ಕರ್ನಾಟಕ

karnataka

ETV Bharat / state

ಡ್ರಗ್ ಪೆಡ್ಲರ್ ಜೊತೆ ಸಂಪರ್ಕ : ಬಿನೇಶ್ ಕೊಡಿಯೇರಿಗೆ ನ್ಯಾಯಾಂಗ ಬಂಧನ - ಬಿನೇಶ್ ಕೊಡಿಯೇರಿಗೆ ನ್ಯಾಯಾಂಗ ಬಂಧನ

ಡ್ರಗ್ ಪೆಡ್ಲರ್ ಅನೂಪ್ ಹಾಗೂ ಇನ್ನೂ ಕೆಲ ವ್ಯಕ್ತಿಗಳಿಗೆ ಅಕ್ರಮವಾಗಿ ದೊಡ್ಡ ಮೊತ್ತದ ಹಣ ವರ್ಗಾವಣೆ ಮಾಡಿದ್ದು, ಈ ಬಗ್ಗೆ ಇಡಿ ಅಧಿಕಾರಿಗಳಿಗೆ ಸುಳಿವು ಸಿಕ್ಕಿದೆ. ಹಾಗೆ ಡ್ರಗ್ ಪ್ರಕರಣದಲ್ಲಿ ಬಂಧನವಾದ ಅನೂಪ್, ಕೊಡಿಯೇರಿ ಪಾತ್ರದ ಬಗ್ಗೆ ತಿಳಿಸಿದ್ದ..

judicial-custody-of-binesh-kodiyeri
ಬಿನೇಶ್ ಕೊಡಿಯೇರಿಗೆ ನ್ಯಾಯಾಂಗ ಬಂಧನ

By

Published : Nov 20, 2020, 6:07 PM IST

ಬೆಂಗಳೂರು :ಡ್ರಗ್ ಪೆಡ್ಲರ್ ಜೊತೆ ಸಂಪರ್ಕ ಹೊಂದಿರುವ ಕೇರಳದ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೀಶ್ ಕೊಡಿಯೇರಿ ಎನ್​ಸಿಬಿ ವಶದಲ್ಲಿದ್ದು, ಇಂದು ವಿಚಾರಣೆ ಅಂತ್ಯ ಹಿನ್ನೆಲೆ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಹೀಗಾಗಿ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಆದೇಶ ಹೊರಡಿಸಿದೆ.

ಹೀಗಾಗಿ ಪರಪ್ಪನ ಅಗ್ರಹಾರ ಜೈಲಿಗೆ ಬಿನೇಶ್ ಕೊಡಿಯೇರಿ ‌ಸೇರಿದ್ದು, ಅಗತ್ಯವಿದ್ದಲ್ಲಿ ಮುಂದಿನ ದಿನ ವಿಚಾರಣೆಗೆ ಮತ್ತೆ ಎನ್​ಸಿಬಿ ವಶಕ್ಕೆ ಪಡೆಯಲಿದ್ದಾರೆ. ಡ್ರಗ್ ಪೆಡ್ಲರ್ ಅನೂಪ್ ಹಾಗೂ ಇನ್ನೂ ಕೆಲ ವ್ಯಕ್ತಿಗಳಿಗೆ ಅಕ್ರಮವಾಗಿ ದೊಡ್ಡ ಮೊತ್ತದ ಹಣ ವರ್ಗಾವಣೆ ಮಾಡಿದ್ದು, ಈ ಬಗ್ಗೆ ಇಡಿ ಅಧಿಕಾರಿಗಳಿಗೆ ಸುಳಿವು ಸಿಕ್ಕಿದೆ. ಹಾಗೆ ಡ್ರಗ್ಸ್ ಪ್ರಕರಣದಲ್ಲಿ ಬಂಧನವಾದ ಅನೂಪ್, ಕೊಡಿಯೇರಿ ಪಾತ್ರದ ಬಗ್ಗೆ ತಿಳಿಸಿದ್ದ.

ಕೊಡಿಯೇರಿ ಬೆಂಗಳೂರು ಮತ್ತು ಕೇರಳದಲ್ಲಿ ಹೋಟೆಲ್ ನಡೆಸಿರುವ ವಿಚಾರ, ಹಾಗೆ ಅನೂಪ್ ಜೊತೆ ಡ್ರಗ್ಸ್‌ ಡೀಲಿಂಗ್‌ನಲ್ಲಿ ಕೈ ಜೋಡಿಸಿ ಅಕ್ರಮ ಆಸ್ತಿ ಮಾಡಿರುವ ಮಾಹಿತಿ ಎನ್ಸ್​​ಸಿಬಿ ತನಿಖೆ ವೇಳೆ ಸಿಕ್ಕಿದೆ.

ABOUT THE AUTHOR

...view details