ಬೆಂಗಳೂರು: ಕೊರೊನಾ ಸೋಂಕಿನಿಂದ ಗುಣಮುಖರಾಗಿ ಹೊರಬಂದು ಪ್ಲಾಸ್ಮಾ ದಾನ ಮಾಡಬೇಕೆಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮನವಿ ಬೆನ್ನಲ್ಲೇ ಕೆಎಸ್ ಆರ್ ಪಿ ಪೊಲೀಸ್ ಕಾನ್ಸ್ ಟೇಬಲ್ ರೊಬ್ಬರು ಪ್ಲಾಸ್ಮಾ ದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಕೊರೊನಾ ಗೆದ್ದು ಬಂದು ಪ್ಲಾಸ್ಮಾ ದಾನ ಮಾಡಿದ ಕಾನ್ಸ್ಟೇಬಲ್ - Bangalore latest news
ಕೆಎಸ್ ಆರ್ ಪಿ ಕಾನ್ಸ್ ಟೇಬಲ್ ರೊಬ್ಬರು ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಸದ್ಯ ತಮ್ಮ ಪ್ಲಾಸ್ಮಾವನ್ನು ಸೋಂಕಿತರ ಚಿಕಿತ್ಸೆಗೆಂದು ದಾನ ಮಾಡಿದ್ದಾರೆ.

ಕೆಎಸ್ ಆರ್ ಪಿ ಕಾನ್ಸ್ ಟೇಬಲ್ ವೀರಭದ್ರಯ್ಯ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಏಳು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ, ಬಳಿಕ ಹೋಮ್ ಕ್ವಾರಂಟೈನ್ ನಲ್ಲಿದ್ದರು. ಸದ್ಯ ತಮ್ಮ ಪ್ಲಾಸ್ಮಾವನ್ನು ಸೋಂಕಿತರ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾನ ಮಾಡಿದ್ದಾರೆ. ಕೆಎಸ್ ಆರ್ ಪಿಯಲ್ಲಿ ಕಾರ್ಯನಿರ್ವಹಿಸಿ ಸೋಂಕಿನಿಂದ ಗುಣಮುಖರಾಗಿರುವ 9 ಮಂದಿ ಸಿಬ್ಬಂದಿ ಪ್ಲಾಸ್ಮಾ ದಾನ ಮಾಡಲು ಮುಂದೆಬಂದಿದ್ದಾರೆ.
ಪ್ಲಾಸ್ಮಾ ಸ್ವೀಕರಿಸುತ್ತಿರುವ ಖಾಸಗಿ ಆಸ್ಪತ್ರೆಗೆ ಎರಡು ಷರತ್ತು ವಿಧಿಸಲಾಗಿದೆ. ಬಡ ರೋಗಿಗಳಿಗೆ ದುಬಾರಿ ಶುಲ್ಕ ವಿಧಿಸದಿರುವುದು ಹಾಗೂ ಪ್ಲಾಸ್ಮಾವನ್ನು ಬಡ ರೋಗಿಗಳಿಗೆ ಮಾತ್ರ ಹಾಕಬೇಕೆಂದು ರಾಜ್ಯ ಪೊಲೀಸ್ ಇಲಾಖೆಯ ಎಡಿಜಿಪಿ ಅಲೋಕ್ ಕುಮಾರ್ ತಾಕೀತು ಮಾಡಿದ್ದಾರೆ.