ಕರ್ನಾಟಕ

karnataka

ETV Bharat / state

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪೊಲೀಸ್​ ಠಾಣೆಯಲ್ಲಿ ವರ್ಕಿಂಗ್ ಕಂಪಾರ್ಟ್ಮೆಂಟ್ - ಪೊಲೀಸ್ ಠಾಣೆಗಳಲ್ಲಿ ವರ್ಕಿಂಗ್ ಕಂಪಾರ್ಟ್ಮೆಂಟ್ ನಿರ್ಮಾಣ

ಸಾರ್ವಜನಿಕರಿಂದ ಅಂತರ ಕಾಯ್ದುಕೊಳ್ಳುವ ಸಲುವಾಗಿ ಚೌಕಾಕಾರದ ಕಂಪಾರ್ಟ್ಮೆಂಟ್​ ಅನ್ನು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸ್ ಠಾಣೆಯಲ್ಲಿ ಡಿಸಿಪಿ ರೋಹಿಣಿ ಕಟೋಚ್ ನೇತೃತ್ವದಲ್ಲಿ ಹೊಸದಾಗಿ ವಿನ್ಯಾಸಗೊಳಿಸಲಾಗಿದೆ.

police stations
ಪೊಲೀಸ್ ಠಾಣೆಗಳಲ್ಲಿ ವರ್ಕಿಂಗ್ ಕಂಪಾರ್ಟ್ಮೆಂಟ್ ನಿರ್ಮಾಣ

By

Published : Jun 4, 2020, 10:56 PM IST

ಬೆಂಗಳೂರು: ಎಲ್ಲೆ ಮೀರಿದ ಕೊರೊನಾದಿಂದ ಪೊಲೀಸರು ಎಚ್ಚೆತ್ತುಕೊಳ್ಳುತ್ತಿದ್ದಾರೆ. ನಿತ್ಯ ಪೊಲೀಸರು ಸಾರ್ವಜನಿಕರ ಜೊತೆ ಒಡನಾಟ ಹೊಂದಿರಬೇಕಾಗುವುದು ಅನಿವಾರ್ಯವಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಹಾಗೂ ಸೋಂಕು ತಪ್ಪಿಸುವ ಮುನ್ನೆಚ್ಚರಿಕಾ ಕ್ರಮವಾಗಿ ಠಾಣೆಗಳಲ್ಲಿ ವರ್ಕಿಂಗ್ ಕಂಪಾರ್ಟ್ಮೆಂಟ್​​ ನಿರ್ಮಿಸಿಕೊಳ್ಳಲಾಗಿದೆ.

ಪೊಲೀಸ್ ಠಾಣೆಗಳಲ್ಲಿ ವರ್ಕಿಂಗ್ ಕಂಪಾರ್ಟ್ಮೆಂಟ್

ಸಾರ್ವಜನಿಕರಿಂದ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಚೌಕಾಕಾರದ ಕಂಪಾರ್ಟ್ಮೆಂಟ್​ ಅನ್ನು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸ್ ಠಾಣೆಯಲ್ಲಿ ವಿನ್ಯಾಸಗೊಳಿಸಲಾಗಿದೆ. ಡಿಸಿಪಿ ರೋಹಿಣಿ ಕಟೋಚ್ ನೇತೃತ್ವದಲ್ಲಿ ಇದನ್ನು ಕಾರ್ಯರೂಪಕ್ಕೆ ತರಲಾಗಿದೆ. ಠಾಣೆಗೆ ಬರುವವರೊಂದಿಗೆ ಮಾತನಾಡಲು ಮೈಕ್​, ಲೌಡ್ ಸ್ಪೀಕರ್ ಅಳವಡಿಕೆ, ಖಾಕಿ ಕೋವಿಡ್ ಓವರ್ ಕೋಟ್​ ಅನ್ನು ಸಿಬ್ಬಂದಿ ಸುರಕ್ಷತಾ ದೃಷ್ಟಿಯಿಂದ ನೀಡಲಾಗಿದೆ.

ಖಾಕಿ ಕೋವಿಡ್ ಓವರ್ ಕೋಟ್​

ಡಿಸಿಪಿ ರೋಹಿಣಿ ಕಟೋಚ್ ಅವರ ವಿನೂತನ ಪ್ರಯೋಗಕ್ಕೆ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details