ಕರ್ನಾಟಕ

karnataka

ETV Bharat / state

ರಸ್ತೆಯ ಇಕ್ಕೆಲಗಳಲ್ಲಿ ಇಂಗುಗುಂಡಿ ನಿರ್ಮಾಣ : ಬಿಬಿಎಂಪಿ ಪ್ರಯತ್ನಕ್ಕೆ ಸಾರ್ವಜನಿಕರು ಖುಷ್..! - undefined

ಬೆಂಗಳೂರಿನಲ್ಲಿ ಮಳೆ ಸುರಿದರೆ ಕಾಂಕ್ರೀಟ್​​ನ ರಸ್ತೆಗಳಿಂದಾಗಿ ಮಳೆ ನೀರು ಇಂಗುತ್ತಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನಲೆ, ಬಿಬಿಎಂಪಿ ಮಳೆ ನೀರು ಇಂಗುವುದಕ್ಕಾಗಿ ಹೊಸ ಉಪಾಯ ಕಂಡುಕೊಂಡಿದ್ದು, ಜನರು ಇದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಬಿಬಿಎಂಪಿಗೆ ಪ್ರಶಂಸೆ

By

Published : Jul 19, 2019, 3:10 AM IST

ಬೆಂಗಳೂರು: ಬಿಬಿಎಂಪಿ ಹೊಸದಾಗಿ ನಿರ್ಮಿಸುತ್ತಿರುವ ವೈಟ್ ಟಾಪಿಂಗ್, ಟೆಂಡರ್ ಶ್ಯೂರ್ ರಸ್ತೆಗಳ ಚರಂಡಿಗಳಲ್ಲಿ, ಹಾಗೂ ದೊಮ್ಮಲೂರು ವಾರ್ಡ್​ನ ಕೆಲ ಚರಂಡಿಗಳಲ್ಲಿ ಇಂಗು ಗುಂಡಿ ನಿರ್ಮಿಸಿ ಮಳೆ ನೀರು ಇಂಗುವಂತೆ ಮಾಡಲು ತೆಗೆದುಕೊಂಡಿರುವ ಕ್ರಮ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ‌.

ಬೆಂಗಳೂರು ಬರಬರುತ್ತಾ ಕಾಂಕ್ರೀಟ್ ಕಾಡಾಗುತ್ತಿದೆ, ಮಳೆ ನೀರು ಭೂಮಿಗೆ ಇಂಗದಂತೆ ಎಲ್ಲೆಡೆ ಕಾಂಕ್ರೀಟ್ ಸುರಿಯಲಾಗುತ್ತಿದೆ ಎಂಬ ಅಪವಾದ ಬಿಬಿಎಂಪಿಗೆ ಕೇಳಿಬಂದಿತ್ತು. ಆದರೆ ಇತ್ತೀಚೆಗೆ ನೂತನ ಹೆಜ್ಜೆ ಇಟ್ಟಿರುವ ಬಿಬಿಎಂಪಿ, ಹೊಸದಾಗಿ ನಿರ್ಮಿಸುತ್ತಿರುವ ವೈಟ್ ಟಾಪಿಂಗ್, ಟೆಂಡರ್ ಶ್ಯೂರ್ ರಸ್ತೆಗಳ ಕೆಲ ಚರಂಡಿಗಳಲ್ಲಿ ಇಂಗು ಗುಂಡಿ ನಿರ್ಮಿಸಿ ಮಳೆನೀರು ಇಂಗುವಂತೆ ಮಾಡಿದೆ.

ರಸ್ತೆ ಇಕ್ಕೆಲಗಳಲ್ಲಿ ಇಂಗುಗುಂಡಿ ನಿರ್ಮಾಣ

ವೈಟ್ ಟಾಪಿಂಗ್ ರಸ್ತೆಯ ಎರಡೂ ಬದಿಗಳಲ್ಲಿ ಇಂಗುಗುಂಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಒಂದು ಕಿ.ಮೀ ಉದ್ದದ ರಸ್ತೆಯ ಇಕ್ಕೆಲಗಳಲ್ಲಿ ನೂರು ಇಂಗುಗುಂಡಿಗಳನ್ನು, ಇಪ್ಪತ್ತರಿಂದ ಇಪ್ಪತ್ತೈದು ಮೀಟರ್​​ಗೆ ಒಂದು ಇಂಗುಗುಂಡಿ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಸಾರ್ವಜನಿಕರ ದೂರುಗಳನ್ನು ಗಮನಿಸಿ, ಹಾಗೆಯೇ ಬೆಂಗಳೂರಿನ ನೀರಿನ ಸಮಸ್ಯೆ ಹತೋಟಿಗೆ ತರಲು ಇಂಗುಗುಂಡಿ ನಿರ್ಮಾಣಕ್ಕೆ ಪಾಲಿಕೆ ಮುಂದಾಗಿದೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.

For All Latest Updates

TAGGED:

ABOUT THE AUTHOR

...view details