ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ದೇಶದ ಮೊದಲ ಬಸ್ ಪ್ರಿಯಾರಿಟಿ ಲೇನ್: ತಿಂಗಳಾಂತ್ಯಕ್ಕೆ ಸಿದ್ಧ - ಬೆಂಗಳೂರು ಸುದ್ದಿ

ದೇಶದಲ್ಲೇ ಪ್ರಥಮ ಬಾರಿಗೆ ಬೆಂಗಳೂರು ನಗರದಲ್ಲಿ ಬಸ್ ಪ್ರಿಯಾರಿಟಿ ಲೇನ್ ನಿರ್ಮಾಣ ಮಾಡಲಾಗುತ್ತಿದ್ದು, ಈ ತಿಂಗಳಾಂತ್ಯಕ್ಕೆ ಸಿದ್ಧವಾಗಲಿದೆ ಎಂದು ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ

Construction of Bus Priority Lane on Silk Board Road
ದೇಶದಲ್ಲೇ ಪ್ರಥಮ ಬಾರಿಗೆ ಸಿಲ್ಕ್ ಬೋರ್ಡ್ ರಸ್ತೆಯಲ್ಲಿ ಬಸ್ ಪ್ರಿಯಾರಿಟಿ ಲೇನ್ ನಿರ್ಮಾಣ

By

Published : Sep 25, 2020, 10:50 PM IST

ಬೆಂಗಳೂರು: ಸಾರ್ವಜನಿಕ ಸಂಚಾರವನ್ನು ಪ್ರೋತ್ಸಾಹಿಸಲು ಹಾಗೂ ಬಸ್ ಸಂಚಾರ ಸುಗಮವಾಗಿಸಲು ಬಿಬಿಎಂಪಿ ಬಸ್ ಪ್ರಿಯಾರಿಟಿ ಲೇನ್ ಸಿದ್ಧಪಡಿಸುತ್ತಿದೆ.

ದೇಶದಲ್ಲೇ ಪ್ರಥಮ ಬಾರಿಗೆ ಸಿಲ್ಕ್ ಬೋರ್ಡ್ ರಸ್ತೆಯಲ್ಲಿ ಬಸ್ ಪ್ರಿಯಾರಿಟಿ ಲೇನ್ ನಿರ್ಮಾಣ

ದೇಶದಲ್ಲೇ ಪ್ರಥಮ ಬಾರಿಗೆ ಬೆಂಗಳೂರು ನಗರದಲ್ಲಿ ಈ ಯೋಜನೆ ಕೈಗೆತ್ತಿಕೊಂಡಿದ್ದು, ನೂರಾರು ಜನರು ಪ್ರಯಾಣಿಸುವ ಬಸ್​ಗಳ ಸಂಚಾರಕ್ಕೆ ಅಡ್ಡಿಯಾಗದಂತೆ ಕೇವಲ ಬಸ್​ಗಳೇ ಓಡಾಡಲು ಈ ಪ್ರತ್ಯೇಕ ಬಸ್ ಪಥ ನಿರ್ಮಿಸಲಾಗುತ್ತಿದೆ.

ನಗರದ ಹೊರವರ್ತುಲ ರಸ್ತೆಯಲ್ಲಿ ಬೈಯಪ್ಪನಹಳ್ಳಿಯಿಂದ ಸಿಲ್ಕ್ ಬೋರ್ಡ್​ವರೆಗೆ 20 ಕಿಮೀ ಉದ್ದದ ರಸ್ತೆಯಲ್ಲಿ ಬಸ್ ಪಥ ನಿರ್ಮಾಣವಾಗುತ್ತಿದ್ದು, ಈ ತಿಂಗಳಾಂತ್ಯಕ್ಕೆ ಸಿದ್ಧವಾಗಲಿದೆ ಎಂದು ಆಯುಕ್ತರಾದ ಮಂಜುನಾಥ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ. ಬಿಎಂಟಿಸಿ ಹಾಗೂ ಬಿಬಿಎಂಪಿ ಸಹಯೋಗದಲ್ಲಿ ಈ ಕೆಲಸ ನಡೆಯುತ್ತಿದೆ.

ABOUT THE AUTHOR

...view details