ಕರ್ನಾಟಕ

karnataka

By

Published : Jun 5, 2020, 5:17 PM IST

Updated : Jun 5, 2020, 10:50 PM IST

ETV Bharat / state

ಕಂಟೇನ್​​​ಮೆಂಟ್​​​​ ಮುಕ್ತವಾಗುತ್ತಿದೆ ಪಾದರಾಯನಪುರ!

ಹೊಸ ಸೋಂಕು ಕಂಡು ಬಾರದ ಹಿನ್ನೆಲೆ ಪಾದರಾಯನಪುರದ ಕೆಲವೆಡೆ ಕಂಟೇನ್​​ಮೆಂಟ್​​ ತೆರವು ಮಾಡಿ ಆದೇಶ ಹೊರಡಿಸಲಾಗಿದೆ. ಇಂದು ಸಂಜೆ ಈ ಬಗ್ಗೆ ಅಧಿಕೃತ ಆದೇಶ ಮಾಡಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.

 Containment zone clearance at Padarayanapura
Containment zone clearance at Padarayanapura

ಬೆಂಗಳೂರು: ಸರ್ಕಾರದ ಹೊಸ ಆದೇಶದಂತೆ ಕೊರೊನಾ ಪಾಸಿಟಿವ್ ಕೇಸ್ ಬರುವ ವ್ಯಕ್ತಿಯ ಮನೆಯ ನೂರು ಮೀಟರ್​​ವರೆಗೆ ಮಾತ್ರ ಕಂಟೇನ್​​ಮೆಂಟ್​​ ಮಾಡಲಾಗುತ್ತಿದೆ.

ಕಳೆದ 60 ದಿನದಿಂದ ಸೀಲ್​​​​​ಡೌನ್ ಆಗಿದ್ದ ಪಾದರಾಯನಪುರದಲ್ಲಿ ಈಗ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈಗ 11ನೇ ಕ್ರಾಸ್​​ನ ಒಂದು ಭಾಗದಲ್ಲಿ ನಿನ್ನೆ ಸಂಜೆ ಬ್ಯಾರಿಕೇಡ್​​ಗಳನ್ನು ತೆರವು ಮಾಡಿ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ. ಕಳೆದ ವಾರ 9 ಮತ್ತು 10ನೇ ಕ್ರಾಸ್​ನ ಕೆಲ ಭಾಗಗಳಲ್ಲಿ ಓಡಾಟಕ್ಕೆ ಅವಕಾಶ ಮಾಡಲಾಗಿತ್ತು.

ಪಾದರಾಯನಪುರದ 68 ಕೇಸ್​​ಗಳಲ್ಲಿ ಸಕ್ರಿಯ ಪ್ರಕರಣಗಳು ಈಗ ಕೇವಲ ನಾಲ್ಕು ಕೇಸ್​ಗಳು ಮಾತ್ರ ಇವೆ. ಇಲ್ಲಿ ಮಾತ್ರ ಕಂಟೇನ್​​ಮೆಂಟ್ ಮಾಡಲಾಗಿದೆ. ಇದೀಗ ಹೊಸ ಪ್ರಕರಣಗಳು ಪತ್ತೆಯಾಗದ ಕಾರಣ ಹಾಗೂ ಯಾವ ಭಾಗದಲ್ಲಿ ಸೋಂಕಿತರು ಇಲ್ಲವೋ ಆ ಭಾಗವನ್ನ ಕಂಟೇನ್​​ಮೆಂಟ್​​ ಝೋನ್​​ನಿಂದ ಮುಕ್ತಿ ಮಾಡಲಾಗಿದೆ. ಇಂದು ಸಂಜೆ ಈ ಬಗ್ಗೆ ಅಧಿಕೃತ ಆದೇಶ ಮಾಡಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದರು.

Last Updated : Jun 5, 2020, 10:50 PM IST

ABOUT THE AUTHOR

...view details