ಬೆಂಗಳೂರು : ಕೊರೊನಾ ನಿಯಮ ಉಲ್ಲಂಘನೆ ಹಿನ್ನೆಲೆ ಜಪ್ತಿ ಮಾಡಿಕೊಂಡಿದ್ದ ಬೈಕ್ನ ಸವಾರನ ಬಳಿ ಹಣ ಪಡೆದು ಬಿಟ್ಟು ಕಳುಹಿಸಿದ್ದ ಆರೋಪದಡಿ ಕಾನ್ಸ್ಟೇಬಲ್ವೊಬ್ಬರನ್ನು ಅಮಾನತು ಮಾಡಿ ನಗರ ಈಶಾನ್ಯ ವಿಭಾಗದ ಡಿಸಿಪಿ ಸಿ. ಕೆ. ಬಾಬಾ ಆದೇಶ ಹೊರಡಿಸಿದ್ದಾರೆ.
ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಅಬೂಬಕರ್ ಅಮಾನತುಗೊಂಡವರು. ಲಾಕ್ಡೌನ್ ಹಿನ್ನೆಲೆ ವಾಹನ ತಪಾಸಣೆಗಾಗಿ ಒಳಪಡಿಸಲು ಮೇ 23 ರಂದು ಹೆಗಡೆ ನಗರ ಸರ್ಕಲ್ ಬಳಿ ಮೇಲಾಧಿಕಾರಿಗಳು ಅವರನ್ನು ಕರ್ತವ್ಯಕ್ಕೆ ನಿಯೋಜಿಸಿದ್ದರು.
ಈ ವೇಳೆ ಅನಗತ್ಯ ಸಂಚಾರ ನಡೆಸುತ್ತಿದ್ದ ಇಮ್ರಾನ್ ಪಾಷಾ ಎಂಬುವರ ಸುಜುಕಿ ಬೈಕ್ ತಡೆದು ಮುಟ್ಟುಗೋಲು ಹಾಕಿಕೊಂಡಿದ್ದರು.