ಬೆಂಗಳೂರು: ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಿನ್ನೆ ಲಾಕ್ಡೌನ್ ಜಾರಿಯಲ್ಲಿತ್ತು. ಈ ವೇಳೆ ರಸ್ತೆಗಿಳಿದಿದ್ದ ಸಚಿವರ ಕಾರನ್ನ ಕಾನ್ಸ್ಟೇಬಲ್ ತಡೆದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಲಾಕ್ಡೌನ್ ನಡುವೆ ರಸ್ತೆಗಿಳಿದ ಸಚಿವರ ಕಾರು ತಡೆದ ಕಾನ್ಸ್ಟೇಬಲ್... ವಿಡಿಯೋ ವೈರಲ್!
ಬೆಂಗಳೂರಿನಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಕೆ.ಆರ್.ಮಾರ್ಕೆಟ್ ರಸ್ತೆ ಬಂದ್ ಮಾಡಲಾಗಿತ್ತು. ಈ ವೇಳೆ ಕಂದಾಯ ಸಚಿವ ಆರ್.ಅಶೋಕ್ ಅವರ ಕಾರು ಇದೇ ಮಾರ್ಗವಾಗಿ ಬಂದಿದ್ದು, ಸಂಚಾರಿ ಪೊಲೀಸ್ ಸಿಬ್ಬಂದಿ ಮಾಹಿತಿ ಮೇರೆಗೆ ವಾಪಸ್ ಹೋಗಿದ್ದಾರೆ.
ಲಾಕ್ಡೌನ್ ಹಿನ್ನೆಲೆ ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ವಾಹನ ಸಂಚಾರ ನಿಷೇಧ ಮಾಡಲಾಗಿತ್ತು. ಈ ವೇಳೆ ಕಂದಾಯ ಸಚಿವ ಆರ್.ಅಶೋಕ್ ಅವರ ಕಾರು ಕೆ.ಆರ್.ಮಾರ್ಕೆಟ್ ಫ್ಲೈ-ಓವರ್ ಹತ್ತಿರ ಬಂದಿದೆ. ರಸ್ತೆ ಬಂದ್ ಮಾಡಿ ಬ್ಯಾರಿಕೇಡ್ ಹಾಕಿದ್ದ ಕಾನ್ಸ್ಟೇಬಲ್ ದಾರಿ ಬಿಡುವಂತೆ ಸಚಿವರ ಪಿಎ ಹೇಳಿದ್ದಾರೆ.
ಲಾಕ್ಡೌನ್ನಿಂದಾಗಿ ಮಾರ್ಕೆಟ್ ರಸ್ತೆ ಬಂದ್ ಮಾಡಲಾಗಿದೆ. ಹೋಗುವುದಕ್ಕೆ ಸಾಧ್ಯವಿಲ್ಲ ಎಂದು ಕಾನ್ಸ್ಟೇಬಲ್ ಹೇಳಿದ್ದರಿಂದ ಸಚಿವ ಆರ್.ಅಶೋಕ್ ಕಾರು ಯೂಟರ್ನ್ ಮಾಡಿ ವಾಪಸ್ ಹೋಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕಾರ್ಯಕ್ಕೆ ಶಹಬ್ಬಾಸ್ಗಿರಿ ವ್ಯಕ್ತವಾಗಿದೆ.