ಬೆಂಗಳೂರು: ಯಾರು ಎಷ್ಟೇ ವಿರೋಧ ಮಾಡಿದರೂ ಟಿಪ್ಪು ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂಬ ಶಾಸಕ ತನ್ವೀರ್ ಸೇಠ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಇಸ್ಲಾಂ ಧರ್ಮದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಇಲ್ಲ ಎಂದಿದ್ದಾರೆ.
ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಇಸ್ಲಾಂ ಧರ್ಮದಲ್ಲಿ ಪ್ರತಿಮೆ ಸ್ಥಾಪನೆಗೆ ನಿಷೇಧ ಇದೆ. ಇಸ್ಲಾಂ ಧರ್ಮೀಯರು ಪ್ರತಿಮೆ ವಿಶ್ವದಲ್ಲಿ ಹಾಗೂ ಭಾರತದಲ್ಲಿ ಇಲ್ಲ. ಪ್ರತಿಮೆ ಮಾಡುವ ಮುನ್ನ ಶಾಸಕ ತನ್ವೀರ್ ಸೇಠ್ ಅವರು, ಇಸ್ಲಾಂ ಧರ್ಮ ಗುರುಗಳ ಜೊತೆ ಚರ್ಚೆ ಮಾಡಿ ತೀರ್ಮಾನಿಸಬೇಕು. ಅದರ ಹೊರತಾಗಿ ಅನಗತ್ಯವಾಗಿ ವಿವಾದ ಮಾಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಶಾಲೆಗಳಿಗೆ ಕೇಸರಿ ಬಣ್ಣ ವಿಚಾರ ಬಳಕೆ ವಿಚಾರ ಕುರಿತು ಮಾತನಾಡಿದ ಅವರು, ಎಷ್ಟೋ ಶಾಲೆಗಳಲ್ಲಿ ಮೂಲ ಸೌಕರ್ಯ ಇಲ್ಲ. ಎಷ್ಟೋ ಶಾಲೆಗಳ ಛಾವಣಿಗಳು ಸೂರು ಸೋರುತ್ತಿದೆ. ಬಣ್ಣ ಹೊಡೆಯೋ ದುಡ್ಡಲ್ಲಿ ಸೂರು ಸರಿ ಮಾಡಿಸಬಹುದು. ಇದೀಗ ಶಾಲೆಗಳಿಗೆ ಕೆಸರಿ ಬಣ್ಣ ಹೊಡೆಯುತ್ತಿದ್ದಾರೆ. ಜೆಡಿಎಸ್ ಬಂದರೆ ಹಸಿರು ಬಣ್ಣ ಮಾಡಬೇಕಾ? ಎಂದು ಪ್ರಶ್ನಿಸಿದೆ