ಬೆಂಗಳೂರು: ದಿನೇ ದಿನೇ ರಾಜ್ಯದಲ್ಲಿ ಕೊರೊನಾ ಸೊಂಕಿತರ ಸಾವಿನ ಪ್ರಮಾಣ ಹೆಚ್ಚುತ್ಥಿದ್ದು,ಚಿತಾಗಾರಗಳ ಮುಂದೆ ಹೆಣಗಳನ್ನು ಸಾಲಾಗಿ ಇಡಲಾಗಿದೆ.
ತಾವರೆಕೆರೆ ಬಳಿ ಸ್ಮಶಾನ ನಿರ್ಮಾಣ: ಮೊದಲ ದಿನ 40 ಶವಗಳ ದಹನ - bangalore4 corona news
ರಾಜ್ಯ ಸರ್ಕಾರ ಬೆಂಗಳೂರು ಹೊರವಲಯ ತಾವರೆಕೆರೆ ಬಳಿ ಸ್ಮಶಾನ ನಿರ್ಮಾಣ ಮಾಡಿದ್ದು, ಶವಗಳ ದಹನ ಕ್ರಿಯೆ ನಡೆಯುತ್ತಿದೆ.
ರಾಜ್ಯ ಸರ್ಕಾರ ಬೆಂಗಳೂರು ಹೊರವಲಯ ತಾವರೆಕೆರೆ ಬಳಿ ಸ್ಮಶಾನ ನಿರ್ಮಾಣ ಮಾಡಿದ್ದು, ಶವಗಳ ದಹನ ಕ್ರಿಯೆ ನಡೆಯುತ್ತಿದೆ.ಬೆಂಗಳೂರು ನಗರ ಜಿಲ್ಲಾಡಳಿತ ಮತ್ತು ಬಿಬಿಎಂಪಿ ವತಿಯಿಂದ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಬಳಿ ಕೊರೊನಾ ಸೊಂಕಿನಿಂದ ಸಾವಿಗೀಡಾದವರ ಅಂತ್ಯ ಸಂಸ್ಕಾರಕ್ಕೆ ಸ್ಮಶಾನವನ್ನು ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿದೆ.
ನಾಲ್ಕು ಎಕರೆ ವಿಸ್ತೀರ್ಣದಲ್ಲಿನ ಚಿತಾಗಾರದಲ್ಲಿ ಒಮ್ಮೆಗೆ 26 ಶವಗಳ ದಹನ ಕ್ರಿಯೆ ಮಾಡುವ ಅವಕಾಶ ಕಲ್ಪಿಸಲಾಗಿದೆ. ಶುಕ್ರವಾರದಿಂದ ಶವಗಳ ದಹನ ಕ್ರಿಯೆ ಪ್ರಾರಂಭವಾಗಿದ್ದು, ಮೊದಲ ದಿನ 40 ಶವಗಳ ಅಂತ್ಯಕ್ರಿಯೆ ಮಾಡಲಾಗಿದೆ. ಕಟ್ಟಿಗೆ ಮೂಲಕ ಶವಗಳ ದಹನ ಕ್ರಿಯೆ ಮಾಡಲಾಗುತ್ತಿದ್ದು, ಒಂದು ಶವದ ಅಂತ್ಯಕ್ರಿಯೆಗೆ 5 ಜನರಿಗೆ ಅವಕಾಶ ನೀಡಲಾಗಿದೆ.