ಬೆಂಗಳೂರು:ನೇಮಕಾತಿ ಆದೇಶ ಹೊರಬೀಳುವ ಮುನ್ನವೇ ಖಾಕಿ ಸಮವಸ್ತ್ರ ಧರಿಸಿ ಶಿಸ್ತು ಉಲ್ಲಂಘಿಸಿದ್ದ ಪೊಲೀಸ್ ಕಾನ್ಸ್ಟೇಬಲ್ನನ್ನು ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಅಮಾನತು ಮಾಡಿದ್ದಾರೆ. ವಿವೇಕನಗರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಬಸನಗೌಡ ಕರೇಗೌಡ ಅಮಾನತುಗೊಂಡಿದ್ದಾರೆ. ಇತ್ತೀಚೆಗೆ ನಡೆದ ಪಿಎಸ್ಐ ಪರೀಕ್ಷೆಯಲ್ಲಿ ಬಸನಗೌಡ ಆಯ್ಕೆಯಾಗಿದ್ದರು.
ಪಿಎಸ್ಐ ಸಮವಸ್ತ್ರ ಧರಿಸಿದ್ದ ಕಾನ್ಸ್ಟೇಬಲ್ ಸಸ್ಪೆಂಡ್ - Constable of Vivekanagar Police Station basanagowda karegowda
ವಿವೇಕನಗರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಬಸನಗೌಡ ಕರೇಗೌಡ ಅಮಾನತುಗೊಂಡಿದ್ದಾರೆ. ಪಿಎಸ್ಐ ನೇಮಕಾತಿ ಆದೇಶ ಪ್ರತಿ ಸಿಗುವ ಮೊದಲೇ ಸಮವಸ್ತ್ರ ಧರಿಸಿ ಊರಿನಲ್ಲಿ ಪ್ರಚಾರ ಗಿಟ್ಟಿಸಿಕೊಂಡಿದ್ದರಿಂದ ಸಸ್ಪೆಂಡ್ ಮಾಡಲಾಗಿದೆ.
ವಿವೇಕನಗರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಬಸನಗೌಡ ಕರೇಗೌಡ
ನೇಮಕಾತಿ ಆದೇಶ ಪ್ರತಿ ಸಿಗುವ ಮೊದಲೇ ಸಮವಸ್ತ್ರ ಧರಿಸಿ ಊರಿನಲ್ಲಿ ಪ್ರಚಾರ ಗಿಟ್ಟಿಸಿಕೊಂಡಿದ್ದರು. ಕಾನ್ಸ್ಟೇಬಲ್ ಹುದ್ದೆಗೆ ರಾಜೀನಾಮೆ ನೀಡದೆ, ಪಿಎಸ್ಐ ಬಟ್ಟೆ ಧರಿಸಿದ್ದರು. ಪೊಲೀಸ್ ನಿಯಮಾವಳಿಯನ್ನು ಉಲ್ಲಂಘನೆ ಮಾಡಿದ್ದರಿಂದ ಸಸ್ಪೆಂಡ್ ಮಾಡಲಾಗಿದೆ.
ಇದನ್ನೂ ಓದಿ:ಪಿಎಸ್ಐ ಅಕ್ರಮದಲ್ಲಿ ಡಿವೈಎಸ್ಪಿ ಸಾಲಿ, ಸಿಪಿಐ ಮೇತ್ರೆ ಬಂಧನ: ಇವರ ಪಾತ್ರವೇನು ಗೊತ್ತಾ?