ಕರ್ನಾಟಕ

karnataka

ETV Bharat / state

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಂವಿಧಾನ ದಿನ ಆಚರಣೆ: ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ - “Constitution Day” celebration at BBMP headquarters

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿಯಲ್ಲಿ "ಸಂವಿಧಾನ ದಿನ" ಕಾರ್ಯಕ್ರಮ ಆಚರಿಸಲಾಯಿತು.

constitution-day-celebration-at-bbmp-headquarters
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ "ಸಂವಿಧಾನ ದಿನ" ಆಚರಣೆ

By

Published : Nov 26, 2020, 10:52 PM IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ "ಸಂವಿಧಾನ ದಿನ"ದ ಅಂಗವಾಗಿ ಆಡಳಿತಗಾರರು, ಆಯುಕ್ತರು ಇಂದು ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು‌.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ "ಸಂವಿಧಾನ ದಿನ" ಆಚರಣೆ
ನಂತರ ಸಭಾಂಗಣ-1ರಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞೆ ಸ್ವೀಕರಿಸಲಾಯಿತು.
ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪನಮನ
ಈ ವೇಳೆ ವಿಶೇಷ ಆಯುಕ್ತರುಗಳಾದ ಡಿ.ರಂದೀಪ್, ರಾಜೇಂದ್ರ ಚೋಳನ್, ಜೆ.ಮಂಜುನಾಥ್,ಮನೋಜ್ ಜೈನ್, ತುಳಸಿ ಮದ್ದಿನೇನಿ, ಹಣಕಾಸು ಜಂಟಿ ಆಯುಕ್ತ ರವೀಂದ್ರ, ವೆಂಕಟೇಶ್, ಆಡಳಿತ ಉಪ ಆಯುಕ್ತರು ಲಿಂಗಮೂರ್ತಿ, ವಲಯ ಜಂಟಿ ಆಯುಕ್ತರು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ "ಸಂವಿಧಾನ ದಿನ" ಆಚರಣೆ

ABOUT THE AUTHOR

...view details