ಕರ್ನಾಟಕ

karnataka

ETV Bharat / state

ಕಾಶ್ಮೀರಿ ಟೆಕ್ಕಿ ಪಾಲಿಗೆ ಆಪತ್ಬಾಂಧವನಾದ ಪೊಲೀಸ್ ಪೇದೆ - ಬೆಂಗಳೂರಲ್ಲಿ ಕೆಲಸ ಗಿಟ್ಟಿಸಿಕೊಂಡ ಕಾಶ್ಮೀರಿ ಟೆಕ್ಕಿ

ಕಾಶ್ಮೀರಿ ಟೆಕ್ಕಿ ಪಾಲಿಗೆ ಪೊಲೀಸ್ ಪೇದೆಯೊಬ್ಬರು ಆಪತ್ಬಾಂಧನಾಗಿದ್ದಾರೆ. ಪೇದೆಯೊಬ್ಬರ ಜವಾಬ್ದಾರಿಯುತ ಸಹಾಯದಿಂದ ಯುವತಿಗೆ ಬೆಂಗಳೂರಿನಲ್ಲಿ ಕೆಲಸ‌ ದೊರೆಯುವಂತಾಗಿದೆ.

kashir techie got job in bengaluru, ಕಾಶ್ಮೀರಿ ಟೆಕ್ಕಿಗೆ ಬೆಂಗಳೂರು ಪೇದೆ ಸಹಾಯ
ಕಾಶ್ಮೀರಿ ಟೆಕ್ಕಿ ಪಾಲಿಗೆ ಆಪತ್ಬಾಂಧವನಾದ ಪೊಲೀಸ್ ಪೇದೆ

By

Published : Jan 10, 2020, 4:23 AM IST

ಬೆಂಗಳೂರು:ಕಾಶ್ಮೀರಿ ಟೆಕ್ಕಿ ಪಾಲಿಗೆ ಪೊಲೀಸ್ ಪೇದೆಯೊಬ್ಬರು ಆಪತ್ಬಾಂಧನಾಗಿದ್ದಾರೆ. ಇವರ ಜವಾಬ್ದಾರಿಯುತ ಸಹಾಯದಿಂದ ಯುವತಿಗೆ ಬೆಂಗಳೂರಲ್ಲಿ ಕೆಲಸ‌ ಸಿಕ್ಕಿದೆ.

ಕೆಲ ದಿನಗಳ ಹಿಂದೆ ಮರಿಯಾ ಎಂಬುವರು ಕೆಲಸ ಅರಿಸಿಕೊಂದು ಕಾಶ್ಮೀರದಿಂದ ಬೆಂಗಳೂರಿಗೆ ಬಂದಿದ್ದು, ಮಾನ್ಯತಾ ಟೆಕ್ ಪಾರ್ಕ್​ನ ಖಾಸಗಿ ಕಂಪನಿಗೆ ಸಂದರ್ಶನಕ್ಕೆ ತೆರಳಿದ್ದರು. ಈ ವೇಳೆ ಸಂದರ್ಶನಕ್ಕೆ ಹೋಗುವ ತರಾತುರಿಯಲ್ಲಿ ಮಾರ್ಕ್ಸ್ ಕಾರ್ಡ್ಸ್, ಆಧಾರ್ ಕಾರ್ಡ್, ಪಾಸ್ ಪೊರ್ಟ್ ಸಮೇತವಿದ್ದ ಬ್ಯಾಗ್ ಅನ್ನು ಕಳೆದುಕೊಂಡಿದ್ದರು.

ಇದೇ ವೇಳೆ ಮಾನ್ಯತಾ ಟೆಕ್ ಪಾರ್ಕ್ ಬಳಿ ಗಸ್ತಿನಲ್ಲಿದ್ದ ಸಂಪಿಗೆಹಳ್ಳಿ ಠಾಣೆಯ ಪೊಲೀಸ್ ಪೇದೆ ಸದಾಶಿವ ಬೆಳಗಲಿ ಎಂಬುವವರು ಯುವತಿ ಕಳೆದುಕೊಂಡಿದ್ದ ಬ್ಯಾಗ ಅನ್ನು ಸ್ಥಳೀಯರಿಗೆ ನೀಡಿದ್ದರು. ಯುವತಿಯ ಫೊನ್ ನಂಬರ್ ಸಿಗದೇ ಅಕ್ಕಪಕ್ಕದ ಠಾಣೆಗಳಿಗೆ ಮಾಹಿತಿ ನೀಡಿದ್ದ ಪೇದೆ, ಮರುದಿನ ಯುವತಿ 'ಇ-ಲಾಸ್ಟ್​​ ಮೊಬೈಲ್ ಅಪ್ಲಿಕೇಷನ್' ಮೂಲಕ ದೂರು ದಾಖಲಿಸಿದ್ದನ್ನು ತಿಳಿದು ಆಕೆಗೆ ಕರೆ ಮಾಡಿ ದಾಖಲಾತಿಗಳನ್ನ ಹಿಂದಿರುಗಿಸಿದ್ದರು.

ಹೀಗೆ, ಕಳೆದುಕೊಂಡಿದ್ದ ದಾಖಲಾತಿಗಳ ಮೂಲ ಪ್ರತಿಗಳನ್ನು ಸಲ್ಲಿಸಿದ ಬಳಿಕ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾಳೆ. ನಂತರ ಸಂಪಿಗೆಹಳ್ಳಿ ಠಾಣೆ ಪೊಲೀಸರ ಸಹಾಯಕ್ಕೆ ಕಾಶ್ಮೀರಿ ಯುವತಿಯ ಧನ್ಯವಾದ ತಿಳಿಸಿದ್ದಾಳೆ.

ABOUT THE AUTHOR

...view details