಳ್ಳುತ್ತಾರೆ. ಆದ್ದರಿಂದ ಸರ್ಕಾರ ಸಣ್ಣ ಹಿಡುವಳಿ ದಾರರಿಗೆ ಸವಲತ್ತು ಕಲ್ಪಿಸಲು ತೀರ್ಮಾನಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮೂಲಕ ಸರ್ಕಾರಕ್ಕೆ ಸೂಚನೆ ನೀಡಿದರು.

ಕಲಾಪದಲ್ಲಿ ಸಭಾಪತಿ ಪೀಠದಲ್ಲಿದ್ದ ಪ್ರಾಣೇಶ್ ಅವರು ತಾವು ಸಹ ದೊಡ್ಡ ಅಡಿಕೆ ಬೆಳೆಗಾರರು. ತಮ್ಮ ಅಡಿಕೆ ಬೆಳೆ ಆದಾಯವು ಸಾಕಷ್ಟು ದೊಡ್ಡ ಪ್ರಮಾಣದಲ್ಲಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬೋಜೇಗೌಡರು ತಮ್ಮ ಅಡಿಕೆ ತೋಟದ ಮಾಹಿತಿ ಹಾಗೂ ಆದಾಯದ ವಿವರವನ್ನು ನೀಡಲಿಲ್ಲ, ಬದಲಾಗಿ ಅಣ್ಣ ಧರ್ಮೇಗೌಡರು ಅತಿ ದೊಡ್ಡ ಪ್ರಮಾಣದಲ್ಲಿ ಅಡಿಕೆ ಬೆಳೆದಿದ್ದರು. ಅವರು ವರ್ಷಕ್ಕೆ 1500 ಕ್ವಿಂಟಾಲ್ ಅಡಿಕೆ ಬೆಳೆಯುತ್ತಿದ್ದರು ಎಂಬ ಮಾಹಿತಿ ನೀಡಿದರು.

ಅಡಿಕೆ ದೊಡ್ಡ ಮಟ್ಟದಲ್ಲಿ ಬೆಳೆಯುವವರಲ್ಲಿ ಸಂಸದ ಜಿ ಎಂ ಸಿದ್ದೇಶ್ವರ ಉತ್ತುಂಗದಲ್ಲಿದ್ದಾರೆ. ಅವರು ವಾರ್ಷಿಕವಾಗಿ ಹತ್ತು ಸಾವಿರ ಕ್ವಿಂಟಾಲ್ ಅಡಿಕೆ ಬೆಳೆಯುತ್ತಾರೆ ಎಂದು ವಿವರಿಸಿದರು.
ಇನ್ನು ಅಡಿಕೆ ಬೆಳೆಗಾರರ ಸಮಸ್ಯೆಯ ಬಗ್ಗೆ ಜೆಡಿಎಸ್ ಸಚೇತಕ ಗೋವಿಂದರಾಜು ಸಹ ಮಾತನಾಡಿದರು. ಆಗ ಪ್ರಾಣೇಶ್ ಅವರು ಮಾತನಾಡಿ, ಇವರು ಸಹ 25 ಎಕರೆ ಜಾಗದಲ್ಲಿ ಅಡಿಕೆ ಬೆಳೆದಿದ್ದಾರೆ ಎಂಬ ಮಾಹಿತಿ ನೀಡಿದರು.

ಒಟ್ಟಾರೆ ಎಂದು ವಿಧಾನ ಪರಿಷತ್ ನಲ್ಲಿ ಎಲೆಚುಕ್ಕಿ ರೋಗದ ಸಮಸ್ಯೆ ಕುರಿತು ಅಡಿಕೆ ಬೆಳೆಗಾರರ ಸಮಸ್ಯೆಯನ್ನು ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಗಮನ ಸೆಳೆದರು. ಆದರೆ ಇದರ ವಿಚಾರವಾಗಿಯೇ ಚರ್ಚೆ ಒಂದು ಗಂಟೆಗೂ ಹೆಚ್ಚು ಕಾಲ ನಡೆಯಿತು.

ಇದನ್ನೂಓದಿ:ಚುನಾವಣೆಯಲ್ಲಿ ಗೆಲುವು, ತಮಿಳುನಾಡಿನಲ್ಲಿ ನಿಕುಂಬಲ ಯಜ್ಞ ನೆರವೇರಿಸಿ ಹರಕೆ ತೀರಿಸಿದ ಹಿಮಾಚಲ ಡಿಸಿಎಂ ಅಗ್ನಿಹೋತ್ರಿ

ABOUT THE AUTHOR

...view details