ಬೆಂಗಳೂರು: ತಿರುಮಲದಲ್ಲಿ ಹೊಸದಾಗಿ ನಿರ್ಮಾಣ ಮಾಡುತ್ತಿರುವ ಕರ್ನಾಟಕ ಅತಿಥಿಗೃಹ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರ್ಕಾರಕ್ಕೆ ಅಗತ್ಯ ಸಹಕಾರ ನೀಡುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ಬಿ.ಎಸ್.ಯಡಿಯೂರಪ್ಪ ಪತ್ರ ಬರೆದಿದ್ದಾರೆ.
ತಿರುಮಲದಲ್ಲಿ ಗೆಸ್ಟ್ಹೌಸ್ ನಿರ್ಮಾಣ: ಅಗತ್ಯ ಸಹಕಾರಕ್ಕೆ ಆಂಧ್ರ ಸಿಎಂಗೆ ಬಿಎಸ್ವೈ ಪತ್ರ - ಸಹಕಾರಕ್ಕೆ ಆಂಧ್ರ ಸಿಎಂಗೆ ಬಿಎಸ್ವೈ ಪತ್ರ
ಕರ್ನಾಟಕದ ಭಕ್ತರ ಅನುಕೂಲಕ್ಕಾಗಿ 700 ವರ್ಷಗಳ ಹಿಂದೆಯೇ ಮೈಸೂರು ಅರಸರು ತಿರುಮಲದಲ್ಲಿ ಕಲ್ಯಾಣ ಮಂಟಪ, ಅತಿಥಿಗೃಹ ನಿರ್ಮಿಸಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿದ್ದರು. ಆ ಜಾಗವನ್ನು 50 ವರ್ಷಕ್ಕೂ ಹೆಚ್ಚಿನ ಕಾಲದಿಂದ ಕರ್ನಾಟಕದ ಭಕ್ತರು ಬಳಕೆ ಮಾಡಿಕೊಂಡು ಬರುತ್ತಿದ್ದಾರೆ.
ಕರ್ನಾಟಕದ ಭಕ್ತರ ಅನುಕೂಲಕ್ಕಾಗಿ 700 ವರ್ಷಗಳ ಹಿಂದೆಯೇ ಮೈಸೂರು ಅರಸರು ತಿರುಮಲದಲ್ಲಿ ಕಲ್ಯಾಣ ಮಂಟಪ, ಅತಿಥಿಗೃಹ ನಿರ್ಮಿಸಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿದ್ದರು. ಆ ಜಾಗವನ್ನು 50 ವರ್ಷಕ್ಕೂ ಹೆಚ್ಚಿನ ಕಾಲದಿಂದ ಕರ್ನಾಟಕದ ಭಕ್ತರು ಬಳಕೆ ಮಾಡಿಕೊಳ್ಳುತ್ತಿದ್ದು, ಕರ್ನಾಟಕ ಸರ್ಕಾರ ಆ ಸ್ಥಳವನ್ನು ಅಭಿವೃದ್ಧಿಪಡಿಸಿದೆ. ಮುಜಿರಾಯಿ ಇಲಾಖೆ ನಿರ್ವಹಣೆ ಮಾಡಿಕೊಂಡು ಬಂದಿದೆ.
ಇನ್ನು ಆ ಜಾಗದಲ್ಲಿನ ಕಲ್ಯಾಣ ಮಂಟಪ ಹಾಗು ಅತಿಥಿ ಗೃಹ ತೆರವು ಮಾಡಿ ಹೊಸದಾಗಿ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದ್ದಾಗ ಖಾಸಗಿ ವ್ಯಕ್ತಿಯೊಬ್ಬರು ಕೋರ್ಟ್ ಮೊರೆ ಹೋಗಿದ್ದರು. ಆದರೆ, ಆಂಧ್ರಪ್ರದೇಶದ ಹೈಕೋರ್ಟ್ ಆ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ್ದು, ಅದರಂತೆ ಕರ್ನಾಟಕ ಸರ್ಕಾರ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದೆ. ಈ ಹಿನ್ನೆಲೆ ಅಭಿವೃದ್ಧಿ ಯೋಜನೆ ವಿವರವನ್ನು ಟಿಟಿಡಿಗೆ ನೀಡಿದ್ದು, ಭಕ್ತರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಕೈಗೊಂಡಿರುವ ಈ ಕಾಮಗಾರಿಗೆ ಅಗತ್ಯ ಸಹಕಾರ ನೀಡುವಂತೆ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಅವರಿಗೆ ಪತ್ರದ ಮೂಲಕ ಸಿಎಂ ಬಿಎಸ್ವೈ ಮನವಿ ಮಾಡಿದ್ದಾರೆ.